ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಗೆ ಬೆಂಗಳೂರು, ದಿಲ್ಲಿಗೆ ನಿಯೋಗ ಹೋಗಲು ನಿರ್ಧಾರ

0
49

ಕಲಬುರಗಿ: ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ ತನ್ನ ಅಭಿಯಾನದಂತೆ ಮೊದಲನೇ ಹಂತವಾಗಿ ಇಂದು ಶುಕ್ರವಾರ ಹಿಂದಿ ಪ್ರಚಾರ ಸಭಾದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿ ಬಗ್ಗೆ ಕರೆದಿರುವ ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲಾ ಪಕ್ಷದ ಮುಖಂಡರು ಭಾಗವಹಿಸಿದರು.

ಕಲ್ಯಾಣ ಕರ್ನಾಟಕದ ರಚನತ್ಮಕ ಪ್ರಗತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಪಕ್ಷಾತೀತವಾಗಿ ಒತ್ತಡ ತರಲು ಸರ್ವ ಪಕ್ಷಗಳ ನಿಯೋಗ ಮುಖ್ಯಮಂತ್ರಿಗಳಲ್ಲಿ ಮತ್ತು ಕೇಂದ್ರ ಸರಕಾರದ ಆಯಾ ಮಂತ್ರಿಗಳಿಗೆ ಭೇಟಿಯಾಗಲು ಸರ್ವಾನುಮತದಿಂದ ನಿರ್ಣಯಿಸಲಾಯಿತು ಎಂದು ಹೈದಾರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಸಭೆಯ ಅಧ್ಯಕ್ಷತೆ ವಹಿಸಿರುವ ಲಕ್ಷ್ಮಣ ದಸ್ತಿ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಬಗ್ಗೆ ಎಲ್ಲಾ ಪಕ್ಷಗಳು ಬದ್ಧತೆಯನ್ನು ಪ್ರದರ್ಶಿಸಿ ಪಕ್ಷಾತೀತವಾಗಿ ಕಲಬುರಗಿ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಎಲ್ಲರಲ್ಲಿ ಆಗ್ರಹಿಸಿದರು.

ಮುಂದುವರೆದು ಅವರು ಆಡಳಿತದಲ್ಲಿರುವ ಬಿ.ಜೆ.ಪಿ. ಪಕ್ಷದ ಜಿಲ್ಲೆಯ ಅಧ್ಯಕ್ಷರು ಸೇರಿದಂತೆ ಮುಖಂಡರು ಮತ್ತು ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಲ್ಲಿ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ಆದಷ್ಟು ಶೀಘ್ರ ನಿಯೋಗಕ್ಕೆ ದಿನಾಂಕ ನಿಗದಿ ಮಾಡಿ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗಲು ವಿನಂತಿಸಿದರು.

ನಿಯೋಗ ಭೇಟಿಯ ನಂತರವೂ ಫಲ ನೀಡದಿದ್ದರೆ ಗುಲಬರ್ಗಾ ಬಂದ್ /ಕಲ್ಯಾಣ ಕರ್ನಾಟಕ ಬಂದ್ ಸೇರಿದಂತೆ ಹಂತ ಹಂತದ ಹೋರಾಟವನ್ನು ಸರ್ವ ಪಕ್ಷಗಳು ಸೇರಿಕೊಂಡು ಸಂಘಟಿತ ಇಚ್ಛಾಶಕ್ತಿಯನ್ನು ಪ್ರದರ್ಶಿಸಲು ಮನವಿ ಮಾಡಿಕೊಂಡರು.

ಕಾಂಗ್ರೇಸ ಪಕ್ಷದ ಮುಖಂಡರಾದ ಸೋಮಶೇಖರ ಹಿರೇಮಠ ಅವರು ಮಾತನಾಡಿ ತಮ್ಮ ಪಕ್ಷ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಿಗೆ ಸದಾ ಬದ್ಧವಾಗಿದ್ದು, ಇದಕ್ಕೆ ಯಾವುದೇ ಹೋರಾಟ ಹಮ್ಮಿಕೊಂಡರೂ ತಮ್ಮ ಪಕ್ಷ ಬದ್ಧವಾಗಿದೆಯೆಂದು  ಮಾತನಾಡಿದರು.

