ನಗರೋತ್ಥಾನ ಯೋಜನೆ ಅನುದಾನ ದುರುಪಯೋಗ: ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

0
81

ಸುರಪುರ: ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡ್ ಸಂಖ್ಯೆ 19ರ ಹಸನಾಪುರದಲ್ಲಿನ ಪರಿಶಿಷ್ಟ ಜಾತಿಂ ಕಾಲೋನಿಯಲ್ಲಿ ನಿರ್ಮಿಸಲು ಮಂಜೂರಾದ ಸಿಸಿ ರಸ್ತೆ ಕಾಮಗಾರಿ ಅನುದಾನ ಬೇರೆಡೆಗೆ ಹಾಕಿ ಅನುದಾನ ದುರುಪಯೋಗ ಪಡಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿಜಿ ಸಾಗರ ಬಣ) ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಆಗ್ರಹಿಸಿದರು.

ಸಮಿತಿಯಿಂದ ನಗರಸಭೆ ಮುಂದೆ ಹಮ್ಮಿಕೊಂಡಿದ್ದ ಧರಣಿಯ ನೇತೃತ್ವ ವಹಿಸಿ ಮಾತನಾಡಿ,ಸುಮಾರು 15 ಲಕ್ಷ ರೂಪಾಯಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಲು ಅನುದಾನ ಮೀಸಲಿಟ್ಟು ನಂತರ ಆ ಅನುದಾನವನ್ನು ಸಾಮಾನ್ಯ ವಾರ್ಡಿಗೆ ಹಾಕಲಾಗಿದೆ.ಇದರಿಂದ ದಲಿತ ಕಾಲೋನಿಗೆ ವಂಚನೆ ಮಾಡಲಾಗಿದೆ,ಆದ್ದರಿಂದ ತಪ್ಪಿತಸ್ಥ ಎಇಇ ಜೆಇ ಮತ್ತು ನಗರಾಭಿವೃಧ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾದರು ದಲಿತರಿಗೆ ಸರಕಾರಗಳು ಇನ್ನೂ ಅನ್ಯಾಯ ಮಾಡುವುದನ್ನು ನಿಲ್ಲಿಸಿಲ್ಲ.ಹಸನಾಪುರ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಕಾಮಗಾರಿ ಅನುದಾನ ದುರ್ಬಳಕೆ ಕುರಿತು ಅನೇಕ ಬಾರಿ ಮನವಿ ಮಾಡಿದರು ಪ್ರಯೋಜನೆಯಾಗಿಲ್ಲ,ಅಲ್ಲದೆ ನಗರಾಭಿವೃಧ್ಧಿ ಕೋಶದ ಯೋಜನಾಧಿಕಾರಿಗಳಿಗೆ ತಿಳಿಸಿದರು.

ಪ್ರಯೋಜನೆಯಾಗಿಲ್ಲ.ಕೂಡಲೆ ಪರಿಶಿಷ್ಟರ ಕಾಲೋನಿಯ ಅನುದಾನ ಮರಳಿಸಿ ಕಾಮಗಾರಿ ನಿರ್ಮಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದೆ ನಮ್ಮ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತಪ್ಪ ರೋಜಾ ಭೀಮಣ್ಣ ನಾಟೆಕಾರ್ ಯಲ್ಲಾಲಿಂಗ ಹೊಸ್ಮನಿ ಸಾಯಬಣ್ಣ ಸದಬ ಎಂ ಪಟೇಲ್ ಖಾಜಾ ಅಜ್ಮೀರ್ ರಮೇಶ ಬಡಿಗೇರ್ ಶಿವರಾಜ ಕಲಕೇರಿ ರಮೇಶ ನಂಬಾ ಚೌಡಪ್ಪ ಯಡಹಳ್ಳಿ ಮಹ್ಮದಸಾಬ್ ದೌಲಯಾತ್ ರವಿಕುಮಾರ ದೊಡ್ಮನಿ ಗದ್ದೆಪ್ಪ ದೊಡ್ಮನಿ ಭೀಮರಾಯ ಮಂಗಳೂರು ಶೇಖರ ಮಂಗಳೂರು ಹುಸೇನ ನಾರಾಯಣಪುರ ಯಲ್ಲಪ್ಪ ಗುಂಡಲಗೇರಾ ಶೌಕತ್ ಅಲಿ ಪ್ರದೀಪ ಬಸರಿಹಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here