ಗ್ರಾಮ ಪಂಚಾಯಿತಿ ಹೊಸಕಟ್ಟಡ ಕಾಮಗಾರಿ ಆರಂಭ

0
60

ಮಾಲೂರು: ತಾಲ್ಲೂಕಿನ ಅರಳೇರಿ ಗ್ರಾಮ ಪಂಚಾಯಿತಿಯು ಹಳೆಯ ಕಟ್ಟಡವನ್ನು ಹೊಂದಿದ್ದು, ಗ್ರಾಮ ಪಂಚಾಯಿತಿಗೆ ಬರುವ ಸಾರ್ವಜನಿಕರಿಗೆ ಹಾಗೂ ಪಂಚಾಯತಿಯ ಸಿಬ್ಬಂದಿಗೂ ಕೆಲಸ ಕಾರ್ಯಗಳನ್ನು ಮಾಡಲು ತುಂಬಾ ಕಷ್ಟವಾಗುತ್ತಿತ್ತು.

ಇದೀಗ ಅರಳೇರಿ ಗ್ರಾಮ ಪಂಚಾಯಿತಿಗೆ ಶುಕ್ರದೆಸೆ ಕೂಡಿ ಬಂದಿದ್ದು, ಹೊಸ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೇ ಕಟ್ಟಡ ನಿರ್ಮಾಣಕ್ಕೆ  ೧೬ ಲಕ್ಷ ಹಣ ಬಿಡುಗಡೆಯಾಗಿದೆ.

Contact Your\'s Advertisement; 9902492681

ಹೊಸ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿಯ ಉಸ್ತುವಾರಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸುಮಿತಿ ಮತ್ತು ಪಂಚಾಯತಿಯ ಕಾರ್ಯದರ್ಶಿಗಳಾದ ಮುನಿವೆಂಕಟಪ್ಪರವರು ವಹಿಸಿಕೊಂಡಿದ್ದು ಕಟ್ಟಡ ನಿರ್ಮಾಣ ಕಾರ್ಯವನ್ನು ಬಹು ಬೇಗ ಮುಗಿಸಿ ಸಾರ್ವಜನಿಕರ ಸೇವೆಗೆ ಒದಗಿಸಲಿ ಎಂದು ಸ್ಥಳೀಯರಾದ ಸಂಪತ್ ಕುಮಾರ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here