ಯಡ್ರಾಮಿಯಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣ 40 ಜನ ಪೊಲೀಸರ ವಶಕ್ಕೆ

0
583

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರವಿವಾರ ರಾತ್ರಿ ದಲಿತರು ಮದುವೆ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಏಕಾಏಕಿ ದಲಿತರ ಮೇಲೆ ಸವರ್ಣೀಯರು ಕಲ್ಲು ತೂರಾಟ ಮಾಡಿರುವ ಘಟನೆಯಲ್ಲಿ ಸುಮಾರು 16 ಜನ ಗಾಯಗೊಂಡ ಹಿನ್ನಲ್ಲೇಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ ಕುಡಲಗಿ ಅವರು ಜಿಲ್ಲಾಸ್ಪತ್ರೆಗೆ ಭೇಟಿ‌ ನೀಡಿ ಗಾಯಳುಗಳಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ನಾಗರಹಳ್ಳಿ ಗ್ರಾಮದಲ್ಲಿ ದಲಿತರು ಮೆರವಣೆ ನಡೆಸುತಿದ್ದಾಗ ಸವರ್ಣೀಯರು ಅವರ ಮೇಲೆ ನಡೆಸಿದ ಕಲ್ಲು ತೂರಾಟ ನಡೆದಿತ್ತು. ನಂತರ ರಾತ್ರಿ 11 ಗಂಟೆಗೆ ದಲಿತ ಓಣಿಗೆ ನುಗ್ಗಿ ಸವರ್ಣೀಯರು ಮತ್ತೆ ಕಲ್ಲು ತೂರಾಟ ನಡೆಸಿದರು ಎಂದು ಈ ಘಟನೆಯಲ್ಲಿ ಸುಮಾರು 25 ಜನ ದಲಿತರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಕೃತ್ಯವೇಸಗಿದ ಕಿಡಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳಬೇಕು, ಈಗಾಗಲೇ ಎಸ್.ಪಿ ಹಾಗೂ ಡಿ.ಎಸ್.ಪಿ ಅವರೊಂದಿಗೆ ಮಾತನಾಡಿದ್ದು, ನಮ್ಮ ಜನರ ಮೇಲೆ ಅನ್ಯಾಯವಾಗಿದ್ದು, ಎಸ್.ಪಿ ಅವರು ದಲಿತರಿಗೆ ಅರೇಸ್ಟಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸಿದರೆ, ಉಗ್ರ ಹೋರಾಟ ನಡೆಸಲಾಗುವುದು.

– ಶಾಂತಪ್ಪ ಕುಡಲಗಿ, ಜಿಲ್ಲಾ ಪಂಚಾಯತ್ ಸದಸ್ಯ

 

ಘಟನೆಗೆ ಸಂಬಂಧಿಸಿದಂತೆ ದಲಿತ ಹಾಗೂ ಸವರ್ಣೀಯರನ್ನು ಸೇರಿ ಒಟ್ಟು 40 ಜನರನ್ನು ಪೊಲೀಸರು ಠಾಣೆಗೆ ಕರೆ ತಂದು ವಿಚಾರಿಸುತ್ತಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ಇನ್ನೂ ಬಿಗುವಿನ ವಾತಾವರಣ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here