ಜೆ.ಡಿ.ಎಸ್. ಪಕ್ಷದ ಮುಖಂಡರಾದ ಶಾಮರಾವ ಸುರನ್ ಅವರು ಮಾತನಾಡಿ ಬಿ.ಜೆ.ಪಿ. ಪಕ್ಷ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತದಲ್ಲಿದ್ದರೂ ಸಹ ನಮ್ಮ ಭಾಗಕ್ಕೆ ಅನ್ಯಾಯವಾಗುತ್ತಿರುವುದು ಖೇದಕರವಾದ ವಿಷಯವಾಗಿದೆ. ಇಲ್ಲಿ ಐದು ಜನ ಬಿ.ಜೆ.ಪಿ. ಸಂಸದರು ಮತ್ತು ಬಹುತೇಕ ಶಾಸಕರು ಬಿ.ಜೆ.ಪಿದವರಿದ್ದರೂ ಸಹ ನಮ್ಮ ಭಾಗದ ಬಹಳಷ್ಟು ಕಚೇರಿಗಳು  ಬೇರೆಡೆಗೆ ಸ್ಥಳಾಂತರವಾಗುತ್ತಿರುವುದು ದುಃಖಕರ ವಿಷಯವಗಿದೆ. ಈ ಬಗ್ಗೆ ಎಲ್ಲಾ ಪಕ್ಷದವರು ಒಗ್ಗಟ್ಟಾಗಿ ರಾಜಕಿಯ ಇಚ್ಛಾಶಕ್ತಿ ಪ್ರದರ್ಶಿಸುವ ಸಮಯ ಬಂದಿದೆ ಎಂದರು.

ಎಡಪಕ್ಷಗಳ ಮುಖಂಡರಾದ (ಸಿ.ಪಿ.ಐ.) ಭೀಮಾಶಂಕರ ಮಾಡ್ಯಾಳ ಅವರು ಮಾತನಾಡಿ ಸಮಿತಿ ಕೈಗೊಂಡ ಈ ಸಭೆ ಕಲಬುರಗಿ ಜಿಲ್ಲೆಯಲ್ಲಿ ಐತಿಹಾಸಿಕವಾಗಿದ್ದು, ನಮ್ಮ ಪಕ್ಷದ ಸೈದ್ಧಾಂತಿಕ ವಿಚಾರಗಳು ಏನೇ ಇದ್ದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ತಮ್ಮ ಪಕ್ಷವು ಎಲ್ಲ ರೀತಿಯಿಂದಲೂ ಸಹಕಾರ ನೀಡುವುದರ ಜೊತೆಗೆ ಬದ್ಧತೆ ಪ್ರದರ್ಶಿಸುವುದಾಗಿ ತಿಳಿಸಿದರು.

ಎಡ ಪಕ್ಷದ ಇನ್ನೋರ್ವ ಮುಖಂಡರಾದ ಡಾ. ಮಹೇಶ ರಾಠೋಡ ರವರು ಮಾತನಾಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೇವಲ ಕಟ್ಟಡಗಳು ಬಂದರೆ ಸಾಲದು, ಇಲ್ಲಿಯ ಜನರಿಗೆ ಉದ್ಯೋಗ ಸೃಷ್ಟಿಯಾಗುವಂತಹ ಯೋಜನೆಗಳು ಬರಬೇಕು, ಏಮ್ಸ್ ಕಲಬುರಗಿಯಲ್ಲಿಯೇ ಸ್ಥಾಪನೆಯಾಗಬೇಕು. ಇದಕ್ಕೆ ತಮ್ಮ ಪಕ್ಷ ಎಲ್ಲಾ ರೀತಿಯ ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ಎ.ಐ.ಎಂ.ಐ. ಪಕ್ಷದ ಮುಖಂಡರಾದ ರಹೀಂ ಮಿರ್ಚಿಯವರು ಮಾತನಾಡಿ ಈ ಮಹತ್ವದ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ತಮ್ಮ ಪಕ್ಷ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ತಿಳಿಸಿದರು. ಅದರಂತೆ ಇಂಡಿಯನ್ ಯೂನಿಯನ್ ಪಕ್ಷದ ಮುಖಂಡರಾದ ಮೌಲಾನಾ ನುಹೂ ಅವರು ಮಾತನಾಡಿ ಸರ್ವ ಪಕ್ಷಗಳ ನಿರ್ಣಯಕ್ಕೆ ತಾವು ಮತ್ತು ತಮ್ಮ ಪಕ್ಷ ಬದ್ಧವಾಗಿದೆ ಎಂದು ಮಾತನಾಡಿದರು.

