ಖರ್ಗೆ, ಜಾಧವ ಸೇರಿ 12 ಅಭ್ಯರ್ಥಿಗಳು ಕಣದಲ್ಲಿ

0
126

ಕಲಬುರಗಿ: ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರಸ್ ನ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯ ಡಾ. ಉಮೇಶ ಜಾಧವ ಸೇರಿದಂತೆ ಒಟ್ಟು 12  ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ಸಲ್ಲಿಸಿದ್ದ 19 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆದಿರುವುದರಿಂದ ಇದೀಗ 12 ಜನ ಮಾತ್ರ ಕಣದಲ್ಲಿ ಉಳಿದಿದ್ದಾರೆ.

Contact Your\'s Advertisement; 9902492681

ಗುರುಶಾಂತ ಮಲ್ಲಪ್ಪ ಎಂ. ಪಟ್ಟೇದಾರ (ಬಹುಜನ ಮಹಾ ಸಂಘ), ಜಗನ್ನಾಥ ಮನ್ನು, ವಿಠ್ಠಲ್ ಡಾಕು ಜಾಧವ, ವಿಶ್ವೇಶ್ವರಯ್ಯ ತುಳಜಾರಾಮ ಭೋವಿ, ರಾಮು ಚತ್ರು, ಶಶಿಧರ ಬಸವರಾಜ, ಹಣಮಂತರಾಮ ಭೀಮಾನಾಯ್ಕ್ ಎಂ.ಬಿ. (ಪಕ್ಷೇತರ) ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ.

ಮಲ್ಲಿಕಾರ್ಜುನ ಮಾಪಣ್ಣ ಖರ್ಗೆ (ಕಾಂಗ್ರೆಸ್), ಉಮೇಶ ಗೋಪಾಲ ಜಾಧವ (ಬಿಜೆಪಿ), ವಾಸುದೇವರಾವ ಭೀಮರಾವ (ಬಿಎಸ್ ಪಿ), ದತ್ತಪ್ಪ ಕೃಷ್ಣಪ್ಪ ಕೊಂಕಾಟಿ (ರಾಷ್ಟ್ರೀಯ ಸಮಾಜ ಪಕ್ಷ), ರಾಜಕುಮಾರ ಗೋಪಿನಾಥ ರಾಠೋಡ್ (ಭಾರತೀಯ ಬಹುಜನ ಕ್ರಾಂತಿ ದಳ), ಲಂಬಾಣಿ ಮಹೇಶ ಈಶ್ವರ ನಾಯಕ (ಉತ್ತಮ ಪ್ರಜಾಕೀಉ ಪಕ್ಷ), ವಿಜಯ ಗೋವಿಂದ ಜಾಧವ (ಸರ್ವ ಜನತಾ ಪಕ್ಷ), ಶರಣಬಸಪ್ಪ ಮಲ್ಲಿಕಾರ್ಜುನಪ್ಪ (ಎಸ್ ಯುಸಿಐ-ಸಿ), ಶಂಕರ ಲಿಂಬಾಜಿ ಜಾಧವ (ಭಾರತೀಯ ಪೀಪಲ್ಸ್ ಪಾರ್ಟಿ), ಜಿ. ತಿಮರಾಜು ಗಂಗಪ್ಪ (ಪಕ್ಷೇತರ), ಡಾ. ಎಂ.ಪಿ.‌ಧಾರೇಶ್ವರ ( ಪಕ್ಷೇತರ), ರಮೇಶ ಭೀಮಸಿಂಗ್ (ಪಕ್ಷೇತರ)  ಅವರು ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದ್ದಾರೆ.

ಈ ಕ್ಷೇತ್ರಕ್ಕೆ ಎರಡನೆ ಹಂತದಲ್ಲಿ ಏ. 23 ರಂದು ಮತದಾನ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here