ಕಲಬುರಗಿ: ಸಾರಿಗೆ ಪಾಸ್ ಗಾಗಿ ಇ ಪೇಮಿಂಟ್ ವ್ಯವಸ್ಥೆಗೆ ಚಾಲನೆ

0
97

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರ್ಗಿ ವಿಭಾಗ2 ರ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಕೊರೋನಾ ವೈರಸ್ ಹರಡುತ್ತಿರುವ ಕಾರಣ  ಮಾಸಿಕ ಪಾಸ್ ಹಾಗೂ ಮುಂಗಡ ಕಾಯ್ದಿರಿಸುವಿಕೆಗೆ   ನಗದು ರಹಿತ  e-payment  QR code ನ್ನು ಮುಖ್ಯ ಸಂಚಾರ ವ್ಯವಸ್ಥಾಪಕರಾದ ಡಿ ಕೋಟ್ರಪ್ಪ ಹಾಗೂ ಉಪ ಮುಖ್ಯ ಲೆಕ್ಕಾಧಿಕಾರಿ ಗಳಾದ ಶ್ರೀದೇವಿ ಉದ್ಘಾಟಿಸಿದರು.

Contact Your\'s Advertisement; 9902492681

ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ತಿಮ್ಮಾರೆಡ್ಡಿ ಹೀರಾ, ವಿಭಾಗೀಯ ಸಂಚಾರ ಅಧಿಕಾರಿಗಳಾದ ಬೈಲಪ್ಪ ಬಿರಾದಾರ, ಲೆಕ್ಕಾಧಿಕಾರಿ ಮಹಾಂತೇಶ ಕರಾಳೆ, ಮಲ್ಲಿಕಾರ್ಜುನ ಜೋಗೂರ, ಆಡಳಿತಾಧಿಕಾರಿ ಗುರುಲಿಂಗಪ್ಪ ಫರತಾಬಾದ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಿದ್ದಣ್ಣ ಸಿಕೇದ ಕೋಳಕೂರ ಹಾಗೂ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here