ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹ: ರಾಷ್ಟ್ರೀಯ ವಿಪತ್ತು ಘೋಷಣೆಗೆ ಜೆಡಿಎಸ್ ಒತ್ತಾಯ

0
54

ಕಲಬುರಗಿ: ಕಳೆದ ನಾಲ್ಕೈದು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ ಜಿಲ್ಲೆಯಲ್ಲಿ ಸುಮಾರು 200 ಹಳ್ಳಿಗಳು ಮುಳುಗಡೆಯಾಗುತ್ತಿವೆ ಲಕ್ಷಾನುಗಟ್ಟಲೆ ಜನರು ನಿರಾಶ್ರಿತರಾಗಿದ್ದಾರೆ ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳು ನೀರು ಪಾಲಾಗಿದ್ದು, ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಜೆಡಿಎಸ್ ಜಿಲ್ಲಾ ಕಾಯಾ೯ಧಕ್ಷರಾದ ದೇವೇಗೌಡ ತೆಲ್ಲೂರ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಸುಮಾರು ನಾಲ್ಕು ದಿನದಿಂದ ಅನೇಕ ಹಳ್ಳಿಗಳಿಗೆ ವಿದ್ಯುತ್ ಇಲ್ಲ ಕುಡಿಯುವ ನೀರಿಲ್ಲ ಜಿಲ್ಲೆಯಲ್ಲಿ ಎಲ್ಲ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ ಈ ಹಿಂದಿನ ಪ್ರವಾಹಕ್ಕಿಂತ ಭೀಕರ ಪ್ರವಾಹ ಇದಾಗಿದೆ ಇಷ್ಟೆಲ್ಲಾ ಅನಾಹುಥ ಆಗುತ್ತಿದ್ದರೂ ಸರ್ಕಾರ ಈ ಕಡೆ ಸ್ಪರ್ಧಿಸುತ್ತಿಲ್ಲ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಮಟ್ಟಿಗೆ ಪರಿಸ್ಥಿತಿ ಬಂದೊದಗಿದೆ ಅತಿವೃಷ್ಟಿಯಿಂದ ರೈತರ ಸಂಪೂರ್ಣ ಬೆಳೆ ಹಾನಿಯಾಗಿದ್ದು ಜಿಲ್ಲಾಡಾಳಿತದ ಕಣ್ಣು ಕಾಣಿಸುತ್ತಿಲ್ಲ  ಇಂಥ ಭೀಕರ ಪರಿಸ್ಥಿತಿಯಲ್ಲಿ ಇಲ್ಲಿಯೇ ಠಿಕಾಣಿ ಹೂಡಿ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ತಕ್ಷಣವೇ ಕಾರ್ಯಪ್ರವರ್ತರಾಗಬೇಕು ಬೆಳೆ ಹಾನಿಯಾದ ಇಪ್ಪತ್ತೈದು ಪ್ರತಿಶತ ಹಣವನ್ನು ಪ್ರತಿ ರೈತರ ಖಾತೆಗೆ ವಿಮಾ  ಕಂಪನಿಗಳಿಂದ ಹಣ ಸಂದಾಯ ಮಾಡಲು ಸೂಚಿಸಬೇಕು ಎಂದು ಒತ್ತಾಯಿಸಿದ ಆವರು ವಿಪತ್ತು ನಡೆಯಲ್ಲಿ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು,

ನಿಷ್ಕ್ರಿಯ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುತ್ತೇವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here