ವಿದ್ಯಾರ್ಥಿಗಳು ಸಾಧನೆ ಮಾಡಲು ಸ್ಪರ್ಧಾ ಭಾವನೆ ಮುಖ್ಯ: ಬಿಇಒ ಮಹಾದೇವರೆಡ್ಡಿ

0
25

ಸುರಪುರ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬಂದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವರೆಡ್ಡಿ ಹೇಳಿದರು. ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕನ್ನಡದ ಅಂಕವೀರರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಚಿಂತನೆ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದ್ದು, ಇಂತಹ ಸತ್ಕಾರ ಪ್ರತಿಭಾ ಸನ್ಮಾನಗಳು ಮೇಲಿಂದ ಮೇಲೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ವಿದ್ಯಾರ್ಥಿ ದಿಶೇಯಲ್ಲಿಯೇ ಉತ್ತಮವಾದ ಜ್ಞಾನವನ್ನು, ಆಳವಾದ ಅಧ್ಯಾಯನವನ್ನು, ವಿಶೇಷವಾದ ಚಿಂತನೆಗಳನ್ನು ಮೈಗುಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ಕನ್ನಡ ಪರಂಪರೆಗೆ ೨೦೦೦ ವರ್ಷಗಳ ಇತಿಹಾಸವಿದ್ದು ಆದಿ ಕವಿ ಪಂಪನ ಹಾದಿಯಾಗಿ ಅನೇಕ ಜನ ಕವಿಗಳು ಕನ್ನಡ ಹಿರಿಮೆ-ಗರಿಮೇಯ ಬಗ್ಗೆ ವೈಭವದ ಬಗ್ಗೆ ಪರಿಚಯಿಸಿದ್ದಾರೆ, ವಿದ್ಯಾರ್ಥಿಗಳುಕೂಡ ಆ ದೀಶೆಯಲ್ಲಿ ಕನ್ನಡದ ಸಾಹಿತ್ಯವನ್ನು ಅಧ್ಯಾಯನ ಮಾಡಬೇಕು ಎಂದು ಸಲಹೆನಿಡಿದರು.

ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಮಾತನಾಡಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಿರಿ, ಭವಿಷ್ಯದ ದಿನಗಳಲ್ಲಿಯೂ ಕೂಡ ನಿಮ್ಮ ಕನ್ನಡ ಪ್ರೇಮ ಹೆಚ್ಚಾಗಲಿ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಿತಿಕ ಕೃತಿಗಳನ್ನು ಕಥೆ, ಕವನ, ಕಾದಂಬರಿ, ನಾಟಕ ಇವುಗಳ ಅಭ್ಯಾಸದ ಮೊರೆಹೊಗಬೇಕು ಎಂದು ಸಲಹೆ ನೀಡಿದರು.

ಪ್ರಮುಖರಾದ ನಿಂಗಣಗೌಡ ದೇಸಾಯಿ ಪರಸನಳ್ಳಿ, ಸಾಯಬಣ್ಣ ಪುರ್ಲೆ, ಬಂಡಾರೆಪ್ಪ ನಾಟೇಕಾರ ವೇದಿಕೆಮೇಲಿದ್ದರು.

ಇದೇ ಸಂದರ್ಭದಲ್ಲಿ ಸುರಪುರ ತಾಲೂಕಿನ ೫೦ ವಿದ್ಯಾರ್ಥಿಗಳಿಗೆ ಸಗರನಾಡು ಕನ್ನಡ ಜಾಣ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮವನ್ನು ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಮೌನೇಶ ಐನಾಪುರ ಸ್ವಾಗತಿಸಿದರು, ಮಲ್ಲು ದಂಡಿನ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here