ಕಾಂಗ್ರೆಸ್ ಚೇತರಿಕೆಗೆ ಸೇವಾದಾಳ ಪುನಶ್ಚೇತನ: ಜವಳೆ

0
80

ವಾಡಿ: ಸತ್ಯಾಗ್ರಹ ಚಳುವಳಿಗೆ ಶಿಸ್ತುಬದ್ಧ ರಕ್ಷಣೆ ನೀಡುತ್ತಿದ್ದ ಸೇವಾದಳ ಸೇವಕರಿಂದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಬಲಶಾಲಿಯಾಗಿ ಬಳೆಯಲು ಸಾಧ್ಯವಾಯಿತು. ಕುಗ್ಗಿದ ಪಕ್ಷ ಸಂಘಟನೆ ಪುನಶ್ಚೇತನಗೊಳಿಸಲು ಮತ್ತೆ ಸೇವಾದಳ ಸೈನ್ಯ ಕಟ್ಟಬೇಕಿದೆ ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಹಣಮಂತರಾವ ಜವಳೆ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕ ಅಧ್ಯಕ್ಷ ಡಾ.ನಾರಾಯಣ ಸುಬ್ಬರಾವ ಹರ್ಡೇಕರ್ ಅವರ ೪೬ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಹಿಂದುಸ್ತಾನಿ ಸೇವಾದಳವಾಗಿ ಉದಯವಾದ ಈ ಶಿಸ್ತಿನ ಸಂಘಟನೆ ೧೯೩೧ರಲ್ಲಿ ಕಾಂಗ್ರೆಸ್‌ನಲ್ಲಿ ವಿಲೀನವಾಯಿತು. ಸೇವಾದಳ ಸಂಸ್ಥಾಪಕ ಡಾ.ನಾರಾಯಣ ಸುಬ್ಬರಾವ ಹರ್ಡೇಕರ್ ಅವರು ಗಾಂಧೀಜಿಯೊಡನೆ ಸೇರಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂದೀಜಿ ಅವರ ರಾಷ್ಟ್ರೀಯತೆ, ನೆಹರು ಅವರ ಆದರ್ಶ, ಜಾತ್ಯಾತೀತತೆ, ಧರ್ಮಸಹಿಷ್ಣುತೆ ಕುರಿತು ದೇಶದ ಜನರಲ್ಲಿ ಮತ್ತು ಯುವಜನರಲ್ಲಿ ಹೋರಾಟದ ಹುಮ್ಮಸ್ಸು ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಸೇವಾದಳ ಸಂಘಟನೆ ಈಗ ಮರುಹುಟ್ಟು ಪಡೆಯಬೇಕಿದೆ ಎಂದರು.

Contact Your\'s Advertisement; 9902492681

ಸೇವಾದಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ರಾಜಶೇಖರ ಪಾಟೀಲ ಹೆಬಳಿ ಮಾತನಾಡಿ, ಬ್ರಿಟೀಷರು ದೇಶಬಿಟ್ಟು ಹೋದ ಗಳಿಗೆಯಲ್ಲಿ ಹಲವು ಆಂತರಿಕ ಬಿಕ್ಕಟ್ಟುಗಳು ಸೃಷ್ಠಿಯಾದವು. ತತ್ವ ಸಿದ್ಧಾಂತದ ಮೇಲೆ ನಡೆಯುತ್ತಿದ್ದ ಸೇವಾದಳ ನಾಯಕರಲ್ಲಿ ಹೊಸ ಚಿಂತನೆ ಮೂಡಿಸಲು ಕಾರಣವಾಯಿತು. ದೇಶವನ್ನು ಕಟ್ಟಲು ಮುಂದಾದ ನಾಯಕರಿಗೆ ಸೇವಾದಳ ಸೇವಕರು ಪೊಲೀಸರಂತೆ ಶಿಸ್ತುಬದ್ಧ ಸುರಕ್ಷತೆ ನೀಡಿ ತ್ಯಾಗ ಮರೆದಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಹಿರಿಯ ಮುಖಂಡ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಸೇವಾದಳ ನಗರ ಘಟಕದ ಅಧ್ಯಕ್ಷ ವಿಠ್ಠಲ ಚವ್ಹಾಣ, ಉಪಾಧ್ಯಕ್ಷ ಶಾಂತಕುಮಾರ ಜಗದಾಳೆ, ಮುಖಂಡರಾದ ಚಂದ್ರಸೇನ ಮೇನಗಾರ, ದೇವಿಂದ್ರ ಕರದಳ್ಳಿ, ಮಹ್ಮದ್ ಇಸೂಫ್ ಕಮರವಾಡಿ, ದಾವೂದ್ ಪಟೇಲ, ರಮೇಶ ಬಡಿಗೇರ, ಮಹ್ಮದ್ ಗೌಸ್, ಚಾಂದಮಿಯ್ಯಾ, ವಿಜಯಕುಮಾರ ಸಿಂಗೆ, ಶೇಖ ಮಹೆಬೂಬ, ಕಿಶನ ನಾಯಕ, ಲಕ್ಷ್ಮಣ ಅಮಕಾರ, ನರಸಪ್ಪ ಹೊಸಮನಿ, ಮಲ್ಲಿಕಾರ್ಜುನ ಕಟ್ಟಿ, ಮಹೇಶ ಸುತಾರ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here