ಬೇರೆಯವರಿಗೆ ಒಳಿತು ಬಯಸುವ ಪತ್ರಕರ್ತರ ಬದುಕು ಸದಾ ಶೋಚನಿಯ: ಡಿ.ಸಿ.ಪಾಟೀಲ

0
22

ಸುರಪುರ: ನಿತ್ಯ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಮತ್ತು ಜನರ ಒಳಿತಿಗಾಗಿ ಮಿಡಿಯುವ ಪತ್ರಕರ್ತರ ಬದುಕು ಅನೇಕ ಸಮಸ್ಯೆಗಳಿಂದ ಶೋಚನಿಯವಾಗಿರಲಿದೆ ಎಂದು ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ್ ಕೆಂಭಾವಿ ಮಾತನಾಡಿದರು.

ಹುಣಸಗಿಯಲ್ಲಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ವೆಂಕಟೇಶ ದೊರೆಯವರು ಸದಾಕಾಲ ಜನರ ಅಭಿವೃಧ್ಧಿಗಾಗಿ ಶ್ರಮಿಸುವ ಪತ್ರಕರ್ತರಾಗಿದ್ದರು.ಅವರನ್ನು ಕಳೆದುಕೊಂಡು ಕೆಜೆಯು ಅನಾಥ ಭಾವ ಹೆದರಿಸುತ್ತಿದೆ.ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಹಾಗು ಕುಟುಂಬಕ್ಕೆ ಸರಕಾರ ನೆರವು ನೀಡಬೇಕು ಹಾಗು ಕೆಜೆಯು ಕೂಡ ಸದಾಕಾಲ ವೆಂಕಟೇಶ ದೊರೆಯವರ ಕುಟುಂಬದ ಸಮಸ್ಯೆಗಳಿಗೆ ಸ್ಪಂಧಿಸಲಿದೆ ಎಂದರು.

Contact Your\'s Advertisement; 9902492681

ಕೆಜೆಯು ಸುರಪುರ ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ವೆಂಕಟೇಶ ದೊರೆಯವರು ಕೇವಲ ಪತ್ರಕರ್ತ ಮಾತ್ರವಲ್ಲದೆ ಒಬ್ಬ ಉತ್ತಮ ಸಂಘಟನಾಕಾರರಾಗಿದ್ದು ಅವರ ಮಾರ್ಗದರ್ಶನದಲ್ಲಿ ಕೆಜೆಯು ಉತ್ತಮವಾಗಿ ಕೆಲಸ ಮಾಡುತ್ತಿತ್ತು,ಅವರ ನಿಧನ ತುಂಬಾ ದುಃಖ ತರಿಸಿದೆ.ಮುಂದೆ ಕೆಜೆಯು ದೊರೆಯವರ ಕುಟುಂಬಕ್ಕೆ ಅಣ್ಣ ತಮ್ಮಂದಿರಾಗಿ ಅವರ ನೆರವಿಗೆ ಇರಲಿದೆ.ಅಲ್ಲದೆ ಸರಕಾರದಿಂದಲೂ ಸಹಾಯ ಕೊಡಿಸುವಂತೆ ಶಾಸಕರ ಮೂಲಕ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೆಜೆಯು ಜಿಲ್ಲಾ ಉಪಾಧ್ಯಕ್ಷ ಬಾಲಪ್ಪ ಕುಪ್ಪಿ ಮುಖಂಡರಾದ ಬಸವರಾಜ ಮೇಲಿನಮನಿ,ಹುಣಸಗಿ ಕೆಜೆಯು ಅಧ್ಯಕ್ಷ ಬಾಪುಗೌಡ ಮೇಟಿ ಮಾತನಾಡಿದರು.ಸಭೆಯ ಆರಂಭದಲ್ಲಿ ವೆಂಕಟೇಶ ದೊರೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಆತ್ಮಕ್ಕೆ ಶಾಂತಿ ಕೋರಲಾಯಿತು.

ಸಭೆಯಲ್ಲಿ ಕೆಜೆಯು ರಾಜ್ಯ ಸಮಿತಿ ಸದಸ್ಯ ಪವನ ಕುಲಕರ್ಣಿ ಹುಣಸಗಿ ತಾಲೂಕು ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ ಸುರಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ ಕಾರ್ಯದರ್ಶಿ ಮಲ್ಲಿಕಾರ್ಜುನ ತಳ್ಳಳ್ಳಿ ಮಾಳಪ್ಪ ಕಿರದಹಳ್ಳಿ ಗಿರೀಶ ಕೆಂಭಾವಿ ರಮೇಶ ಮಿರಜಕರ್ ಕನ್ನಡಪರ ಹೋರಾಟಗಾರ ಮಲ್ಲಿಕಾರ್ಜುನ ಪಾಟೀಲ ಇದ್ದರು,ಬಿ.ಡಿ ಮರುಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here