ಶರಣರು ವಿಶ್ವಕಂಡ ಪ್ರಥಮ ವಿಜ್ಞಾನಿಗಳು: ನಾಡೋಜ ಡಾ.ಪಿ.ಎಸ್. ಶಂಕರ

0
55

ಕಲಬುರಗಿ: ಪಾಶ್ಚಿಮಾತ್ಯ ದೇಶಗಳಲ್ಲಿ ಮನುಷ್ಯನದೇಹದರಚನೆಯ ಸಂಪೂರ್ಣಅರಿವುಇರದೇಇದ್ದಂತಹ ಕಾಲವೆಂದರೆ ಹನ್ನೆರಡನೆಯ ಶತಮಾನ. ಅವರಿಗೆ ಮಾನದದೇಹದರಚನೆಕುರಿತುಅರಿವು ಮೂಡಿದ್ದೇ ಹದಿನಾರನೆಯ ಶತಮಾನದ ನಂತರದಲ್ಲಿಆದರೆ ಹನ್ನೆರಡನೆಯ ಶತಮಾನದಲ್ಲಿದ್ದ ಶರಣರು ಅಜ್ಞಾತವಾಗಿದ್ದಂತಹ ದೇಹದರಚನೆ ಅಥವಾ ವೈಜ್ಞಾನಿಕ ವಿಚಾರಗಳ ಬಗ್ಗೆ ತಮ್ಮ ವಚನಗಳಲ್ಲಿ ಉಲ್ಲೇಖಿಸಿರುವುದು ನಿಜಕ್ಕೂಗಮನಾರ್ಹ ಸಂಗತಿ.

ಬಸವ ಸಮಿತಿಯಅನುಭವ ಮಂಟಪದಲ್ಲಿ ಲಿಂ. ಶ್ರೀ ಬಸವರಾಜ ಸಗರ ಸ್ಮರಣಾರ್ಥಅರಿವಿನ ಮನೆ ೬೪೧ ನೆಯದತ್ತಿಕಾರ್ಯಕ್ರಮದಲ್ಲಿ ವಚನಗಳಲ್ಲಿ ವಿಜ್ಞಾನ ಎಂಬ ವಿಷಯದ ಮೇಲೆ ಅನುಭಾವ ನೀಡಿದ ನಾಡೋಜ ಡಾ.ಪಿ.ಎಸ್. ಶಂಕರ ವಚನಕಾರರು ತಮ್ಮ ಅನೇಕ ವಚನಗಳಲ್ಲಿ ದೇಹದಅಂಗರಚನೆ, ಅದು ಕಾರ್ಯನಿರ್ವಹಿಸುವ ವಿಧಾನ ಹೊಸ ಜೀವಹೇಗೆ ಸೃಷ್ಟ್ರಿಯಾಗುತ್ತದೆ. ಮನಸಿನ ಸ್ಥಿತಿಗತಿ ಯಾವರೀತಿ ಏರು ಪೇರಾಗುತ್ತದೆ. ದೇಹವನ್ನುಆಕ್ರಮಿಸುವ ರೋಗರುಜಿನಗಳ ಬಗ್ಗೆ. ಅವುಗಳ ಉಪಶಮನದ ಬಗ್ಗೆಯೂ ಬರೆದಿದ್ದಾರೆ. ದೇಹರಚನೆ ಮತ್ತು ಮನಸಿನ ಸ್ಥಿತ್ಯಂತರಗಳ ಬಗ್ಗೆ ಶರಣರಿಗೆ ವೈಜ್ಞಾನಿಕದೃಷ್ಟಿಕೋನವಿತ್ತುಎಂಬುದನ್ನುಅವರ ವಚನಗಳನ್ನು ಅಧ್ಯಯನ ಮಾಡಿದಾಗಗೊತ್ತಾಗುತ್ತದೆ.

Contact Your\'s Advertisement; 9902492681

ಮನುಷ್ಯತಾನು ಹುಟ್ಟಿದ ಮೇಲೆ ಹೊಸತನ್ನುಕಂಡು ಹಿಡಿಯುತ್ತಾ ಹೋದನು.ಅದನ್ನೇ ವೈಜ್ಞಾನಿಕ ಅವಿಷ್ಕಾರವೆಂತಲೂಕರೆಯುತ್ತಾರೆ. ಈ ಎಲ್ಲ ಅವಿಷ್ಕಾರಗಳು ನಮಗೆ ಗೊತ್ತಾಗಿದ್ದು ಪಾಶ್ಚಿಮಾತ್ಯ ದೇಶಗಳ ಮುಖಾಂತರ ಹನ್ನೆರಡನೆಯ ಶತಮಾನದ ಪ್ರಭುದೇವರುಕಾಣದುದನುಅರಸುವರಲ್ಲದೆಕಂಡುದನಅರಸುವರೆ ಹೇಳು’ ಎಂದು ತಮ್ಮ ವಚನದ ಮುಖಾಂತರ ಹೊಸತನ್ನುಕಂಡು ಹಿಡಿಯುವತುಡಿತವನ್ನು ವ್ಯಕ್ತಪಡಿಸಿದ್ದಾರೆ.

