ತಾಂತ್ರಿಕ ನೈಪುಣ್ಯತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಅಶೋಕ ಪಾಟೀಲ್

0
87

ಕಲಬುರಗಿ: ಅಭಿವೃದ್ಧಿ ಪರ ರಾಷ್ಟ್ರಗಳು ತಾಂತ್ರಿಕವಾಗಿ ನೈಪುಣ್ಯತೆ ಹೊಂದಬೇಕು ಹಾಗೂ ಆ ನಿಟ್ಟಿನಲ್ಲಿ ತಮ್ಮ ಕಾರ್ಯಚಟುವಟಿಕೆಗಳು ಕ್ರೂಢಿಸಿಕೊಳ್ಳಬೇಕು. ಆರೋಗ್ಯ, ಕೃಷಿ, ವ್ಯವಹಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಐಓಟಿ ಹಾಗೂ ಟೆಲಿಸಂಪರ್ಕದ ತಾಂತ್ರಿಕತೆ ಅಳವಡಿಸಿಕೊಂಡು ಪ್ರತಿಯೋಬ್ಬ ನಾಗರಿಕರಿಗೆ ಅನುವು ಮಾಡಿಕೊಡಬೇಕೆಂದು ಪಿ.ಡಿ.ಎ. ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಉಪ-ಪ್ರಾಧ್ಯಾಪಕ ಅಶೋಕ ಪಾಟೀಲ್ ತಮ್ಮ ಅಭಿಪ್ರಾಯ ಮಂಡಿಸಿದರು.

ಇನಸ್ಟೀಟ್ಯೂಟ್ ಆಫ್ ಇಂಜಿನಿಯರ್ ನಲ್ಲಿ ವಿಶ್ವ ಟೆಲಿಸಂಪರ್ಕ ಮತ್ತು ಮಾಹಿತಿ ಸಂಸ್ಥೆ ದಿನಾಚರಣೆ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕಾರಗಿ ಅಗಮಿಸಿ ಮಾತನಾಡಿದ ಅವರು ಟೆಲಿಸಂಪರ್ಕದ ಸಾಧನೆ ಅಡಕು ತೊಡಕುಗಳು ಸಮಗ್ರ ಮಾಹಿತಿಯನ್ನು ನೀಡಿದರು.

Contact Your\'s Advertisement; 9902492681

ಮೇ 17ನ್ನು ವಿಶ್ವ ಟೆಲಿಸಂಪರ್ಕ ಮತ್ತು ಮಾಹಿತಿ ದಿನ ಎಂದು ಪರಿಗಣಿಸಲ್ಪಟ್ಟಿದ್ದು ಪ್ರಸ್ತತ ೫೦ನೇ ವರ್ಷಾಚರಣೆ ಆಚರಿಸಲಾಗುತ್ತಿದೆ.

ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ್‌ನ ಚೇರಮನ್ ಇಂಜಿನಿಯರ್ ಬಿ.ಎಸ್. ಮೋರೆ ಅವರು ಮಾತನಾಡಿ ಭಾರತದಲ್ಲಿ ಟೆಲಿಸಂಪರ್ಕ ಸಂಸ್ಥೇಯ ಮಹತ್ವ ಹಾಗೂ ಸಾಧನೆಗಳನ್ನು ತಿಳಿಸಿದರು. ಸನ್ಮಾನ್ಯ ಕಾರ್ಯದರ್ಶಿಗಳಾದ  ಡಾ.ಬಾಬುರಾವ ಎನ್. ಸೇರಿಕಾರ ಮಾತನಾಡಿ ಅಭಿವೃದ್ಧಿ ಪರ ರಾಷ್ಟ್ರಗಳು ಇದರ ಸದುಪಯೋಗ ಪಡೆದುಕೊಂಡು ತಾಂತ್ರಿಕವಾಗಿ ಸಬಲೀಕರಣಗೊಳ್ಳಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ್‌ನ ಚುನಾಯಿತ ಸದಸ್ಯರಾದ ಹಾಗೂ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಭಾರತಿ ಹರಸೂರ ಅವರು ಮುಂಬರು ದಿನಗಳಲ್ಲಿ ತಮ್ಮ ವಿಭಾಗದಲ್ಲೂ ಕೂಡ ಟೆಲಿಸಂಪರ್ಕದ ಮಹತ್ವ ಮತ್ತು ತಾಂತ್ರಿಕತೆಯ ಸುಧಾರಿಕರಣ ಕುರಿತು ಹಲವಾರು ಉಪನ್ಯಾಸಗಳನ್ನು ಏರ್ಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ್‌ನ ಸದಸ್ಯರುಗಳಾದ ಇಂಜಿನಿಯರ ಜಿ. ಅರ್. ಮುತ್ತಗಿ, ಎಂ.ಎಂ. ಕಾಡಾದಿ, ಡಾ. ಪ್ರಭುದೇವ ಮಹಾದೇವಪ್ಪ, ಮತ್ತು ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here