ಜೇವರ್ಗಿ: 2019-20 ಸಾಲಿನ SDP ಯೋಜನೆ ಅಡಿಯಲ್ಲಿ ಸುಮಾರು 3 ಕೋಟಿ 65 ಲಕ್ಷ ಅಂದಾಜು ವೆಚ್ಚದಲ್ಲಿ ಜೇವರ್ಗಿಯ ಕೋನ ಹಿಪ್ಪರಗಾ ಯಿಂದ ಕೂಡಿ ದರ್ಗಾ ವರೆಗೆ 3.5 ಕಿಲೋ ಮೀ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರಾದ ಡಾ.ಅಜಯ್ ಸಿಂಗ್ ಅವರು ಅಡಿಗಲ್ಲು ನೆರವೇರಿಸಿದರು. ಈ ಸಂದರ್ಭದಲ್ಲಿ ಕೂಡಿ ,ಕೋಳಕೂರ ಹಾಗೂ ಜೇವರ್ಗಿ ತಾಲೂಕಿನ ಸಮಸ್ತ ಮುಖಂಡರು ಉಪಸ್ಥಿತರಿದ್ದರು.