ಪ್ರೋ ಬಿ.ಕೃಷ್ಣಪ್ಪ ದೇಶ ಕಂಡ ಮಹಾನ್ ಹೋರಾಟಗಾರ: ನಾಗಣ್ಣ ಬಡಿಗೇರ

0
63

ಸುರಪುರ: ಇಂದು ನಮಗೆಲ್ಲ ಮಾದರಿಯಾದವರು ಮತ್ತು ನಮ್ಮ ಹೋರಾಟದ ಹಿಂದಿನ ಶಕ್ತಿಯಾಗಿದ್ದವರು ಪ್ರೋ ಬಿ.ಕೃಷ್ಣಪ್ಪನವರು.ಅವರು ಈ ದೇಶ ಕಂಡ ಮಹಾನ್ ಹೋರಾಟಗಾರರಾಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಉಪ ಸಂಚಾಲಕ ನಾಗಣ್ಣ ಬಡಿಗೇರ ಮಾತನಾಡಿದರು.

ನಗರದ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಮತ್ತು ತಾಲೂಕು ಘಟಕದಿಂದ ಹಮ್ಮಕೊಂಡಿದ್ದ ಪ್ರೋ ಬಿ.ಕೃಷ್ಣಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ,ಪ್ರೋ ಬಿ.ಕೃಷ್ಣಪ್ಪನವರು ದಲಿತರ ಪಾಲಿನ ಶಕ್ತಿ ಡಾ: ಬಾಬಾ ಸಾಹೇಬ್ ಅಂಬೇಡ್ಕರರ ಆದರ್ಶವನ್ನು ನಮಗೆಲ್ಲ ಧಾರೆ ಎರೆದು ನಮ್ಮಲ್ಲಿ ಹೋರಾಟದ ಕೆಚ್ಚನ್ನು ಮತ್ತು ದಲಿತರ ಏಳಿಗೆಗೆ ಛಲವನ್ನು ಮೂಡಿಸಿದ್ದಾರೆ.ಇಂದು ನಾವು ಅವರ ಜನ್ಮ ದಿನಾಚರಣೆ ಅಂಗವಾಗಿ ಇಡೀ ದಿನ ವಿಚಾರ ಸಂಕಿರಣದ ಮೂಲಕ ಸ್ಮರಿಸುವುದು ಸಂತೋಷದಾಯಕವಾಗಿದೆ ಎಂದರು.

Contact Your\'s Advertisement; 9902492681

ವಿಭಾಗಿಯ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿ,ಇಂದು ದೇಶ ಸಂದೀಗ್ಧ ಸ್ಥಿತಿಯಲ್ಲಿದೆ.ದೇಶದಲ್ಲಿ ದಲಿತರ ಮೇಲೆ ನಿತ್ಯವು ಹಲ್ಲೆಗಳು ನಡೆಯುತ್ತಿವೆ.ಇವುಗಳಿಗೆ ಸರಕಾರಗಳು ಕಡಿವಾಣ ಹಾಕದೆ ನಿರ್ಲಕ್ಷ್ಯ ತೋರಿವೆ.ಆದ್ದರಿಂದ ಇಂದು ನಾವೆಲ್ಲ ಎಚ್ಚೆತ್ತುಕೊಳ್ಳುವ ಮೂಲಕ ಡಾ: ಬಾಬಾ ಸಾಹೇಬ್ ಅಂಬೇಡ್ಕರರು ಮತ್ತು ಪ್ರೋ ಬಿ.ಕೃಷ್ಣಪ್ಪನವರು ಹಾಕಿಕೊಟ್ಟ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಬುದ್ಧನ ಮೂರ್ತಿಗೆ ಪೂಜೆ ಸಲ್ಲಿಸಿ ಧಮ್ಮ ಗೀತೆಯೊಂದಿಗೆ ಚಾಲನೆ ನೀಡಲಾಯಿತು.ನಂತರ ಪ್ರೋ ಬಿ.ಕೃಷ್ಣಪ್ಪನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳಿಸಲಾಯಿತು.ನಂತರ ಸಮಿತಿಯ ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ,ಎಲ್ಲರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮೂಲನಿವಾಸಿ ಅಂಬೇಡ್ಕರ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಹಲಿಮನಿ ಹಾಗು ಸಮಿತಿಯ ಜಿಲ್ಲಾ ಸಂಚಾಲಕ ಹಣಮಂತ ಹೊಸ್ಮನಿ,ಜಿಲ್ಲಾ ಸಂಘಟನಾ ಸಂಚಾಲಕರಾದ ಮರಳಸಿದ್ದಪ್ಪ ನಾಯ್ಕಲ್,ಭೀಮರಾಯ ಬಳಿಚಕ್ರ,ಈಶ್ವರ ರೋಜಾ,ಅಶೋಕ ನಾಯ್ಕಲ್,ರಾಜು ದೊಡ್ಮನಿ ಹಾಗು ತಾಲೂಕು ಸಂಘಟನಾ ಸಂಚಾಲಕ ಶರಣಪ್ಪ ತಳವಾರಗೇರಾ,ಮಲ್ಲಿಕಾರ್ಜುನ ಮುಷ್ಠಳ್ಳಿ,ವಿಶ್ವನಾಥ ಹೊಸ್ಮನಿ,ಮಲ್ಲಿಕಾರ್ಜುನ ಕೆಸಿಪಿ,ವಡಗೇರಾ ತಾಲೂಕು ಸಂಚಾಲಕ ಜೈನಾಗ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here