ಪ್ರಿಯಾಂಕ್ ಖರ್ಗೆ ಜನ್ಮದಿನದ  ಪ್ರಯುಕ್ತ ಬಟ್ಟೆ ವಿತರಣೆ

0
146

ಕಲಬುರಗಿ: ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಜನ್ಮದಿನದ ಪ್ರಯುಕ್ತ ಶಾಸಕ ಖರ್ಗೆ ಅವರ ಅಭಿಮಾನಿ ಬಳಗದಿಿಂದ ವಾಡಿ ಪಟ್ಟಣದಲ್ಲಿ ನಿರಾಶ್ರಿತರಿಗೆ ಬಟ್ಟೆ ನೀಡುವ ಮೂಲಕ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆಯ  ಬೀದಿ ಬದಿಯಲ್ಲಿ ಬದುಕು ಸಾಗಿಸುತ್ತಿರುವ ಭಿಕ್ಷುಕ ನಿರಾಶ್ರಿತ ಮಹಿಳೆಯರಿಗೆ ಮಕ್ಕಳಿಗೆ ಉಡುಪುಗಳನ್ನು ನೀಡಿ ಶಾಸಕ ಪ್ರೀಯಾಂಕ್ ಖರ್ಗೆ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

Contact Your\'s Advertisement; 9902492681

ಈ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ವಿಜಯ್ ಸಿಂಗೆ, ಪ್ರದೀಪ್ ಸಿಂಗೆ, ಅನಿಲ್ ಬಿಲ್ವಾರ್, ಹಿರಿಯ ಮುಖಂಡರಾದ ಇಂದ್ರಜಿತ್ ಸಿಂಗೆ, ಚಂದ್ರಸೇನ್ ಮೇನಗಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರವಾಹ ಹಾಗೂ ಕೊರೊನಾ ಹಾವಳಿಯಿಂದಾಗಿ ಜನ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸಿದಂತೆ ಶಾಸಕ ಖರ್ಗೆ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಬಟ್ಟೆ ವಿವರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here