ತೊಗರಿ ಬೆಳೆಗಾರರಿಗೆ ಪ್ರೋತ್ಸಾಹ ಧನ, ಬೆಳೆ ಖರೀದಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

0
28

ಕಲಬುರಗಿ: ರಾಜ್ಯ ಸರ್ಕಾರ ತೊಗರಿ ಬೆಳೆಗಾರರಿಗೆ ರೂ. 2000 ಪ್ರೋತ್ಸಾಹ ಧನ ನೀಡಿ, ಕೂಡಲೇ ತೊಗರಿ ಖರೀದಿ ಕೇಂದ್ರ ತೆರೆಯಬೇಕೆಂದು ಕರ್ನಾಟಕ ಪ್ರಾಂತ್ಯ ರೈತ ಸಂಘಟನೆ ಕಾರ್ಯಕರ್ತರು ಎತ್ತಿನ ಬಂಡಿಗಳೊಂದಿಗೆ ಚಿಂಚೊಳಿ ತಾಂಡೂರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರೈತರ ತೊಗರಿ ಕಟಾವು ಪ್ರಾರಂಭವಾಗಿದ್ದು,  ಕಳೆದ ವರ್ಷದ ತೊಗರಿ ಕಡಿಮೆ ಬೆಲೆಯಲ್ಲಿ ಟೆಂಡರ್ ಹಾಕಿ ಮಾರ್ಕೆಟ್ ಬೆಲೆ ಕುಗ್ಗಿಸುವ ಹುನ್ನಾರ ನಡೆಸುತ್ತಿದ್ದ ಕೇಂದ್ರ ಸರ್ಕಾರ ಕೂಡಲೇ ನಫೇಡ್ ತೊಗರಿ ಮಾರಾಟ ಮಾಡುವುದು ತಡೆಗಟ್ಟಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಜಾನುವಾರು ಹತ್ಯೆ ನೀಷೆಧ ಕಾಯ್ದೆ ಆಹಾರ ಹಕ್ಕಿನ ಮೇಲೆ ದಾಳಿಯಾಗಿದ್ದು, ಸಂವಿಧಾನ ವಿರೋಧಿ ಕಾಯ್ದೆಯಾಗಿದೆ. ಸಂವಿಧಾನ ವಿರೋಧಿ ಕಾಯ್ದೆ ವಾಪಸ್ಸ್ ಪಡೆಯಬೇಕೆಂದು ಸಂಘದ ಅಧ್ಯಕ್ಷರಾದ ಪ್ರತಿಭಟನೆಯ ನೇತೃತ್ವವಹಿಸಿ ಆಗ್ರಹಿಸಿದರು.

ಜಾಫರ್ ಖಾನ್ ಸಾಬ್,  ಗುರುನಂದೆಶ ಕೊಣಿನ, ಪ್ರದೀಪ್ ಕುಮಾರ್ ತ್ರಿಲ್ಲಾಪುರ, ಸಿದ್ದಲಿಂಗಯ್ಯ ಸ್ವಾಮಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here