ಜಗತ್ತಿನಎಲ್ಲ ಜೀವರಾಶಿಗಳು ಶಕ್ತಿಯನ್ನು ಪಡೆಯುವುದು ಸೂರ್ಯನಿಂದ. ಸೂರ್ಯನ ಸೌರಶಕ್ತಿ ಜೀವರಾಶಿಗಳ ಮೇಲೆ ಅಗಾಧವಾದಂತಹ ಪರಿಣಾಮವನ್ನು ಬೀರುತ್ತದೆ. ಅದನ್ನೇಅಕ್ಕಮಹಾದೇವಿ ತನ್ನ ವಚನದಲ್ಲಿ ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜಎಂದು ಹೇಳಿ ಲೋಕದ ಜೀವಿಗಳ ಪ್ರಕ್ರಿಯೆಗೆ ಸೂರ್ಯನೇಆಧಾರಎಂದು ಹೇಳುತ್ತಾಳೆ.ಅಮುಗೆ ರಾಯಮ್ಮತನ್ನ ವಚನವೊಂದರಲ್ಲಿ ಸೂರ್ಯಂಗೆಅಲ್ಲಿಇಲ್ಲಿಎಂದು ಸಂದೇಹವುಂಟೆ ಹೇಳುತ್ತಾಳೆ.

ಇವರಿಗೆ ಸೂರ್ಯನಅಗಾಧವಾದಂತಹ ಪರಿಚಯವಿದ್ದುದು ವಚನಗಳ ಮುಖಾಂತರ ನಮಗೆ ಗೊತ್ತಾಗುತ್ತದೆ.ಸೂರ್ಯನಿಲ್ಲದೆ ಹಗಲುಂಟೆಅಯ್ಯ?ದೀಪವಿಲ್ಲದೆ ಬೆಳಕುಂಟೆ ಅಯ್ಯ, ಪುಷ್ಪವಿಲ್ಲದೆ ಪರಿಮಳವುಂಟೆ ಅಯ್ಯಎಂದುಉರಿ ಲಿಂಗ ಪೆದ್ದಿಗಳು ತಮ್ಮ ವಚನದಲ್ಲಿ ಹೇಳಿರುವುದನ್ನು ನೋಡಿದರೆಯಾವ ವಸ್ತುವಿನಿಂದಏನನ್ನು ಪಡೆಯುವುದು ಸಾಧ್ಯ ಎಂಬ ವೈಜ್ಞಾನಿಕಚಿಂತನೆಅವರಲ್ಲಿತ್ತು.ಬಸವಣ್ಣನವರುದೃಶ್ಯವಾದರವಿಯ ಬೆಳಗು ಆಕಾಶದ ವಿಸ್ತೀರ್ಣ, ವಾಯುವಿನ ಚಲನೆ, ತರುಗುಮ್ಮ ಲತಾದಿಗಳಲ್ಲಿ ತಳಿರು.ಪುಷ್ಪ ಷಡು ವರ್ಣಂಗಳೆಲ್ಲ ಹಗಲಿನ ಪೂಜೆಎಂದು ಹೇಳುತ್ತಾರೆ.ಜೀವದ ಉಗಮ ನೀರಿನಿಂದಾದುದುಎಂಬುದು ಶರಣರಿಗೆಗೊತ್ತಿತ್ತು.

ತಮ್ಮ ಅನೇಕ ವಚನಗಳಲ್ಲಿ ಆಹಾರ, ವೈದ್ಯಕಿಯ, ಜೀವ ಪ್ರಜನಗಳ ಬಗ್ಗೆ ಬರೆದಿದ್ದನ್ನು ನಾವು ಕಾಣಬಹುದಾಗಿದೆ. ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ.ಜಯಶ್ರೀದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ, ದತ್ತಿ ದಾಸೋಹಿಗಳಾದ ಶ್ರೀಮತಿ ಸಾವಿತ್ರಿ ಸಗರ ಉಪಸ್ಥಿರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here