ಅಮರಶಿಲ್ಪಿ ಜಕಣಾಚಾರಿ ಸಂಸಣಾ ದಿನಾಚರಣೆ : ಸರಕಾರದ ನಿರ್ಧಾರಕ್ಕೆ ಸುತಾರ ಸ್ವಾಗತ

0
38

ಕಲಬುರಗಿ: ಶಿಲ್ಪಕಲೆಯಿಂದ ಭಾರತಕ್ಕೆ ಶ್ರೀಮಂತಗೊಳಿಸಿರುವ ಅಮರಶಿಲ್ಪಿ ಜಕಣಾಚಾರಿ ಸಂಸಣಾ ದಿನವನ್ನಾಗಿ ಜನವರಿ ೧ರಂದು ಆಚರಿಸಲು ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕಾರ್ಯಾಧ್ಯಕ್ಷ ದೇವೇಂದ್ರಪ್ಪ ಸುತಾರ ನರೋನಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ವಿಶ್ವಕರ್ಮ ಕೊಡುಗೆ ಅಪಾರವಾಗಿದ್ದು, ಶಿಲ್ಪಕಲೆಯಿಂದ ಭಾರತ ಶ್ರೀಮಂತವಾಗಿರುವ ಸರ್ವ ವಿಧತ ವಿಷಯವಾಗಿದೆ. ಶಿಲ್ಪಗಳು ಶ್ರೇಣಿಯಲ್ಲಿ ಮೊದಲು ನೆನಪಾಗುವ ಕಲಾವಿದನೇ ಜಕಣಾಚಾರಿ ಭಾರತದಾದ್ಯಂತ ಮಾಡಿರುವ ಶಿಲ್ಪ ಕಾರ್ಯ ಅಮರವಾಗಿದೆ ಎಂದು ಬಣ್ಣಿಸಿದರು.

Contact Your\'s Advertisement; 9902492681

ಸರಕಾರದ ಮಟ್ಟದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸಣಾ ದಿನವನ್ನಾಗಿ ಆಚರಿಸಲು ಪ್ರಮುಖ ಪಾತ್ರ ವಹಿಸಿರುವ ವಿಶ್ವಕರ್ಮ ಸಮುದಾಯ ನೇತಾರ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಅವರನ್ನು ಅಭಿನಂದಿಸಿದ ಅವರು, ಕರ್ನಾಟಕದಲ್ಲಿ ವಿಶ್ವಕರ್ಮ ಸಮುದಾಯದ ಜನಸಂಖ್ಯೆ ಸುಮಾರು ೪೦ ಲಕ್ಷ ಹಿಂದುಳಿದ ವಿಶ್ವಕರ್ಮ ಸಮಾಜವನ್ನು ಪ್ರತಿನಿಧಿಸಲು ಸರ್ಕಾರದಲ್ಲಿ ಶಾಸಕರಲ್ಲಿ ಸದ್ಯಕ್ಕೆ ಇರುವರು ನಂಜುಂಡಿ ಒಬ್ಬರೇ ಆಗಿದ್ದಾರೆ ಎಂದರು.

