ಕಲ್ಯಾಣದ ಕೈಜಾರಿದ ಕ್ರೆಡಲ್ ಫುಡ್ ಲ್ಯಾಬ್: ಶಾಸಕ ಡಾ. ಅಜಯ್ ಸಿಂಗ್ ಕೆಂಡಾಮಂಡಲ

0
90

ಕಲಬುರಗಿ: ಕೆಲ ದಿನಗಳ ಹಿಂದೆಯಷ್ಟೆ ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಕಕ ಭಾಗಕ್ಕೆ ಹೊಡೆತ ನೀಡಿದ್ದ ಸರ್ಕಾರ ಇದೀಗ ಕಲಬುರಗಿಯಲ್ಲಿದ್ದಂತಹ ವಿಭಾಗೀಯ ಆಹಾರ ಪ್ರಯೋಗಾಲಯವನ್ನು ಬೆಳಗಾವಿಗೆ ಸ್ಥಳಾಂತರ ಮಾಡಿರೋದು ಅಕ್ಷಮ್ಯ ಎಂದು ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕರಾದ ಡಾ. ಅಜಯ್ ಸಿಂಗ್ ಸದರಿ ಕ್ರಮವನ್ನು ಕಟುವಾಗಿ ಖಂಡಿಸಿದ್ದಾರೆ.

ಕಲ್ಯಾಣದ ಬಾಗಕ್ಕೆ ಹೆಚ್ಚಿನ ಕಚೇರಿಗಳು ಬರಬೇಕು ಎಂಬ ಬೇಡಿಕೆ ಇರುವಾಗಲೇ ಇಂತಹ ಇದ್ದ ಕಚೇರಿಗಳನ್ನೇ ಎತ್ತಂಗಡಿ ಮಾಡುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದಿರುವ ಅವರು ಕಲಂ 371 ಅಭಿವೃದ್ಧಿ ಕೋಶ, ಕಲ್ಯಾಣ ಕರ್ನಾಟಕ ಪ್ರತ್ಯೇಕ ಸೆಕ್ರಟ್ರಿಯೆಟ್ನಂತಹ ಮಹತ್ವದ ಕಚೇರಿಗಳೇ ಇಲ್ಲಿ ಬರಲಿ ಎಂಬ ಆಗ್ರಹವಿರುವಾಗಲೇ ಇಲ್ಲಿರುವ ಕಚೇರಿಗಳನ್ನು ಸ್ಥಳಾಂತರ ಮಾಡುತ್ತಿರುವುದು ಅನ್ಯಾಯ, ಬಿಜೆಪಿ ಸರ್ಕಾರದ ಕಲ್ಯಾಣ ನಾಡಿನ ವಿರೋಧಿ ಧೋರಣೆಗೆ ಇದೇ ಕನ್ನಡಿ ಹಿಡಿದಿದೆ ಎಂದು ಟೀಕಿಸಿದ್ದಾರೆ.

