ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಮ್ಮ ಬೆಂಬಲಿಗರ ಗೆಲ್ಲಿಸಿ: ರಾಜಾ ವೆಂಕಟಪ್ಪ ನಾಯಕ

0
36

ಸುರಪುರ: ತಾಲೂಕಿನ ಬೇವಿನಾಳ(ಎಸ್.ಎಚ್) ಗ್ರಾಮದ ಅನೇಕರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಸಮ್ಮುಖದಲ್ಲಿ ಗ್ರಾಮದ ರಾಯನಗೋಳ ಗ್ರಾಮಗಳ ಹಲವಾರು ಬಿಜೆಪಿ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು, ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಗ್ರಾಮಗಳಿಗೆ ಆದ್ಯತೆ ಕೊಟ್ಟು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೇನೆ ಅಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಾ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಹೇಳಿದ ಅವರು, ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗಳು ಹಾಗೂ ಇತರೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷವನ್ನು ಬಲಪಡಿಸಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ತರಲು ಶ್ರಮಿಸಬೇಕು ಎಂದು ಮನವಿ ಮಾಡಿದರು, ಕಾಂಗ್ರೆಸ್ ಪಕ್ಷ ಜಾತ್ಯಾತೀತ ತತ್ವ ಸಿದ್ದಾಂತಗಳಲ್ಲಿ ನಂಬಿಕೆ ಹೊಂದಿರುವ ಪಕ್ಷವಾಗಿದ್ದು ಎಲ್ಲಾ ಜಾತಿ ಜನಾಂಗಗಳನ್ನು ಒಂದೇ ರೀತಿಯಾಗಿ ಕಾಣುವ ಪಕ್ಷವಾಗಿದೆ ಎಂದು ಹೇಳಿದರು,

Contact Your\'s Advertisement; 9902492681

ನಂತರ ಬೇವಿನಾಳ ಗ್ರಾಮದ ದೇವೇಗೌಡ ಮಾಲಿ ಬಿರಾದಾರ,ಮರೆಪ್ಪ ರೊಡ್ಡರ್,ಸಂಗನಾಥ ಬಂಗೇರ,ರುದ್ರಪ್ಪ ಅಗಸಿಮನಿ,ಜಿಲಾನಿಸಾಬ ಮಾಸ್ತರ,ರಾಮಪ್ಪ ಗುಡಗುಂಟಿ,ಯಲ್ಲಪ್ಪ ರೊಡ್ಡರ್,ಭೀಮಣ್ಣ ಸಿಬಾರಬಂಡಿ,ಗುಲಾಮಸಾಬ,ಮಹ್ಮದಸಾಬ ಮಾಸ್ತರ,ಚುನ್ನುಮಿಯ್ಯ ಮಾಸ್ತರ, ಶಮ್ಮು ಮಾಸ್ತರ,ಭೀಮನಗೌಡ ಮಾಲಿಬಿರಾದಾರ,ಶಿವರಾಜಗೌಡ ಮಾಲಿಬಿರಾದಾರ,ಶಂಕ್ರೆಪ್ಪ ಬಂಗೇರ,ಶಿವಪ್ಪ ಬಂಗೇರ,ಭೀಮಣ್ಣ ಬಂಗೇರ,ಗುರುಬಸಪ್ಪ ಮಾಲಿ ಬಿರಾದಾರ ಪಕ್ಷ ಸೇರ್ಪಡೆಯಾದರು.

ಹಿರಿಯ ಮುಖಂಡ ಸೂಲಪ್ಪ ಕಮತಗಿ,ಕಿಶನರಾವ ಕುಲಕರ್ಣಿ ಬೇವಿನಾಳ,ನಿಂಗಣ್ಣ ಬಾದ್ಯಾಪುರ ಎಪಿಎಂಸಿ ಮಾಜಿ ಅಧ್ಯಕ್ಷರು,ಯುವ ಮುಖಂಡರಾದ ರಾಜಾ ರೂಪಕುಮಾರ ನಾಯಕ,ರಾಜಾ ವೇಣುಗೊಪಾಲ ನಾಯಕ,ರಾಜಾ ಕುಮಾರ ನಾಯಕ,ರಾಜಾ ಸಂತೋಷ ನಾಯಕ, ರಾಜಾ ಸುಶಾಂತ ನಾಯಕ, ನಿಂಗಣ್ಣ ಬಾಚಿಮಟ್ಟಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಸುರಪುರ, ಶ್ರೀನಿವಾಸ ಪಾಟೀಲ ಚೌಡೇಶ್ವರಿಹಾಳ, ದ್ಯಾವಪ್ಪ ಪೂಜಾರಿ ಅಡ್ಡೊಡಗಿ,ದಾನಪ್ಪ ಲಕ್ಷ್ಮೀಪುರ, ಬಸವರಾಜ ಬೇವಿನಾಳ ಇತರರಿದ್ದರು. ರಾಮುನಾಯಕ ಅರಳಹಳ್ಳಿ ನಿರೂಪಿಸಿದರು.

ರಾಯನಗೊಳ ಗ್ರಾಮಸ್ಥರ ಸೇರ್ಪಡೆ: ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಗೃಹ ಕಚೇರಿ ಆವರಣದಲ್ಲಿ
ರಾಯನಗೊಳ ಗ್ರಾಮದ ಶಿವಣ್ಣ ಗುರಿಕಾರ,ಮುತ್ತಪ್ಪಗೌಡ,ಹಣಮಪ್ಪ ಮಾರನಾಳ,ನಂದಪ್ಪ ಕಕ್ಕೇರಾ,ಹಣಮಪ್ಪ ಸಾಳಿ,ಹನುಮಪ್ಪಗೌಡ,ಶಿವಪ್ಪ ಬರದೇವನಾಳ,ಮುದಕಪ್ಪ ಗುರಿಕಾರ,ಹನುಮಪ್ಪ ಬಸಪ್ಪ ಗುರಿಕಾರ ಇತರರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here