” AIDYO 54ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ 

0
26

ಕಲಬುರಗಿ: “ಜ್ವಲಂತ ಸಾಮಾಜಿಕ ಸಮಸ್ಯೆಗಳ ವಿರುದ್ಧ  ಹೋರಾಡಲು  ಯುವಜನತೆ ಜಾತಿ-ಧರ್ಮ ಪಕ್ಕಕ್ಕಿಟ್ಟು ಹೋರಾಡಲು ಮುಂದೆ ಬರಬೇಕೆಂದು ಎಂದು ಎ.ಐ. ಡಿ.ವೈ.ಓ  ನ  ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ನಿಂಗಣ್ಣ ಜಂಬಗಿ  ಅಭಿಪ್ರಾಯಪಟ್ಟರು.

ಅವರು ನಗರದ ಜಿಲ್ಲಾ  ಎ. ಐ. ಡಿ. ವೈ. ಓ ಸಮಿತಿ ಹಮ್ಮಿಕೊಂಡಿದ್ದ ಸಂಘಟನೆಯ 54ನೇ ಸಂಸ್ಥಾಪನಾ  ದಿನಾಚರಣೆ ಅಂಗವಾಗಿ ಧ್ವಜಾರೋಹಣ  ನೆರವೇರಿಸಿ ಮತ್ತು ಕಾರ್ಯಕ್ರಮದಲ್ಲಿ ಮಾತನಾಡಿದ್ದರು.

Contact Your\'s Advertisement; 9902492681

ಕಳೆದ 54 ವರ್ಷಗಳ ಹಿಂದೆ ನಮ್ಮ ಯುವಜನ ಸಂಘಟನೆ AIDYO ಆರಂಭಗೊಂಡಿತ್ತು. ಯುವಜನರಲ್ಲಿ ಉನ್ನತ ನೀತಿ, ನೈತಿಕತೆಯನ್ನು ಬೆಳೆಸಲು ಮತ್ತು  ಅವರ ಸಮಸ್ಯೆಗಳಾದ ನಿರುದ್ಯೋಗ, ಸಾಂಸ್ಕೃತಿಕ ಅಧಃಪತನ ಹಾಗೂ  ಕೋಮುವಾದದ ವಿರುದ್ಧ ಹೋರಾಡುವ ಸ್ಪೂರ್ತಿಯನ್ನು  ಹಬ್ಬಿಸುವ ಉದ್ದೇಶದೊಂದಿಗೆ  ದೇಶದ ಏಕೈಕ ಕ್ರಾಂತಿಕಾರಿ ಯುವಜನ ಸಂಘಟನೆಯಾಗಿ AIDYO ಜನ್ಮ ತಾಳಿತು  ಎಂದರು.

ಈ ಯುಗದ ಮಹಾನ್ ಮಾರ್ಕ್ಸ್ವಾದಿ ಚಿಂತಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾದ ಶಿವದಾಸ್ ರವರ ಮಾರ್ಗದರ್ಶನದಂತೆ ಕೆಲವು ಯುವ ಕ್ರಾಂತಿಕಾರಿಗಳ ಮುಂದಡೊಡಗಿನಿಂದ ಪ್ರಾರಂಭಗೊಂಡ ಸಂಘಟನೆ  ಇಂದು ದೇಶದಾದ್ಯಂತ 24 ಕ್ಕೂ ಹೆಚ್ಚು ರಾಜ್ಯಗಳಲ್ಲಿ ತನ್ನ ಚಟುವಟಿಕೆ ನಡೆಸುತ್ತಿರುವುದು ಸಂತೋಷವೆಂದರು.

ನಮ್ಮ ಜಿಲ್ಲೆಯಲ್ಲಿ ಕಳೆದ 35 ವರ್ಷಗಳಿಂದ ಹಲವಾರು ವಿದ್ಯಾರ್ಥಿ – ಯುವ ಜನರ ಸಮಸ್ಯೆಗಳಿಗೋಸ್ಕರ ಮಹಾನ್ ವ್ಯಕ್ತಿಗಳ ಕಾರ್ಯಕ್ರಮ,  ಸಾಂಸ್ಕೃತಿಕ ಮತ್ತು ಸಾಮಾಜಿಕ   ಕಾರ್ಯಕ್ರಮಗಳು  ಸೇರಿದಂತೆ D.ed, B.ed, ITI, DIPLOMA, Engineering ಮತ್ತು ಹಾಸ್ಟೆಲ್ ಸಮಸ್ಯೆ, ಖಾಲಿ ಹುದ್ದೆ ಭರ್ತಿಗಾಗಿ, ಅತಿಥಿ ಉಪನ್ಯಾಸಕರ ಮತ್ತು  ಅತಿಥಿ ಶಿಕ್ಷಕರು ಹೋರಾಟದಂತೆ ಅನೇಕ ಹೋರಾಟಗಳನ್ನು ಮಾಡಿ ಯಶಸ್ವಿ ಸಾಧಿಸಿದೆ. ಎಂದು ಹೇಳಿದರು.

ವಿದ್ಯಾರ್ಥಿ ಯುವಜನರಲ್ಲಿ ವೈಚಾರಿಕ ಮತ್ತು ಸಾಂಸ್ಕೃತಿಕ ಮೊಟ್ಟ ಬೆಳೆಸುವಲ್ಲಿ ನಮ್ಮ ಸಂಘಟನೆ ಯಾವತ್ತೂ ಕೂಡ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್,  ನೇತಾಜಿ ಸುಭಾಷ್ ಚಂದ್ರ ಬೋಸ್ ರಂತಹ ಮಹಾನ್ ವ್ಯಕ್ತಿಗಳ ಜೀವನ ಹೋರಾಟ ಮತ್ತು ಆದರ್ಶವನ್ನು ವಿದ್ಯಾರ್ಥಿ ಯುವಜನರು ಈ ಸಂದರ್ಭದಲ್ಲಿ ಬೆಳೆಸಿಕೊಳ್ಳಲು ಪಣತೊಡಬೇಕು. ನಮ್ಮ ಸಂಘಟನೆ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗೆ ಬಲಗೊಳಿಸಲು ಮುಂದೆ ಬರಬೇಕು. ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಈಶ್ವರ್ ಇ. ಕೆ., ಪುಟ್ಟರಾಜ್ ಲಿಂಗಶೆಟ್ಟಿ, ಮಲ್ಲಿಕಾರ್ಜುನ ಧರಿಯಾಪೂರ್, ಕೃಷ್ಣ ಸರಡಗಿ, ಅಂಬಿಕಾ ಗುತ್ತೇದಾರ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here