ನಾಲವಾರ ಮಠದಲ್ಲಿ ಸಂಭ್ರಮದ ತನಾರತಿ-ರಥೋತ್ಸವ

0
89

ವಾಡಿ: ಈ ಭಾಗದ ಸುಪ್ರಸಿದ್ಧ ನಾಲವಾರದ ಶ್ರೀಕೋರಿಸಿದ್ಧೇಶ್ವರ ರಥೋತ್ಸವ ಹಾಗೂ ಭಕ್ತೀಯ ತನಾರತಿ ಉತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು. ಮಠದ ಪೀಠಾಧಿಪತಿ ಡಾ.ಸಿದ್ಧ ತೋಟೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜಾತ್ರಾಮಹೋತ್ಸವದ ಸಾಂಪ್ರದಾಯಿಕ ಆಚರಣೆಗಳು ಪೂರ್ಣಗೊಂಡವು.

ಕಳೆದ ೨೦ ದಿನಗಳಿಂದ ಕೋರಿಸಿದ್ಧೇಶ್ವರ ಮಠದಲ್ಲಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶರಣ ಕಡಕೋಳ ಮಡಿವಾಳಪ್ಪನವರ ಪುರಾಣ ಪ್ರವಚನ ಶುಕ್ರವಾರ ಸಂಜೆ ಸಮಾರೋಪಗೊಂಡವು. ಮಧ್ಯರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ತನಾರತಿ ಉತ್ಸವ ಜಾತ್ರೆಗೆ ಮೆರಗು ತಂದುಕೊಟ್ಟಿತು. ಸಂಜೆ ವಿವಿಧೆಡೆಯಿಂದ ಆಗಮಿಸಿ ಶ್ರೀಮಟದ ಆವರಣದಲ್ಲಿ ಜಮಾಯಿಸಿದ್ದ ಅಸಂಖ್ಯಾತ ಭಕ್ತರ ಜಯಘೋಷಗಳ ನಡುವೆ ಶ್ರೀಕೋರಿಸಿದ್ಧೇಶ್ವರರ ಭವ್ಯ ರಥೋತ್ಸವ ಜರುಗಿತು.

Contact Your\'s Advertisement; 9902492681

ರಥೋತ್ಸವ ಮಠದ ಆವರಣದಲ್ಲಿ ಜಾಗುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಗಳ ಸದ್ದು ಆಕಾಶದಲ್ಲಿ ಆಕರ್ಷಕ ರಂಗೋಲಿ ಸೃಷ್ಠಿಸಿದವು. ತೇರು ಎಳೆಯುತ್ತಿದ್ದ ಭಕ್ತರು ಜಯಘೋಷಣೆ ಮೊಳಗಿಸಿದರು. ಸೇರಿದ್ದ ಭಕ್ತರು ತೇರಿನತ್ತ ಹಣ್ಣುಗಳನ್ನು ಎಸೆದು ಹರಕೆ ತೀರಿಸಿದರು. ಧಾರ್ಮಿಕ ಸಮಾರಂಭದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಮತ್ತು ಕಲಾವಿದರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here