ಕಲ್ಯಾಣಬಂಧು ತೋಂಟದ ಸಿಂಧು ಗ್ರಂಥ ಲೋಕಾರ್ಪಣೆ  

0
46

ಭಾಲ್ಕಿ: ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮ ನಾಡು ಕಂಡ ಶ್ರೇಷ್ಠ ಮಹಾನುಭಾವಿಗಳು. ಗದುಗಿನ ತೋಂಟದಾರ್ಯ ಮಠ ಹಾಗೂ ಭಾಲ್ಕಿ ಮಠ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರು ಆಯುಷ್ಯದುದ್ದಕ್ಕೂ ಸಮಾಜಕ್ಕಾಗಿ ದುಡಿದರೂ ಬೀದರ ಜಿಲ್ಲೆ ಹೊರತುಪಡಿಸಿ ಕರ್ನಾಟಕದಲ್ಲಿ ಬೇರೆ ಯಾವ ಜಿಲ್ಲೆಯ ಮಠಾಧೀಶರು ಪೂಜ್ಯರಿಗೆ ಆಮಂತ್ರಣ ಕೊಟ್ಟಿರಲಿಲ್ಲ. ಪ್ರಪ್ರಥಮವಾಗಿ ಗದುಗಿನ ಪೂಜ್ಯ ಶ್ರೀ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪೂಜ್ಯರಿಗೆ ಗದಗ ಜಾತ್ರಾ ಮಹೋತ್ಸವದಲ್ಲಿ ಕರೆಯಿಸಿ ಅದ್ದೂರಿಯಾಗಿ ಸನ್ಮಾನಿಸಿದರು.

ಪೂಜ್ಯರ ಕಾರ್ಯಗಳನ್ನು ಬೀದರ ಜಿಲ್ಲೆಯ ಹೊರಗಡೆ ಪರಿಚಿಯಿಸಿದ ಕೀರ್ತಿ ಜಗದ್ಗುರುಗಳಿಗೆ ಸಲ್ಲುತ್ತದೆ. ಗದಗ ಶ್ರೀಮಠದಲ್ಲಿ ಶ್ರಾವಣ ಮಾಸದ ಒಂದು ತಿಂಗಳು ಪ್ರವಚನದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಚರಿತ್ರೆ ಆ ಭಾಗದ ಜನರಿಗೆ ಉಣಬಡಿಸಿದ ಕೀರ್ತಿ ಜಗದ್ಗುರುಗಳಿಗೆ ಸಲ್ಲುತ್ತದೆ. ನಮಗೆ ಸಂಕಟ ಸಮಯದಲ್ಲಿ ನಮ್ಮ ಬೆನ್ನಿಗೆ ಧೈರ್ಯವಾಗಿ ನಿಂತು ಮುನ್ನಡೆಸುವ ಪ್ರೇರಣೆಯನ್ನು ಜಗದ್ಗುರುಗಳೆ ನೀಡಿದರು.

Contact Your\'s Advertisement; 9902492681

ನನ್ನ ಮೇಲಿರುವ ಅವರ ಅಪಾರ ಪ್ರೀತಿ ಎಂದೂ ಬೆಲೆ ಕಟ್ಟಲಿಕ್ಕೆ ಸಾಧ್ಯ ಇಲ್ಲ. ಆದರೂ ಅವರ ೨ನೇ ಪುಣ್ಯ ಸ್ಮರಣೆ ನಿಮಿತ್ಯವಾಗಿ ಕಲ್ಯಾಣ ಬಂಧು ತೋಂಟದ ಸಿಂಧು ಎಂಬ ಗ್ರಂಥವನ್ನು ಪ್ರಕಟಿಸುವ ಮೂಲಕ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು. ಪಟ್ಟಣ ಚನ್ನಬಸವಾಶ್ರಮದಲ್ಲಿ ಹಮ್ಮಿಕೊಂಡಿರುವ ೨೫೩ ನೆಯ ಮಾಸಿಕ ಶರಣ ಸಂಗಮ ಹಾಗೂ ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ೨ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕಲ್ಯಾಣಬಂಧು ತೋಂಟದ ಸಿಂಧು ಕೃತಿ ಲೋಕಾರ್ಪಣೆ ಸಮಾರಂಭದ ದಿವ್ಯಸನ್ನಿಧಾನ ವಹಿಸಿದರು.

ಶರಣ ವಿಶ್ವನಾಥಪ್ಪ ಬಿರಾದಾರ ಅವರಿಂದ ಕೃತಿ ಲೋಕಾರ್ಪಣೆ ಮಾಡಲಾಯಿತು. ಕೃತಿಯ ಸಂಪಾದಕರಾದ ಶರಣ ಡಾ.ಸೋಮನಾಥ ಯಾಳವಾರ ಅವರು ಕೃತಿಯ ಪರಿಚಯ ಮಾಡುವ ಮೂಲಕ ಜಗದ್ಗುರುಗಳ ಜೀವನ ಕಾರ್ಯವನ್ನು ಮನಮುಟ್ಟುವ ಹಾಗೆ ಪರಿಚಯಿಸಿದರು. ಪೂಜ್ಯ ಶ್ರೀ ನಿರಂಜನ ಸ್ವಾಮಿಗಳು, ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಜಗದೇವ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಶರಣ ಚಂದ್ರಕಾಂತ ಬಿರಾದಾರ ಅವರು ನಿರೂಪಿಸಿದರು. ಶರಣ ರಾಜು ಜುಬರೆ ಸ್ವಾಗತಿಸಿದರು.

ಶರಣ ವಿಶ್ವನಾಥಪ್ಪ ಬಿರಾದಾರ ಅವರಿಂದ ಕೃತಿ ಲೋಕಾರ್ಪಣೆ ಮಾಡಲಾಯಿತು. ಕೃತಿಯ ಸಂಪಾದಕರಾದ ಶರಣ ಡಾ.ಸೋಮನಾಥ ಯಾಳವಾರ ಅವರು ಕೃತಿಯ ಪರಿಚಯ ಮಾಡುವ ಮೂಲಕ ಜಗದ್ಗುರುಗಳ ಜೀವನ ಕಾರ್ಯವನ್ನು ಮನಮುಟ್ಟುವ ಹಾಗೆ ಪರಿಚಯಿಸಿದರು.

ಪೂಜ್ಯ ಶ್ರೀ ನಿರಂಜನ ಸ್ವಾಮಿಗಳು, ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಜಗದೇವ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಶರಣ ಚಂದ್ರಕಾಂತ ಬಿರಾದಾರ ಅವರು ನಿರೂಪಿಸಿದರು. ಶರಣ ರಾಜು ಜುಬರೆ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here