ಅಟ್ಟದ ಮೇಲೆ ಬೆಟ್ಟದಂತ ವಿಚಾರ ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮ

0
172

ಕಲಬುರಗಿ: ನಗರದ ಸರಸ್ವತಿ ಗೋದಾಮ ಹತ್ತಿರ ಶ್ರೀ ಸಿದ್ದಲಿಂಗೇಶ್ವರ ಬುಕ್  ಮಾಲ್ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಅಟ್ಟದ ಮೇಲೆ ಬೆಟ್ಟದಂತ ವಿಚಾರ ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮ ಹಮ್ಮಿಕೊಳಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀನಿವಾಸರವರ ಅಕ್ಕತಂಗಿಯರು ಎನ್ನುವ ಕೃತಿಯ ಕುರಿತು ಮಾತನಾಡಿ ರಷ್ಯನ್ ಭಾಷೆಯಲ್ಲಿದ್ದ ಈ ಕೃತಿ ಇಂಗ್ಲಿಷಿಗೆ ತರ್ಜುಮೆಗೊಂಡು ಕೆ ವಿ ಸುಬ್ಬಣ್ಣನವರ ಒತ್ತಾಸೆಯಿಂದ ಇಂಗ್ಲಿಷ್ ನಿಂದ ಕನ್ನಡಕ್ಕೆ ವೈದೇಹಿಯವರು ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಮೂವರು ಅಕ್ಕತಂಗಿಯರು ರಷ್ಯನ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು ಬಸವಣ್ಣನವರ ಕಾಯಕ ಸಿದ್ಧಾಂತದ ತಳಹದಿಯ ಮೇಲೆ ಜೀವನ ನಿರ್ವಹಣೆ ಮಾಡುತ್ತಿರುವುದನ್ನು ಗಮನಿಸಬಹುದು ದುಡಿದು ತಿನ್ನಬೇಕು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳ ಬೇಕು ಎಂಬ ತತ್ವದ ಮೇಲೆ ನಾಟಕದಲ್ಲಿನ ಪಾತ್ರಗಳು ಸೃಷ್ಟಿಸಿದ್ದು ವಾಸ್ತವ ಜಗತ್ತಿಗೆ ಇದೊಂದು ರೀತಿಯ ಪಾಠವಾಗಿದೆ ಜೀವನದ ನೈಜತೆಯನ್ನು ಈ ಕೃತಿಯಲ್ಲಿ ಕಂಡುಕೊಳ್ಳಬಹುದು ಎಂದಿದ್ದಾರೆ.

Contact Your\'s Advertisement; 9902492681

ಅಲ್ಲದೆ ಮೂವರು ಅಕ್ಕ-ತಂಗಿಯರು ಬದುಕಿನಲ್ಲಿ ಸೋಲು ಅವಮಾನ ಹಾಗೂ ತಿರಸ್ಕಾರಗಳು ಎಂಥವರನ್ನೂ ಕೂಡ ದೃತಿಗೇಡಿಸುತ್ತವೆ  ಇನ್ನು ಕೆಲವರನ್ನು ನಿರಾಶಾವಾದದ ಕಂದ ಕಕ್ಕೆ ತಳ್ಳಿ ಮೇಲಕ್ಕೇ ಬರದಂತೆ ಮಾಡಿಬಿಡುತ್ತವೆ ಇನ್ನು ಕೆಲವರಿಗೆ ಗೆಲುವಿನ ಮೆಟ್ಟಿಲುಗಳಾಗಿ ಉತ್ತುಂಗಕ್ಕೇರಲು ನೆರವಾಗುತ್ತದೆ ಎನ್ನುವ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡು ತಿರಸ್ಕಾರ ಅವಮಾನಗಳ ನಡುವೆಯೂ ಸಾವಿರಾರು  ಮಹಿಳೆಯರಿಗೆ ಮಾದರಿಯಾಗಿರುವುದು ಈ ಕೃತಿಯಲ್ಲಿ ನಾವು ಕಂಡುಕೊಳ್ಳಬಹುದು ಎಂದಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ಮಾತನಾಡಿ ಮೂವರು ಅಕ್ಕ-ತಂಗಿಯರು ಕೃತಿ ವಾಸ್ತವಿಕ ಬದುಕಿಗೆ ತೀರ ಹತ್ತಿರ ವೆನಿಸುತ್ತಿದೆ ದುಡಿಯುವ ವರ್ಗಕ್ಕೆ ಅಕ್ಕತಂಗಿಯರು ಮಾದರಿಯಾಗಿದ್ದಾರೆ ಎಂದರು ಕಾರ್ಯಕ್ರಮದ ಕುರಿತು ಸಂಚಾಲಕರಾದ ಡಾ. ಶಿವರಾಜ್ ಪಾಟೀಲ್ ಅವರು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶಕರಾದ ಬಸವರಾಜ ಕೊನೆಕ ರವರು ಮಾತನಾಡಿ ನಮ್ಮ ಪ್ರಕಾಶನದಿಂದ ಹೊರಬಂದ ಮೌಲಿಕ ಕೃತಿಗಳನ್ನು ವಿಮರ್ಶಕರಿಂದ ವಿಮರ್ಶಿಸಿ ಪುಸ್ತಕ ರೂಪದಲ್ಲಿ ಹೊರ ತರುವುದರ ಮೂಲಕ ಒಂದು ಉತ್ತಮ ವೇದಿಕೆ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸುಬ್ಬರಾವ್ ಕುಲಕರ್ಣಿ, ಕಾವ್ಯಶ್ರೀ ಮಹಾ ಗಾಂಕರ್, ಡಾ. ಚಿ.ಸಿ ನಿಂಗಣ್ಣ ಸಂಧ್ಯಾ ಹೊನಗುಂಟಿಕರ್   ಡಾ. ಆನಂದ ಸಿದ್ದ ಮಣಿ,ಡಾ. ಶ್ರೀಶೈಲ ನಾಗರಾಳ, ಬಿ. ಎಚ್ ನಿರಗುಡಿ, ಬಿ.ಎಸ್. ಮಾಲಿಪಾಟೀಲ್ ಸಿ.ಎಸ್.ಮಾಲಿಪಾಟೀಲ್ ಜಿ.ಎಸ್ ಮಾಲಿಪಾಟೀಲ್ ಡಾ. ಶಿವಶರಣಪ್ಪ ಮೋಟಕಪಲ್ಲಿ,ಸಿದ್ದಲಿಂಗ ಕೊನೆ ಕ, ಶರಣು ಕೊನೆ ಕ, ಮೊದಲಾದವರು ಇದ್ದರು ಡಾ. ಚಿ.ಸಿ ನಿಂಗಣ್ಣ ಸ್ವಾಗತಿಸಿದರು ಡಾ.ಶರಣಬಸಪ್ಪ ವಡ್ಡನ್ ಕೇರಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here