ಸೆರೆವಾಸದಲ್ಲಿರುವ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಜೀವ ಉಳಿಸಿ; ಭಿತ್ತಿಪತ್ರ ಪ್ರದರ್ಶನ

0
26

ಕುಂದಾಪುರ : ಹತ್ರಾಸ್ ನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಮನೆಯವರಿಗೆ ಸಾಂತ್ವನ ನೀಡಲು ತೆರಳಿದ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ನನ್ನು ಪೋಲಿಸರು ಅನ್ಯಾಯವಾಗಿ ಬಂಧಿಸಿ ಯುಎಪಿಎ ಕೇಸು ದಾಖಲಿಸಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ.

ಆದರೆ ಅವರಿಗೆ ಹೃದಯ ಸಂಭಂದಿತ ಅನಾರೋಗ್ಯದಿಂದ ಹಲವಾರು ವರ್ಷಗಳಿಂದ ಪರದಾಡುತ್ತಿದ್ದರು, ಜೈಲಿನಲ್ಲಿರುವಾಗಲೇ ಅವರ ಶಸ್ತ್ರಚಿಕಿತ್ಸೆ ಕೂಡ ನಡೆದಿದ್ದು ಇದೀಗ ಸರಿಯಾದ ಆರೈಕೆ ಸಿಗದ ಕಾರಣ ದೇಹದ ಎಡಭಾಗ ಬಲಹೀನವಾಗಿದ್ದು ಅವರ ಜೀವವೇ ಅಪಾಯದಲ್ಲಿದೆ.

Contact Your\'s Advertisement; 9902492681

ಅನ್ಯಾಯವಾಗಿ ಬಂಧಿಸಲ್ಪಟ್ಟು ಇದೀಗ ಜೈಲಿನಲ್ಲಿಯೇ ಸಾಂಸ್ಥಿಕ ಹತ್ಯೆ ನಡೆಸಲು ಯುಪಿ ಸರ್ಕಾರ ಪ್ರಯತ್ನ ಪಡುತ್ತಿದೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಸಮಿತಿ ವತಿಯಿಂದ ಭಿತ್ತಿಪತ್ರ ಪ್ರದರ್ಶಿಸಿ ಅತೀಕುರ್ರಹ್ಮಾನ್ ಜೀವ ಉಳಿಸಿ, ತಕ್ಷಣ ಬಿಡುಗಡೆಗೊಳಿಸಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here