ಕಲಬುರಗಿ ಸದರ್ ಖಾಜಿಯಾಗಿ ಡಾ. ಹಮೀದ್ ಫೈಸಲ್ ಸಿದ್ದಿಖಿ ಪದಗ್ರಹ

0
71

ಕಲಬುರಗಿ: ಇಲ್ಲಿನ ಸಾದತ್ ಫಂಕ್ಷನ್ ಹಾಲ್ ನಲ್ಲಿ ನಿನ್ನೆ ಕಲಬುರಗಿ ಜಿಲ್ಲೆಯ ಸದರ್ (ಅಧ್ಯಕ್ಷ) ಖಾಜಿಯಾಗಿ ಡಾ. ಹಮೀದ್ ಫೈಸಲ್ ಸಿದ್ದೀಖಿ ಖಾಜಿ ಅವರ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಾಜ್ಯದ ಖಾಜಿ ಮುಖಂಡರು ಸೇರಿದಂತೆ ಮುಖ್ಯಅತಿಥಿಯಾಗಿ ಶೇಖ್ ರೋಜ ದರ್ಗಾದ ಪೀಠಾಧಿಪತಿಗಳಾದ ಡಾ. ಅಫ್ಜಲುದ್ದೀನ್ ಸಿರಾಜ್ ಬಾಬಾ ಜುನೈದಿ, ಕೆ.ಬಿ.ಎನ್ ದ ನಿಜಾಮ್ ಬಾಬಾ ಪೀರ್ ದರ್ಗಾದ ಪೀಠಾಧಿಪತಿ ಹಜರತ್ ಯದುಲ್ಲಾ ಹುಸೇನಿ, ತೈಗ್ ಬರ್ಹಾನಾ ದರ್ಗಾದ ಪೀಠಾಧಿಪತಿಗಳಾದ ಹಿಸ್ಸಮ್ಮುದ್ದೀನ್ ಹಶಮ್ ಸೇರಿದಂತೆ ಖಾಜಿ ಪರಿವಾರದ ಮುಖಂಡರು ಮತ್ತು ಸದಸ್ಯರು ಇದ್ದರು.

Contact Your\'s Advertisement; 9902492681

ಈ ಹಿಂದೆ ಖಾಜಿ ಮೊಹಮ್ಮದ್ ಹುಸೇನ್ ಸಿದ್ದಿಖಿ ಕಲಬುರಗಿ ಜಿಲ್ಲೆಯ ಖಾಜಿ ಸದರ್ ಆಗಿದ್ದರು, ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರರಾದ ಡಾ. ಹಮೀದ್ ಫೈಸಲ್ ಸಿದ್ದಿಖಿ ಪ್ರಸ್ತುತ ಖಾಜಿ ಸದರ್ ಆಗಿ ನಿಯೋಕ್ತರಾಗಿದ್ದಾರೆ. 316 ವರ್ಷಗಳ ಹಳೆ ಖಾಜಿ ಪರಂಪಾರೆ ಹುದ್ದೆ ಇದಾಗಿದೆ.

ಪದಗ್ರಹಣದ ನಂತರ ಸೀಖ್  ಸಮುದಾಯದ ಗುರುಮಿತ್ ಸಿಂಗ್, ಚರ್ಚ್ ಪಾದರಿ, ರೀಜ್ವಾನ್ ರಹೇಮಾನ್ ಸಿದ್ದಿಖಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ್, ಖಾಜಿ ಮಹೊಮದ್ ಗೇಸುದರಾಜ್, ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಸಜ್ಜಾದ್ ಅಲಿ ಇನಾಮ್ದಾರ್ ಸೇರಿದಂದ ನಗರದ ಪ್ರಮುಖ ಗಣ್ಯರು ಹಾಗೂ ಧರ್ಮ ಗುರುಗಳು ನೂತನ ಸದರ್ ಖಾಜಿ ಅವರಿಗೆ ಸನ್ಮಾನಿಸಿ ಶುಭ ಕೋರಿ ಅಭಿನಂದಿಸಿದರು.

ಫೋಟೋ: ಸರ್ಫರಾಜ್ ಬೇಗ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here