ಉತ್ಪನ್ನ ಖರೀದಿ ಕೇಂದ್ರ ಆರಂಭಿಸುವಂತೆ ಕ.ರ.ವೇ ಪ್ರತಿಭಟನೆ

0
71

ಆಳಂದ: ರೈತರು ಬೆಳೆದ ಹೆಸರು, ಉದ್ದು ಬೆಳೆಯನ್ನು ಬೆಂಬಲ ಯೋಜನೆಯಡಿ ಖರೀದಿಸಲು ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಕ.ರ.ವೇ ಪಧಾಧಿಕಾರಿಗಳು ಒತ್ತಾಯಿಸಿದರು.

ಆಳಂದ ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದ ಅವರು, ಈ ಭಾರಿ ಮುಂಗಾರು ಮಳೆ ಹೆಚ್ಚಾಗಿರುವುದರಿಂದ ಬಹುತೇಕ ಬೆಳೆಗಳು ಹಾಳಾಗಿವೆ.ಅದಾಗಿಯೂ ಬಂದಷ್ಟು ಫಸಲನ್ನು ರಾಶಿ ಮಾಡಿಕೊಂಡು ಬರಲಾಗಿದೆ. ಮಾರುಕಟ್ಟೆಯಲ್ಲಿ ಹೆಸರಿನ ಬೆಲೆ 3 ಸಾವಿರದಷ್ಟಿದೆ.ಇದು ಕಡಿಮೆ ಆಗಿದ್ದು,ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರವೇ ಬೆಂಬಲ ಯೋಜನೆಯಡಿ ರೈತರ ಉದ್ದು,ಹೆಸರು ಖರೀದಿಸಬೇಕು. ಇನ್ನು ಬೆಳೆ ಹಾನಿಯಾದ ರೈತರಿಗೆ ಶೀಘ್ರ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಅನೇಕ ಸಮಸ್ಯೆಗಳ ಕುರಿತು ಪರಿಹಾರಕ್ಕೆ ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಹಾಂತೇಶ ಸಣ್ಣಮನಿ, ಉಪಾಧ್ಯಕ್ಷ ಅನಂದರಾಯ ಯಲಶೆಟ್ಟಿ, ಮಹಿಳಾ ಘಟಕ ಅಧ್ಯಕ್ಷೆ ವಂದನಾ,ನಿಂಬರ್ಗಾ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ,ದವಲಪ್ಪ ಮಸರೆ,ಕಲ್ಯಾಣಕುಮಾರ್ ಚಿಂಚೋಳಿ, ವಿಶಾಲ ಪಾಟೀಲ್, ಮಾಡ್ಯಾಳ ಗ್ರಾ.ಘ.ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಲಕ್ಷ್ಮಿಪುತ್ರ ಪಾಟೀಲ್, ಕ್ಷೇಮಲಿಂಗ ಕಂಭಾರ, ಸಂಗಮನಾಥ ಕಲಶೆಟ್ಟಿ, ಬಸವರಾಜ ರಾಂಪುರೇ,ರೇವಣಸಿದ್ದ ಹೀರೊಳ್ಳಿ, ದೌಲಪ್ಪ ವಣದೇ,ರಾಹುಲ್ ಆಚಲೇರಿ,ಶಿವಕಿರಣ ಪಾಟೀಲ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here