ವೈದ್ಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

0
56

ಕಲಬುರಗಿ: ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವರು ಕ್ಯಾಬಿನೇಟ್ ಸಭೆಯನ್ನು ಉದ್ದೇಶಿಸಿ ಮಾತಾನಾಡುತ್ತಾ ವೈದ್ಯರು, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡಂತೆ ಆರೋಗ್ಯ ಕಾರ್ಯಕರ್ತೆಯರ  ಸಾವಿನ ಸಂಖ್ಯೆಯ ಅಂಕಿ ಅಂಶಗಳ ವರದಿ ಮತ್ತು ಈ ಸಾಂಕ್ರಾಮಿಕ ಸಂದರ್ಭದಲ್ಲಿ ಭಾದಿತರಾದ ಅಂಕಿ ಅಂಶಗಳು ತಮ್ಮ ಬಳಿ ಇಲ್ಲವೆಂದು ಹೇಳಿದ್ದಾರೆ. ಇದು ಸರ್ಕಾರದ ಬೇಜವಬ್ದಾರಿತನವನ್ನು ತೋರಿಸುತ್ತಿದೆ ಎಂದು ವೈಟ್ ಸ್ಪಾರ್ಕ್ ಜಿಲ್ಲಾ ಸಂಚಾಲಕರಾದ ಹಣಮಂತು ಹೆಚ್ಎಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾಜದ ಆರೋಗ್ಯಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಮತ್ತು ಇಂದಿಗೂ ಅವರಲ್ಲಿ ಹಲವರು ಕಳೆದ ತಿಂಗಳುಗಳಿಂದ ಸಂಬಳವನ್ನು ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಭಾರತೀಯ ವೈದ್ಯಕೀಯ ಮಂಡಳಿಯು ಇಲ್ಲಿಯ ತನಕ ೩೮೨ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ವರದಿ ಸಲ್ಲಿಸಿದೆ. ಕರ್ನಾಟಕದಲಿ ಸುಮಾರು ೫೦ ಜನ ವೈದ್ಯರು ಸಾವನ್ನಪ್ಪಿದ್ದಾರೆ.!! ಸತ್ತವರ ಕುಟುಂಬಗಳು ಇಂದಿಗೂ ಪರಿಹಾರವನ್ನು ಪಡೆದಿಲ್ಲ.  ವೈದ್ಯರೊಂದಿಗೆ ದೊಡ್ಡ ಸಂಖ್ಯೆಯ ನರ್ಸ್‌ಗಳು, ಆಶಾ ಕಾರ್ಯಕರ್ತೆಯರು ಹಾಗೂ ಇನ್ನಿತರ ಆರೋಗ್ಯ ಕ್ಷೇತ್ರದಲ್ಲಿರುವ ಕಾರ್ಮಿಕರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ದಾಖಲೆಯನ್ನು ಸರ್ಕಾರವು ಬಹಿರಂಗ ಪಡಿಸಿಲ್ಲ. ಇದೇನಾ ಕೋರೋನಾ ವಿರುದ್ದದ ಹೋರಾಟದ ಮುಂಚೂಣಿಯಲ್ಲಿರುವ ವಾರಿಂiರ್ಸ್‌ಗಳಿಗೆ ಕೇಂದ್ರ ಸರ್ಕಾರ ತೋರುತ್ತಿರುವ ಗೌರವ..!?ದೇಶದ ಉಳಿವಿಗಾಗಿ ಬಂದ ಇವರ ಜವಬ್ದಾರಿ ಸರ್ಕಾರಗಳದ್ದಲ್ಲವೇ? ಕೊರೋನಾ ಪ್ರಾರಂಭದ ದಿನಗಳಲ್ಲಿ ವೈದ್ಯರಿಗೆ ಹೂಮಳೆ ಮತ್ತು ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿ ತನ್ನ ನೈಜ ಕರ್ತವ್ಯವನ್ನು ಮರೆತದ್ದು ಖಂಡನಾರ್ಹ. ಕೇಂದ್ರ ಸರ್ಕಾರದ ಈ ನಡವಳಿಕೆಯನ್ನು ವಿರೋಧಿಸಿ ಜೀವ ಕಳೆದುಕೊಂಡ ವೈದ್ಯರ ಕುಟುಂಬಗಳಿಗೆ ಕೂಡಲೇ ಪರಿಹಾರ ಮತ್ತು ವೈದ್ಯರಿಗೆ ಭದ್ರತೆ  ಒದಗಿಸಬೇಕೆಂದು ಹೋರಾಟವನ್ನು ನಡೆಸುತ್ತಿದ್ದಾರೆ, ಈ ಒಂದು ಹೋರಾಟಕ್ಕೆ ವೈಟ್ ಸ್ಪಾರ್ಕ್- ವೈದ್ಯಕೀಯ ಮತ್ತು ದಂತ ವಿದ್ಯಾರ್ಥಿಗಳ ವೇದಿಕೆ, ಕರ್ನಾಟಕ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರವು ಈ ಕೂಡಲೇ ವೈದ್ಯರ ಈ ಬೇಡಿಕೆಯನ್ನು ಈಡೇರಿಸಬೇಕೆಂದು ಹಾಗೂ ಪ್ರಸ್ತುತ ಕೊರೋನಾ ವಿರುದ್ಧ ಹೋರಾಡುತ್ತಿರುವ ಎಲ್ಲಾ ನರ್ಸ್‌ಗಳು, ಆಶಾ ಕಾರ್ಯಕರ್ತೆಯರು ಹಗೂ ಇನ್ನಿತರ ಆರೋಗ್ಯ ಕಾರ್ಮಿಕರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ವೈಟ್ ಸ್ಪಾರ್ಕ್ ಸದಸ್ಯ ಪ್ರಕಟಣೆಯಲ್ಲಿ ಒತ್ತಾಯಿಸುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here