ಗಬ್ಬು ನಾರುತ್ತಿರುವ ನಾಲಾ ಸುತ್ತಲ್ಲಿನ ಪ್ರದೇಶ ಸ್ವಚ್ಛಗೊಳಿಸಲು ಕರವೇ ಆಗ್ರಹ

0
72

ಕಲಬುರಗಿ: ನಗರದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ.32 ರ ಹಳೇ ಕಪನೂರಿನ ಮಾಸ್ತರ್ ಬಡಾವಣೆಯ ಗಲ್ಲಿಯಲ್ಲಿ ಇರುವ ನಾಲಾವೊಂದು ಪ್ರತಿದಿನವೂ ತುಂಬಿ ಹರಿಯುತ್ತಿದೆ. ಇದರಿಂದ ನಾಲಾ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದಾರೆ.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಬರೆದಿರುವ ಅವರು ಬಡಾವಣೆಯಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆ,ಜೊತೆಗೆ ಓಡಾಡಲು ತೊಂದರೆ ತಪ್ಪತ್ತಿಲ್ಲ , ಹಾಗಾಗಿ ನಾಲಾ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಅಲ್ಲಿ ಹರಿದು ಬರುವ ಚರಂಡಿ ನೀರನ್ನು ಸರಾಗವಾಗಿ ಮುಂದಕ್ಕೆ ಸಾಗದಂತೆ ಕ್ರಮ ಕೈಗೊಳ್ಳಬೇಕು ಕರವೇ ( ಕನ್ನಡಿಗರ ಬಣ) ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಈ ನಾಲಾ ಸ್ವಚ್ಚತೆಯ ಬಗ್ಗೆ ಮಹಾನಗರ ಪಾಲಿಕೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ . ಮೊದಲೇ ಕೊರೊನಾದಂತಹ ಭೀಕರ ಸೊಂಕು ಆವರಿಸಿರುವ ಹಿನ್ನೆಲೆಯಲ್ಲಿ ಕಪನೂರಿನ ಜನತೆ ನೆಗಡಿ,ಕೆಮ್ಮು ,ಜ್ವರಗಳಿಂದ ಬಳಲುತ್ತಿರುವ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಧೋರಣೆ ಎಷ್ಟರಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಆದಷ್ಟು ಬೇಗ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ ಒಂದು ವೇಳೆ ವಾರದಲ್ಲಿ ತಾವೂಗಳು ಕಪನೂರಿನ ಮಾಸ್ತರ್ ಬಡಾವಣೆಗೆ ಭೇಟಿ ನೀಡದಿದ್ದರೆ ಕಲಬುರಗಿ ಬೀದರ ರಾಷ್ಟ್ರೀಯ ಹೆದ್ದಾರಿ ಬಂದ ಮಾಡುವ ಮೂಲಕ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here