ಬೆಂಗಳೂರು: ಹೌದು ಕರ್ನಾಟಕದ ಸಿಂಗಂ ಅಂದೇನೆ ಪ್ರಖ್ಯತಗೊಂಡಿದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ವೃತಿ ಜೀವನಕ್ಕೆ ರಾಜೀನಾಮೆ ಸಲ್ಲಿಸುವ ಕುರಿತು ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಇಂದು ಸಂಜೆವರೆಗೆ ತಮ್ಮ ಅಂತಿಮ ನಿಲುವಿನ ಬಗ್ಗೆ ಸ್ಪಷ್ಟಪಡಿಸಲಿದ್ದಾರೆ.
ರಾಜ್ಯದಲ್ಲಿ ಕಳ್ಳರು, ದರೋಡೇಕೋರರು, ಕೊಲೆಗಡುಕರು ಅಣ್ಣಾಮಲೈ ಅವರ ಕಂಡರೆ ಅಕ್ಷರಶಃ ನಡುಗುತ್ತಾರೆ. ಹೀಗೆ ಅಪರಾಧಿಗಳ ಮನಸ್ಸಿನಲ್ಲಿ ಭಯದ ಬೀಜ ಬಿತ್ತಿದ್ದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದು, ಅವರ ಅಭಿಮಾನಿ ಹಾಗೂ ಪೊಲೀಸ್ ಇಲಾಖೆಗೆ ಶಾಕ್ ನೀಡಿದ್ದಾರೆ.
ಸಾಕಷ್ಟು ಪ್ರಕರಣಗಳನ್ನು ನೀರುಕುಡಿದಂತೆ ಬೇಧಿಸಿದ ಹೆಗ್ಗಳಿಕೆ ಅಣ್ಣಾಮಲೈ ಅವರದಾಗಿದ್ದು, ಅವರು ಹೊದ ಕಡೆಗಳಲ್ಲಿ ಅಣ್ಣಾಮಲೈ ಅವರ ಕಾರ್ಯವೈಖರಿ ಕುರಿತು ಮೆಚ್ಚುಗೆ ಕೇಳಿ ಬರುತ್ತದೆ. ಸುಮಾರು ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ ಅವರು ರಾಜೀನಾಮೆ ಮುಂದಾಗಿದ್ದು, ಅವರ ಫಾಲೋವರ್ಸ್ಗೆ ಭಾರಿ ಬೇಸರ ಮೂಡಿಸಿದೆ.
ಸದ್ಯ ಬೆಂಗಳೂರು ದಕ್ಷಿಣದ ಡಿಸಿಪಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಸಂಜೆ ವರೆಗೆ ಅಣ್ಣಾಮಲೈ ಐಪಿಎಸ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಕುರಿತು ಸ್ಪಷ್ಟವಾಗಲಿದೆ. ಅಣ್ಣಮಲೈ ಅವರು ಸದ್ಯದಲ್ಲೇ ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ಭೇಟಿ ನೀಡಿ ರಾಜೀನಾಮೆ ಸಲ್ಲಿಸಲಿದ್ದಾರೆಂದು ತಿಳಿದುಬಂದಿದ್ದು, ರಾಜೀನಾಮೆ ಕುರಿತು ಪತ್ರವೊಂದನ್ನು ಬೀಡುಗಡೆಗೊಳಿಸಿ ಮಾಹಿತಿ ನೀಡಿದ್ದಾರೆ.