ಭಾರತಿಯ ಜನತಾ ಪಕ್ಷದ ಮುಖಂಡರಾದ ಲಿಂಗರಾಜ ಬಿರಾದಾರ ಅವರು ಮಾತನಾಡಿ ಈಗಾಗಲೇ ಎಲ್ಲಾ ಪಕ್ಷದ ನಾಯಕರು ನೀಡಿರುವ ಸಲಹೆ ಸೂಚನೆಗಳಂತೆ ಆಡಳಿತದಲ್ಲಿರುವ ತಮ್ಮ ಪಕ್ಷದ ಮುಖ್ಯಮಂತ್ರಿಗಳಿಗೆ ಮತ್ತು ಕೇಂದ್ರದಲ್ಲಿರುವ ಮಂತ್ರಿಗಳಿಗೆ ನಮ್ಮ ಭಾಗದ ಅಭಿವೃದ್ಧಿಯ ಬಗ್ಗೆ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಲು ಆದಷ್ಟು ಶೀಘ್ರ ದಿನಾಂಕ ನಿಗದಿ ಮಾಡಲು ತಮ್ಮ ಮುಖಂಡರ ಜೊತೆ ಮಾತನಾಡಿ ತಿಳಿಸುವದಾಗಿ ವಿವರಿಸಿ ಸರ್ವ ಪಕ್ಷ ನಿಯೋಗದಲ್ಲಿ ನಮ್ಮ ಭಾಗದ ಸಚಿವರು, ಸಂಸದರು, ಶಾಸಕರು, ವಿವಿಧ ಪಕ್ಷದ ಮುಖಂಡರು, ಪರಿಣಿತ ಹೋರಾಟಗಾರರು, ಚಿಂತಕರನ್ನು ಒಳಗೊಂಡಂತೆ ನಿಯೋಗ ಕರೆದುಕೊಂಡು ಹೋಗಲು ತಮ್ಮ ಪಕ್ಷ ಕಾಲಮಿತಿಯಲ್ಲಿ ಕ್ರಮ ಜರುಗಿಸುವಂತೆ ತಿಳಿಸಿದರು.

ಎಲ್ಲಾ ಪಕ್ಷದ ಮುಖಂಡರು ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಆಗಾಗ ಈ ತರಹದ ಸರ್ವ ಪಕ್ಷಗಳ ಸಭೆ ಸಮಿತಿ ನಿಯೋಜನೆ ಮಾಡಬೇಕೆಂದು ಮನವರಿಕೆ ಮಾಡಿಕೊಂಡರು. ಕೊನೆಯಲ್ಲಿ ಸರ್ವಾನುಮತದಿಂದ ಈ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಸಮಿತಿಯ ಪ್ರಮುಖ ಮುಖಂಡರುಗಳಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಭದ್ರಶೆಟ್ಟಿ, ಅಸ್ಲಂ ಚೌಂಗೆ, ಎಚ್.ಎಂ. ಹಾಜಿ, ಜ್ಞಾನಮಿತ್ರ ಸ್ಯಾಮ್ಯುವೆಲ್, ಶಾಂತಪ್ಪ ಕಾರಭಾಸಗಿ, ಮಲ್ಲಿನಾಥ ಸಂಗಶೆಟ್ಟಿ, ಬಸವರಾಜ ರಾವೂರ, ಲಿಂಗಣ್ಣ ಉದನೂರ, ಬಾಬುರಾವ ಗಂವಾರ ಸೇರಿದಂತೆ ಅನೇಕ ಬುದ್ಧಿಜೀವಿಗಳು, ಹಿರಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here