ಕಲಬುರಗಿ: ಗ್ರಾಪಂ ಕಚೇರಿ ಅವ್ಯವಹಾರ ಖಂಡಿಸಿ ಪ್ರತಿಭಟನೆ

0
32

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಸುಂಟನೂರ ಗ್ರಾಪಂನಲ್ಲಿ ನಡೆದ ೩೦ ಲಕ್ಷ ರೂಪಾಯಿ ಅವ್ಯವಹಾರ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಪ್ರತಿಭಟನಾ ಧರಣಿ ಸತ್ಯಾಗ್ರಹಕೈಗೊಂಡರು. ಕೆಲಸ ಮಾಡದೆ ಸುಮಾರು ೩೦ ಲಕ್ಷ ರೂಪಾಯಿ ಹಣವನ್ನು ಎತ್ತಿಹಾಕಿರುವ ಭ್ರಷ್ಟ ಪಂಚಾಯತ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಹಾಗೂ ಬಸವ ವಸತಿ ಯೋಜನೆ ಅಡಿಯಲ್ಲಿ ಉಳಿದ ೭೦ ಜನ ಫಲಾನುಭವಿಗಳಿಗೆ ಕೂಡಲೇ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಬೇಡಿಕೆಯ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಶೀಲವಂತ ಅವರಿಗೆ ಸಲ್ಲಿಸಿದರು.

Contact Your\'s Advertisement; 9902492681

ಮನವಿ ಸ್ವೀಕರಿಸಿದ ಅಧಿಕಾರಿಗಳು ಈ ಕುರಿತು ತನಿಖೆ ಕೈಗೊಂಡು ಕ್ರಮ ಜರುಗಿಸಲು ಕಾಲಾವಕಾಶ ನೀಡಬೇಕು ಹಾಗೂ ವ್ಯಾಪ್ತಿಯ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾ ಧರಣಿ ಹಿಂದಕ್ಕೆ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಸಿದ್ಧರಾಮ ರಾಠೋಡ ಮಾತನಾಡಿದರು.

ಸೂರ್ಯಕಾಂತ ಅಂಬಾಡಿ, ಜನಾರ್ಧನ ದೇಶಪಾಂಡೆ, ನೀಕಂಠ ಸೇರಿ, ಅಂಬರೀಶ ಕುಂಬಾರ, ಶರಣು ಪಾಟೀಲ, ಸುನೀಲ ಐರೋಡಗಿ, ಮಲ್ಲು ಕೊರಳ್ಳಿ, ದರೆಪ್ಪ ದರ್ಗಾಶಿರೂರ, ಶರಣಪ್ಪ ನ್ಯಾಮನ್, ಗುರಪ್ಪ ವಗ್ಗಲಿ, ರಾಜೇಂದ್ರ ಮೇಲ್ಕೇರಿ, ಈರಣ್ಣಾ ಸುತಾರ, ಹನುಮಂತ ನಾಯಿಕೋಡಿ ಸೇರಿ ಗ್ರಾಮಸ್ಥರು ಇನ್ನಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here