ಪ್ರವಾಹದಿಂದ ಬೆಳೆ, ಆಸ್ತಿ-ಪಾಸ್ತಿ ನಾಶವಾದರೂ ಸ್ಪಂದನೆ ನೀಡದ ನೀಡದ ಸರಕಾರ- ಪ್ರಿಯಾಂಕ್ ಖರ್ಗೆ

0
31

ಶಹಾಬಾದ:ಕರ್ನಾಟಕದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾಗೂ ಆಸ್ತಿಪಾಸ್ತಿ ನಾಶವಾಗಿದೆ.ಜನರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಆದರೇ ಬಿಜೆಪಿ ಸರಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಅವರು ಶುಕ್ರವಾರ ಪ್ರವಾಹ ಪೀಡಿತ ಗ್ರಾಮಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹದಿಂದ ಸಾಕಷ್ಟು ಹಾನಿಯಾಗಿ ಜನರು ತತ್ತರಿಸಿ ಹೋಗಿದ್ದಾರೆ. ಆದರೂ ಇಲ್ಲಿಯವರೆಗೆ ಸರಕಾರದಿಂದ ಯಾರು ಕೂಡ ಸ್ಪಂದನೆ ನೀಡಿಲ್ಲ.ವಿಶೇಷ ಪ್ಯಾಕೇಜ ಘೋಷಣೆ ಮಾಡಿಲ್ಲ. ಪಿಡಿ ಖಾತೆಯಲ್ಲಿ ಹಣಯಿದೆ ಬಳಸಿಕೊಳ್ಳಿ ಎಂದು ಕಂದಾಯ ಸಚಿವರಿಗೆ ಹೇಳಿದರೇ, ಅವರಿಗೆ ವಾಸ್ತವಾಂಶದ ತಿಳುವಳಿಕೆಯಿಲ್ಲ ಎನ್ನುವುದು ಎದ್ದು ಕಾಣುತ್ತದೆ.ಇವತ್ತು ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಇಲ್ಲಿಯವರೆಗೆ ಬಗ್ಗೆ ಕೃಷಿ ಸಚಿವರಿಂದ ಒಂದು ಹೇಳಿಕೆ ಹೊರಬಂದಿಲ್ಲ ಎಂದರು.

Contact Your\'s Advertisement; 9902492681

ಪ್ರಧಾನಿ ಮೋದಿಯವರು ನೆರೆ ಪೀಡಿತ ಆಂಧ್ರ ಹಾಗೂ ತೆಲಂಗಾಣದ ಸಿಎಂ ಜತೆ ಮಾತನಾಡುತ್ತಾರೆ.ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಯ ಜತೆ ಮಾತನಾಡೊಲ್ಲ. ಆಂಧ್ರ ಹಾಗೂ ತೆಲಂಗಾಣದ ಸಿಎಂಗಳಿಗೆ ಪರಿಹಾರ ನೀಡುವ ಭರವಸೆ ನೀಡುತ್ತಾರೆ. ಆದರೆ ನಮ್ಮ ರಾಜ್ಯಕ್ಕೆ ಪರಿಹಾರದ ಭರವಸೆ ನೀಡುತ್ತಿಲ್ಲ. ಪ್ರಧಾನಿ ಮೋದಿಗೆ ಕನ್ನಡಿಗರಿಗೆಂದರೆ ಬಿಜೆಪಿಗೆ ಯಾಕಷ್ಟು ಅಲರ್ಜಿ. ವ್ಯಯಕ್ತಿಕವಾಗಿ ಯಡಿಯೂರಪ್ಪನವರ ಆಡಳಿತ ಅವರಿಗೆ ಇಷ್ಟ ಇಲ್ಲವಾ? ಕರ್ನಾಟಕದಲ್ಲಿ ತಮ್ಮದೇ ಸರಕಾರ ಹೊಂದಿದವರಿಗೆ ಮಾತನಾಡೋಲ್ಲ ಅಂದರೆ ಏನು ಸಂದೇಶ ಕಳಿಸುತ್ತಿದ್ದಾರೆ ರಾಜ್ಯಕ್ಕೆ. ಕೃಷಿ ಸಚಿವ ನಾಪತ್ತೆ, ಕಂದಾಯ ಸಚಿವ ನಾಪತ್ತೆ, ಸಣ್ಣ ನೀರಾವರಿ ಸಚಿವ ನಾಪತ್ತೆ, ಜಿಲ್ಲಾ ಉಸ್ತುವಾರಿ ಎಂದರೆ ಅಂಥೂ ದೇವರಿಗೆ ಗೊತ್ತು. ಶಿರಾದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.ಶಿರಾದ ಮೇಲೆ ಇರುವ ಪ್ರೀತಿ ಇಲ್ಲಿಲ್ಲ. ಇಷ್ಟ ಇಲ್ಲದಿದ್ದರೇ ಬಿಟ್ಟು ಬಿಡಿ.ನಮ್ಮ ಪಾಡಿಗೆ ನಾವು ನೋಡುತ್ತೆವೆ. ಕೆಕೆಆರಡಿಬಿ ಅನುದಾನವಿಲ್ಲ.ಹೆಸರು ಕೇಂದ್ರಗಳು ಪಾರಂಭ ಮಾಡಿಲ್ಲ. ಇನ್ಸೂರೆನ್ಸ ಇಲ್ಲ.ಕಳೆದ ಬಾರಿಯ ಬೆಳೆ ನಾಶದ ಪರಿಹಾರವೂ ನೀಡಿಲ್ಲ.ಯಾವ ರೀತಿ ಸರಕಾರ ನಡೆಯುತ್ತಿದೆ ಗೊತ್ತಿಲ್ಲ. ಕರೊನಾ ಜನರಿಗೆ ಸೊಂಕು ಹಿಡಿದಿದೆ.  ಭ್ರಷ್ಟಾಚಾರದ ಸೊಂಕು ಬಿಜೆಪಿ ಸರಕಾರಕ್ಕೆ ಹಿಡಿದಿದೆ. ಸೊಂಕಿತ ಸರಕಾರ ಇದಾಗಿದೆ ಎಂದು ಆರೋಪಿಸಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here