ಬಿಸಿಯೂಟ ನೌಕರರ ಗೌರವ ಧನವನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ

0
77

ಶಹಾಬಾದ: ಬಿಸಿಯೂಟ ನೌಕರರ ಪ್ರಸಕ್ತ ವರ್ಷದ ಫೆಬ್ರವರಿಯಿಂದ ಅಗಸ್ಟ್ವರೆಗಿನ ಗೌರವ ಧನವನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘ (ಸಿಐಟಿಯು) ತಾಲೂಕಾ ಸಮಿತಿ ವತಿಯಿಂದ ನಗರದ ತಾಪಂ ಕಚೇರಿಯ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ಶಾಲೆಯ ಅಡುಗೆ ಮಾಡುವ ಬಿಸಿಯೂಟ ನೌಕರರಿಗೆ ಸಂಬಳವಿಲ್ಲದೇ ತೊಂದರೆಗೆ ಈಡಾಗಿದ್ದಾರೆ.ಅವರು ಬದುಕು ನಡೆಸುವುದು ದುಸ್ತರವಾಗಿದೆ.ಪ್ರಸಕ್ತ ವರ್ಷದ ಫೆಬ್ರವರಿಯಿಂದ ಅಗಸ್ಟವರೆಗಿನ ಗೌರವ ಧನ ನೀಡಿಲ್ಲ.ಅಲ್ಲದೇ ಕ್ವಾರಂಟೈನಗಳಲ್ಲಿ ಕೆಲಸ ಮಾಡಿದ ಬಿಸಿಯೂಟ ನೌಕರರಿಗೆ ಹಣವನ್ನು ನೀಡಿಲ್ಲ.

Contact Your\'s Advertisement; 9902492681

ಇದರಿಂದ ಅವರ ಮನೆ ನಡೆಯುವುದಾದರೂ ಹೇಗೆ? ಸಂಬಳವಿಲ್ಲದೇ ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಶಾಲೆಯಲ್ಲಿ ಕೆಲಸ ನಿರ್ವಹಿಸದ ಶಿಕ್ಷಕರಿಗೆ ಸಂಬಳ ನೀಡುವ ಸರಕಾರ ಇವರಿಗ್ಯಾಕೆ ನೀಡುತ್ತಿಲ್ಲ. ಸಂಕಷ್ಟದ ಬದುಕನ್ನು ನಡೆಸುತ್ತಿರುವ ಬಿಸಿಯೂಟ ನೌಕರರಿಗೆ ಕೂಡಲೇ ಫೆಬ್ರವರಿಯಿಂದ ಅಗಸ್ಟ್ವರೆಗಿನ ಗೌರವ ಧನವನ್ನು ನೀಡಬೇಕು.ಇಲ್ಲದಿದ್ದರೇ ಹೋರಾಟ ನಿರಂತರವಾಗಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಪಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ, ಸಿಐಟಿಯು ಅಧ್ಯಕ್ಷೆ ಶೇಖಮ್ಮ ಕುರಿ, ಅಕ್ಷರ ದಾಸೋಹ ಸಮಿತಿ ಅಧ್ಯಕ್ಷೆ ಸಂಪತ್ಕುಮಾರಿ,ಪ್ರಧಾನ ಕಾರ್ಯದರ್ಶಿ ಸುನೀತಾ ಹಾಗೂ ಶಬಾನಾ, ಆರುತಿ ಸೇರಿದಂತೆ ಬಿಸಿಯೂಟ ನೌಕರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here