ಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅಪಾರವಾದದ್ದು

0
26

ಶಹಾಪುರ :ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಲ್ಲಿ ಕನಕದಾಸರು ಪ್ರಮುಖರು,ಕರ್ನಾಟಕ ಸಂಗೀತ ಹಾಗೂ ಸಾಹಿತ್ಯ ಮೂಲಭೂತ ಸಿದ್ಧಾಂತಗಳಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸಮಾಜದ ಮುಖಂಡರಾದ ಮಹೇಶ ರಸ್ತಾಪುರ ಹೇಳಿದರು.

ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ದಾಸ ಪರಂಪರೆಯಲ್ಲಿ ಬರುವ ಐವತ್ತು ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರು ಶ್ರೇಷ್ಠರಾಗಿದ್ದರು.ರಾಮಧ್ಯಾನ ಚರಿತೆ, ಹರಿಭಕ್ತಿಸಾರ,ಮೋಹನ ತರಂಗಿಣಿ,ಹಾಗೂ ಇನ್ನಿತರ ಮಹಾನ್ ಗ್ರಂಥಗಳ ರಚಿಸಿ ನಾಡಿಗೆ ಪರಿಚಯಿಸಿರು ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಲಿಂಗಯ್ಯ ತನಿಖೆದಾರ,ಕರೆಪ್ಪ ಮುದ್ದಪನೂರ್,ಮೈಲಾರಪ್ಪ ದಂಡಪ್ಪನೊರ್,ನಾಗರಾಜ್ ತನಿಖೆದಾರ,ಬೀರಪ್ಪ ಶರಬಣ್ಣ ಅಮ್ಮಣನೋರ,ದೊಡ್ಡಪ್ಪ ಆಮಣ್ಣೂರ್,ಶರಬಣ್ಣ ತನಿಖೆದಾರ ಗ್ರಾಮದ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here