ಬಿಜೆಪಿಯಿಂದ ತಳವಾರ, ಪರಿವಾರ ಸಮುದಾಯಗಳಿಗೆ ಅನ್ಯಾಯ: ತಿಪ್ಪಣ್ಣಪ್ಪ ಕಮಕನೂರ

0
378

ಕಲಬುರಗಿ: ಬಿಜೆಪಿ ಸರಕಾರದಿಂದ ರಾಜ್ಯದಲ್ಲಿ ಹಿಂದುಳಿದ, ದಲಿತ, ಧ್ವನಿಯಿಲ್ಲದ ತಳಮಟ್ಟದ ಸಮುದಾಯಗಳಿಗೆ ನಿರಂತರವಾಗಿ ಅನ್ಯಾಯವಾಗತ್ತಿದೆ, ಪ್ರಸ್ತುತ ತಳವಾರ, ಪರಿವಾರ ಜನರಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯ ತಾಜ ಉದಾಹರಣೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ 24 ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ ಎಂಟನೇ ದಿನದ ಸರತಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರಕಾರ ತನ್ನ ಮನಸ್ಸಿಗೆ ಬಂದಂತೆ ವರ್ತಿಸುತ್ತಿದೆ. ಇದು ಒಂದು ಸಮುದಾಯದ ಸರ್ಕಾರವಾಗಿದೆ, ಏಕೆಂದರೆ ತಳವಾರ ಪರಿವಾರ ಸಮಾಜದ ಜನರಿಗೆ ಸಿಗಬೇಕಾದ ಸಾವಿಧಾನಿಕ ಹಕ್ಕು ಯಾರದೋ ಹಿತಾಸಕ್ತಿ ಕಾಪಾಡಲು ಕಿತ್ತುಕೊಳ್ಳುವ ಮುಖಾಂತರ ಅನ್ಯಾಯ ಮಾಡುತ್ತಿದೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಆಗಮಿಸಿದ ಮುಖ್ಯಮಂತ್ರಿಗಳು ಧರಣಿ ನಿರತ ಸ್ಥಳದ ಹತ್ತಿರದಲ್ಲೇ ಹಾದುಹೋದರು ಭೇಟಿ ನೀಡಿಲ್ಲ. ಇದು ತಳವಾರ ಪರಿವಾರ ಸಮಾಜದವರಿಗೆ ಮಾಡಿದ ಅವಮಾನವಾಗಿದೆ.

ಬಿಜೆಪಿ ಪಕ್ಷದಲ್ಲಿರುವ ತಳವಾರ, ಪರಿವಾರ ಸಮಾಜದ ಮುಖಂಡರಿಗೆ ಕಾಶಿನಕಿಮ್ಮತ್ತು ಇಲ್ಲವೆಂಬುವುದು ಮುಖ್ಯಮಂತ್ರಿಗಳು ಹಾಗೂ ಈ ಭಾಗದ ಶಾಸಕ ಸಂಸದರು ಸಾಬೀತುಪಡಿಸಿದ್ದಾರೆ.

ಸೌಜನ್ಯಕ್ಕಾದರೂ ಇಲ್ಲಿನ ಬಿಜೆಪಿಯ ಶಾಸಕ ಸಂಸದರು ಧರಣಿ ನಿರತ ಸ್ಥಳಕ್ಕೆ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬರಬೇಕಾಗಿತ್ತು. ಒಂದು ಸಮುದಾಯದ ಬೇಡಿಕೆಯನ್ನು ಕಡೆಗಣಿಸಿ ಆ ಜನಾಂಗದವರ ಮನಸಿಗೆ ನೋವುಂಟು ಮಾಡುವ ರೀತಿಯಲ್ಲಿ ಅವಮಾನಿಸಿದ್ದಾರೆ. ಯಾವ ನೈತಿಕಕಥೆಯ ಆಧಾರದ ಮೇಲೆ ಮಂತ್ರಿಗಿರಿಯ ಸ್ಥಾನ ಕೇಳುತ್ತಿದ್ದೀರಿ ಎಂಬುದು ನಿಮಗೆ ಅರಿವಿಗೆ ಬಂದಿದೆಯಾ? ಅದು ತಳವಾರ, ಪರಿವಾರ ಸಮುದಾಯದವರ ಜೊತೆಗೆ ಕೋಲಿ ಸಮುದಾಯದ ವೋಟು ಪಡೆದುಕೊಂಡು ಶಾಸಕರಾಗಿದ್ದರು ಎಂಬುವುದನ್ನು ಮರೆತಿರುವ ನಿಮಗೆ ಸಚಿವ ಸ್ಥಾನ ಕೇಳಲು ನಾಚಿಕೆಯಾಗಬೇಕು.

ಕೂಡಲೇ ಬಿಜೆಪಿ ಪಕ್ಷದಲ್ಲಿರುವ ತಳವಾರ, ಪರಿವಾರ ಸಮಾಜದವರ ಜೊತೆಗೆ ಕೋಲಿ ಕಬ್ಬಲಿಗ ಸಮುದಾಯದವರು ಕೂಡ ಪಕ್ಷದಲ್ಲಿ ವಹಿಸಿಕೊಂಡಿರುವ ಜವಾಬ್ದಾರಿ ಸ್ಥಾನಗಳಿಗೆ ಕೂಡಲೇ ರಾಜೀನಾಮೆ ನೀಡಿ ಇಲ್ಲದಿದ್ದರೆ ಇವರು ನಿಮಗೆ ಮುಂದಿನ ದಿನಗಳಲ್ಲಿ ಕಸದಕಿಂತ ಕಡೆ ಕಾಣುತ್ತಾರೆ.

ಯುವಕರು ಮಾಡುತ್ತಿರುವ ಈ ಹೋರಾಟಕ್ಕೆ ನಾನು ಮತ್ತು ನಮ್ಮ ಪಕ್ಷದವತಿಯಿಂದ ಬೆಂಬಲ ನೀಡುತ್ತೇವೆ. ಅವರ ಬೇಡಿಕೆಗೆ ಸರಕಾರ ಕೂಡಲೇ ಸ್ಪಂದಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾಗಿ ಹೋರಾಟ ಮಾಡಲು ಅವರೊಂದಿಗೆ ಕೈಜೋಡಿಸುತ್ತೇವೆ.

ಇದು ಬಿಜೆಪಿ ಸರಕಾರ ಹಗುರವಾಗಿ ಪರಿಗಣಿಸಬಾರದು. ಹಾಗೇನಾದರೂ ಆದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಡಾ: ಸರ್ದಾರ ರಾಯಪ್ಪ, ಸುನಿತಾ ಎಂ ತಳವಾರ, ದೇವೇಂದ್ರ ಕೆ ಚಿದರಹಳ್ಳಿ, ಚಂದ್ರಶೇಖರ ಜಮಾದಾರ ವಕೀಲರು, ವಿಜಯ ಎಮ್ ವಡಗೇರಿ, ಚಂದ್ರಕಾಂತ ಗಂವ್ಹಾರ, ಶರಣು ಕೋಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here