ಸರ್ಕಾರದಿಂದ ಸೌಲಭ್ಯ ಒದಗಿಸಲು ಪ್ರಯತ್ನ: ಪಾಟೀಲ

0
21

ಕಲಬುರಗಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ೨೦೨೦ರ ವರೆಗೆ ಪ್ರತಿಯೊಬ್ಬರಿಗೂ ಮನೆಯನ್ನು ಹೊಂದಿರಬೇಕೆನ್ನುವ ಸಂಕಲ್ಪ ಹೊಂದಿದ್ದು, ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ನಿಮ್ಮ ಸಹಕಾರ ಸಂಘಕ್ಕೆ ಅಗತ್ಯವಾದ ಸೌಲಭ್ಯವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ದಕ್ಷಿಣ ಮತಕ್ಷೇತ್ರದ ಶಾಕಸ ಹಾಗೂ ಕೆಕೆಆ???ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಅವರು ಭಾನುವಾರ ನಗರದ ಚೆಂಬರ್ ಆಫ್ ಕಾಮರ್ಸನಲ್ಲಿ ಆಯೋಜಿಸಿದ್ದ ಸರಕಾರಿ/ಅರೆ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ದಶಮಾನೋತ್ಸವ ಹಾಗೂ ಸದಸ್ಯರ ಸಭೆಯ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ಹೌಸಿಂಗ್ ಫಾರ್ ಆಲ್ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಇದಕ್ಕಾಗಿ ೩ ರಿಂದ ೪ ಲಕ್ಷ ಸಬ್ಸಿಡಿ ಕೂಡ ನೀಡುತ್ತಿದೆ. ರಾಜ್ಯ ಸರ್ಕಾರ ಕೂಡ ಅನೇಕ ಸವಲತ್ತುಗಳನ್ನು ಮಾಡಿಕೊಂಡಿದೆ. ಇದರಿಂದ ನಿಮ್ಮ ಸಹಕಾರ ಸಂಘಕ್ಕೆ ಬೇಕಾಗುವ ಅನೂಕೂಲತೆಗಳನ್ನು ನಾನು ಮಾಡಿಕೊಡುವುದಾಗಿ ಭರಸವೆ ನೀಡಿದರು.

Contact Your\'s Advertisement; 9902492681

ರಾಜ್ಯ ಸರ್ಕಾರ ಕೊರೋನಾ ದಂತಹ ಸಂದರ್ಭದಲ್ಲಿಯೂ ಸಹ ಸರ್ಕಾರಿ ನೌಕರರ ಸಂಭಳವನ್ನು ಕಡಿತಗೊಳಿಸಿಲ್ಲ. ಹೀಗಾಗಿ ಸರ್ಕಾರಿ ನೌಕರರ ಪರವಾಗಿರುವ ನಮ್ಮ ಸರ್ಕಾರವೂ ಮುಂಬರುವ ದಿನಗಳಲ್ಲಿ ಅನೇಕ ಯೋಜನೆಗಳನ್ನು ಸರ್ಕಾರಿ ನೌಕರರ ಸಲುವಾಗಿ ತರಲಿದೆ ಎಂದರು. ಅದರಂತೆ ಕಲಬುರಗಿ ಸಿಟಿಯನ್ನು ಸ್ಮಾರ್ಟ ಸಿಟಿಯನ್ನಾಗಿಸಲು ನಮ್ಮ ಪಕ್ಷದ ಸಂಸದರು.ಶಾಸಕರು ಎಲ್ಲರು ಪಣ ತೊಟ್ಟಿದ್ದೇವೆ ಎಂದರು.

ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ ಮಾತನಾಡಿ, ಕಡಿಮೆ ಬೆಲೆಯನ್ನು ನಿವೇಶನ ನೀಡುವ ಕೆಲಸ ಹಿಂದೆ ಬಹಳವಿತ್ತು. ಈಗಿನ ಸಂದರ್ಭದಲ್ಲಿ ಅದು ಕಷ್ಟದ ಕೆಲಸವಾಗಿದೆ. ಹೀಗಾಗಿ ನಿಮ್ಮ ಎಲ್ಲಾ ಸದಸ್ಯರ ಬಳಿ ನನ್ನ ವಿನಂತಿಯಾಗಿದೆ. ಎಲ್ಲರಿಗೂ ನಿವೇಶನ ಕೊಡುವ ಕೆಲಸವನ್ನು ನಿಮ್ಮಿಂದ ಆಗಲಿ ಎಂದರು. ಇದಕ್ಕೆ ಪೂರಕವಾಗಿ ನಾವು ನಿಮಗೆ ಸಹಕಾರ ನೀಡಲಿದ್ದೇವೆ ಎಂದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್ ಮಾತನಾಡಿ, ಅಧಿಕಾರದ ಶಕ್ತಿ ಮೇಲೆ ಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕಂದರು. ಸರ್ಕಾರದಿಂದ ೧೦% ನಿವೇಶನ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲು ಆದೇಶವಿದೆ. ಹೀಗಾಗಿ ನಿಮ್ಮ ಸಹಕಾರ ಸಂಘಕ್ಕೆ ಬೇಕಾಗುವ ಎಲ್ಲ ಸವಲತ್ತು ನೀಡಲು ನಾನು ಸಿದ್ದನಿದ್ದೇನೆ ಎಂದು ಎಂದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಸ್.ದೇಸಾಯಿ ಮಾತನಾಡಿದರು. ಚಂದ್ರಾಮ ಹುಬ್ಬಳಿ, ಎಂ.ಡಿ.ಕಾಚಾಪುರ, ಚಂದ್ರಕಾಂತ ಅಷ್ಟಗಿ, ನಾಗೇಂದ್ರ ಪಾನಗಾಂವ್, ಬಾಲಚಂದ್ರ ನೆಲ್ಲೂರ್, ಚಾಂದಕವಟೆ, ಚಂದ್ರಕಾಂತ ಆರ್, ಮಹ್ಮದ್ ಖಾನ್, ಸತೀಶ ಜೋಶಿ, ತುಕಾರಾಮ ಕೋಂಗೆ ಸೇರಿದಂತೆ ಅನೇಕ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here