Contact Your\'s Advertisement; 9902492681

ಕಲ್ಯಾಣ ನಾಡೆಂದರೆ ಬಿಜೆಪಿಗೆ ಯಾಕೋ ಸಿಟ್ಟು ಇದ್ದಂತಿದೆ. ಅದಕ್ಕೇ ಇಲ್ಲಿನ 4 ದಶಕಗಲಿಂದ ಇದ್ದಂತಹ ಕಚೇರಿಗಳನ್ನೇ ಎತ್ತಿ ಬೇರೆಡೆ ಹಾಕುತ್ತಿದೆ. ಇದನ್ನು ನಾವೆಲ್ಲರೂ ವಿರೋಧಿಸಲೇಬೇಕು. ಸರ್ಕಾರ ಇಂತಹ ಅನ್ಯಾಯದ ಕ್ರಮಗಳನ್ನುಎಬಿಟ್ಟು ಎಂದಿನಂತೆ ಕ್ರೆಡಲ್ ಕಚೇರಿ, ಆಹಾರ ಲ್ಯಾಬ್ ಕಲಬುರಗಿಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಭಾಗದ ಬಿಜೆಪಿ ಸಂಸದರ, ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ಶಾಸಕರು ಏನು ಮಾಡುತ್ತಿದ್ದಾರೆ? ಕಚೇರಿಗಲೇ ಕೈಬಿಟ್ಟು ಹೋಗುವಾಗ ಇವರೆಲ್ಲರ ಮೌನ ಯಾವ ಅರ್ಥ ನೀಡಲಿದೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಇವರಿಗೆ ಕಲ್ಯಾಣದ ಅಭಿವೃದ್ಧಿ, ಜನತೆಯ ನುಕೂಲ ಬೇಕಿದ್ದಂತಿಲ್ಲವೆಂದು ಬಿಜೆಪಿ ಮುಖಂಡರ ಧೋರಣೆಯನ್ನೇ ತಮ್ಮ ಮಾತಿನಲ್ಲಿ ಖಾರವಾಗಿರ ಟೀಕಿಸಿದ್ದಾರೆ.

ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿ ಜಿ¯್ಲÉಗೆ ತನ್ನ ತಾರತಮ್ಯ ನೀತಿ ಮುಂದುವರೆಸಿದೆ, ಹಿಂದಿನ ಕಾಂಗ್ರೆಸ್ ಸರಕಾರ ಕಕ ಭಾಗಕ್ಕೆ 371 ವಿಶೇಷ ಸ್ಥಾನಮಾನ ಸೇರಿದಂತೆ ಹಲವು ಯೋಜನೆಗಳನ್ನು ಹಾಗೂ ಕಚೇರಿಗಳನ್ನು ಕಕ ಭಾಗಕ್ಕೆ ನೀಡುವ ಮೂಲಕ ಈ ಭಾಗದ ಪ್ರಾದೇಶಿಕ ಅಮತೋಲನವನ್ನು ನಿವಾರಿಸಲು ಮಾರ್ಗ ರೂಪಿಸಿತ್ತು. ಇದೀಗ ಬಿಜೆಪಿ ಸರ್ಕಾರ ಅದನ್ನೆಲ್ಲ ವಿರೋಧಿಸುವಂತಹ ನೀತಿ ರೂಪಿಸುತ್ತಿದೆ ಎಂದು ದೂರಿದ್ದಾರೆ.

ಕೆಕೆಆರ್ಡಿಬಿ ಅನುದಾನ ಬರುತ್ತಿಲ್ಲ, ತೊಗರಿ ರೈತರಿಗೆ ಪೆÇ್ರೀತತ್ಸಾಹ ಧನವಿಲ್ಲದೆ ಖರೀದಿಗೆ ಮುಂದಾಗುತ್ತಿದ್ದಾರೆ, ಇಂತಹ ಅನ್ಯಾಯಗಳೊಂದಿಗೇ ಇದೀಗ ಸಾಲುಸಾಲು ಕತೇರಿಗಳು ಕಲ್ಯಾಣ ನಾಡನ್ನಬಿಟ್ಟು ಹೋಗುತ್ತಿವೆ. ಕಲ್ಯಾಣದ ಹೆಸರು ಬದಲಾಯತೆ ವಿನಹಃ ಪ್ರಗತಿಯಾಗುತ್ತಿಲ್ಲ. ಬಿಜೆಪಿ ಸರ್ಕಾರದ ಇಂತಹ ನೀತಿಗಳಿದ್ದಲ್ಲಿ ಕಲ್ಯಾಣ ಬರೀ ಹೆಸರಿಗೆ ಮಾತ್ರ ಎಂಬತಾಗಲಿದೆಯೇ ಹೊರತು ವಾಸ್ತವದಲ್ಲಿ ಏನೂ ಆಗೋದಿಲ್ಲವೆಂದು ಡಾ. ಜಯ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here