ಸಹಕಾರಿ ಬ್ಯಾಂಕುಗಳ ಆರ್‌ ಬಿ ಐ ಮೇಲುಸ್ತುವಾರಿ: ಗ್ರಾಹಕರಲ್ಲಿ ಹೆಚ್ಚಲಿರುವ ವಿಶ್ವಾಸ: ವೆಂಕಟರಾಮರೆಡ್ಡಿ

0
113

ಬೆಂಗಳೂರು: ದೇಶದಲ್ಲಿರುವ ನಗರ ಸಹಕಾರಿ ಬ್ಯಾಂಕುಗಳು ಹಾಗೂ ಅಂತರರಾಜ್ಯ ಸಹಕಾರಿ ಬ್ಯಾಂಕುಗಳನ್ನು ಆರ್‌ ಬಿ ಐ ನ ಮೇಲುಸ್ತುವಾರಿ ವ್ಯಾಪ್ತಿಗೆ ಸುಗ್ರೀವಾಜ್ಞೇಯ ಮೂಲಕ ತರುವ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸರಕಾರದ ಸಚಿವ ಸಂಪುಟದ ನಿರ್ಧಾರ ಶ್ಲಾಘನೀಯ ಎಂದು ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪಿ ಎಲ್‌ ವೆಂಕಟರಾಮ ರೆಡ್ಡಿ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಕೇಂದ್ರ ಸರಕಾರದ ಈ ನಿರ್ಧಾರದಿಂದ ಗ್ರಾಹಕರಲ್ಲಿ ಸಹಕಾರ ಬ್ಯಾಂಕುಗಳ ಬಗ್ಗೆ ಇನ್ನೂ ಹೆಚ್ಚಿನ ನಂಬಿಕೆ ಇಟ್ಟು ಸಹಕಾರ ಬ್ಯಾಂಕುಗಳಲ್ಲಿ ಠೇವಣಿಗಳನ್ನು ಇಡಲು ಮತ್ತು ಗ್ರಾಹಕರ ಹಿತಕಾಪಾಡುವ ಉದ್ದೇಶವಾಗಿದೆ. ಇದು ಗ್ರಾಹಕರಿಗೆ ಅತಿ ಅನುಕೂಲಕರ ಮತ್ತು ಪ್ರಯೋಜನಕರವಾಗಲಿದೆ. ಇದರಿಂದ ದೇಶದ ಎಲ್ಲಾ ಬ್ಯಾಂಕುಗಳು ಸರಿಸಮನಾಗಿರುವುದೆಂದು ಗ್ರಾಹಕರಲ್ಲಿ ನಂಬಿಕೆ ಬರಲಿದೆ. ಅಲ್ಲದೆ ಸಹಕಾರ ಬ್ಯಾಂಕುಗಳಲ್ಲಿ ವಿಶ್ವಾಸವಿಟ್ಟು ಯಾವುದೇ ಥರಹದ ಭಯವಿಲ್ಲದೆ ವ್ಯವಹಾರ ಮಾಡುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ನಿರ್ಧಾರದಿಂದಾಗಿ ಸಹಕಾರ ಬ್ಯಾಂಕುಗಳು ಸುಭಧ್ರವಾಗಿರುತ್ತವೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಂತೆ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕಾರ್ಯನಿರ್ವಹಿಸುವುದು ಹಾಗೂ ಸಹಕಾರಿ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಇನ್ನೂ ಉತ್ತಮ ಸೇವಾ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗಿರಲಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here