ಈ ಹಿಂದೆ ದೇವರಾಜ ಅರಸು ಅವರ ಕಾಲದಲ್ಲಿ ವಿಶ್ವಕರ್ಮ ಸಮಾಜದ ಜಮಖಂಡಿಯ ವಿ.ವಿ.ಪತ್ತಾರ ಅವರನ್ನು ಸಚಿವರನ್ನಾಗಿ ಮಾಡಿದ್ದು ಬಿಟ್ಟರೆ ಸ್ವಾತಂತ್ರದ ನಂತರ ಇತಿಹಾಸದಲ್ಲಿ ವಿಶ್ವಕರ್ಮ ಸಮುದಾಯದಲ್ಲಿ ಯಾರು ಸಚಿವರಾಗಿಲ್ಲ. ಬೇರೆ ಸಮುದಾಯಗಳು ಬೆಳವಣಿಗೆಯನ್ನು ಗಮನಿಸಿದರೆ ನಮ್ಮ ಸಮಜ ಸಮಾಜದ ಸ್ಥಿತಿ ದಯನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ವಿಶ್ವಕರ್ಮ ಸಮುದಾಯದ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಅವರ ಸಹಮತ ಪಡೆಯದೆ ಇತ್ತೀಚೆಗೆ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಬಾಬು ಪತ್ತಾರ್ ಅವರನ್ನು ಆಯ್ಕೆ ಮಾಡಿರುವುದು ವಿಶ್ವಕರ್ಮ ಸಮುದಾಯಕ್ಕೆ ಬೇಸರ ತಂದಿದ್ದು, ಸಮಾಜದ ರಾಜ್ಯಮಟ್ಟದ ಮುಖಂಡ ಪರಿಷತ್ ಸದಸ್ಯರಿಗೆ ಈ ರೀತಿ ಅವಮಾನ ಮಾಡಿರುವ ಸೂಕ್ತವಲ್ಲ. ಆದ್ದರಿಂದ ನಮ್ಮ ಮಹಾಸಭಾದ ರಾಜ್ಯ ಅಧ್ಯಕ್ಷರ ಸೂಚನೆಯಂತೆ ನಮ್ಮ ನಿಗಮ-ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ವಿಶ್ವಕರ್ಮ ಸಮಾಜದ ಅನೇಕ ಮಠಮಾನ್ಯಗಳು ಈ ಹಿಂದೆ ಇದ್ದ ಸ್ಥಿತಿಯಲ್ಲಿದ್ದು, ಅವರ ಸರ್ವಾಂಗೀಣ ಬೆಳವಣಿಗೆಸಲುವಾಗಿ ೨೦೨೧-೨೨ ವರ್ಷ ಅವಧಿಗೆ ನಿಗಮಕ್ಕೆ ಎರಡು ಕೋಟಿ ರೂಪಾಯಿ ಅನುದಾನ ಒದಗಿಸಬೇಕಾಗಿ ಮಾತ್ರ ನಮ್ಮ ಸಮುದಾಯದ ಪ್ರಗತಿಯಾಗಲು ಸಾಧ್ಯ ಎಂದು ಹೇಳಿದ ಅವರು ಬೇರೆ ಸಮಾಜದ ಮಠಗಳಿಗೆ ಒದಗಿಸಿದಂತೆ ವಿಶ್ವಕರ್ಮ ಸಮಾಜದ ಮಠಗಳ ಸುಧಾರಣೆಗಾಗಿ ಹೆಚ್ಚಿನ ಅನುದಾನ ಹಾಗೂ ಕಲಬುರಗಿ ನಗದಲ್ಲಿ ಒಂದು ಸಮುದಾಯ ನಿರ್ಮಾಣಕ್ಕಾಗಿ ಸರಕಾರ ಹೆಚ್ಚಿನ ಮುತುರ್ವಜಿ ವಹಿಸಿ, ಜಾಗ ಮತ್ತು ಕಟ್ಟಡಕ್ಕಾಗಿ ಸೂಕ್ತ ಅನುದಾನ ಒದಗಿಸಬೇಕಾಗಿ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮಠಾಧೀಶರಾದ ಪೂಜ್ಯ ಶ್ರೀ ದೊಡ್ಡೇಂದ್ರ ಸ್ವಾಮೀಜಿಗಳು, ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು, ಸುಲೇಪೇಠ ಹಾಗೂ ಪೂಜ್ಯ ಶ್ರೀ ಪ್ರಣವ ನಿರಂಜನ ಸ್ವಾಮೀಜಿ, ಶ್ರೀ ವಿಶ್ವಕರ್ಮ ಮೂರುಝಾವಧೀಶ್ವರ ಮಠ, ಅಫಜಲಪೂರ ಹಾಗೂ ಕಲಬುರಗಿ ಸಮಾಜ ಹಾಗೂ ಮಹಾಸಭಾದ ಮುಖಂಡರುಗಳಾದ ವಿಭಾಗೀಯ ಉಸ್ತುವಾರಿಗಳಾದ ಮಹೇಶ್ ತಡಿವಿಡಿ, ದೇವಿಂದ್ರಪ್ಪ ವಡಗೇರಿ, ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷ ಆನಂದ್ ಲಕ್ಷ್ಮಿಪೂರ, ಲೋಹಿತ್. ವೈ. ಕಲ್ಲೂರ್, ಮಹಿಳಾ ಅಧ್ಯಕ್ಷೆ ಚಿತ್ರಲೇಖ ಟೇಂಗಳಿಕರ್, ಕಾಳಮ್ಮ ಸಾತಖೇಡ, ಶಿವಲೀಲಾ ದಿಕ್ಸಂಗಿ, ಶಿವಾನಂದ್ ಎಂ ಕಲ್ಲೂರ್, ಗುಂಡಪ್ಪ ಮರತೂರ, ಬಸವರಾಜ್ ಶಹಾಬಾದ, ಕಾಳಪ್ಪ ಕುಸನೂರ, ದೇವೇಂದ್ರಪ್ಪ ವಿಶ್ವಕರ್ಮ ರಾಜಾಪೂರ, ವಿಠ್ಠಲ್ ವಿಶ್ವಕರ್ಮ ಸಡಕಿನ ಕಿಣ್ಣಿ, ಮೋನಪ್ಪ ವಿಶ್ವಕರ್ಮ ಚಿಂಚನಸೂರ, ರುದ್ರೇಶ್ ಹೇರೂರ್, ರಾಜು ವಿಶ್ವಕರ್ಮ ನರೋಣಾ, ಪ್ರಕಾಶ್ ವಿಶ್ವಕರ್ಮ ಬ್ರಹ್ಮಪೂರ, ಪ್ರಕಾಶ್ ಸೋನಾರ್ ಬ್ರಹ್ಮಪೂರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here