ಸರಕಾರದ ಯೋಜನೆಗಳು ಯಶಸ್ವಿಗೆ ಸಮುದಾಯ ಸಹಭಾಗಿತ್ವ ಅತ್ಯಅವಶ್ಯಕ: ಗೂಡುರು ಭೀಮಸೇನ್

0
50

ಕಲಬುರಗಿ; ಅಫಜಲಪೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಕಲಬುರಗಿ , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ಕಲಬುರಗಿ ವಿಭಾಗ, ಹಾಗೂ  ಸ್ವಚ್ಛ ಭಾರತ ಮಿಷನ ಹಾಗೂ ರೂಢಾ ಸಂಸ್ಥೆ ಧಾರವಾಡ ರವರ ಸಂಯುಕ್ತಾಶ್ರಯದಲ್ಲಿ ಜಲ ಜೀವನ ಮಿಷನ ಗುರಿ ಉದ್ದೇಶ  ಹಾಗೂ ನಮ್ಮ ನಡಿಗೆ ತಾಜ್ಯ ಮುಕ್ತ ಕಡೆಗೆ ಕುರಿತಂತೆ ತಾಲೂಕು ಮಟ್ಟದ ೩ನೇ ಕಾರ್ಯಾಗಾರವನ್ನು ಅಫಜಲಪೂರು ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಇತರೆ ತಾಲೂಕುಮಟ್ಟದ ಅನುಷ್ಠಾನ ಅಧಿಕಾರಿಗಳಿಗೆ ಜಂಟಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಾಗಾರವನ್ನು ಕಲಬುರಗಿ ಜಿಲ್ಲಾ ಪಂಚಾಯತ್  ಉಪ ಕಾರ್ಯದರ್ಶಿಗಳಾದ ಶ್ರೀ.ಗೂಡುರು ಭೀಮಸೇನ್ ರವರು ಉದ್ಘಾಟಿಸಿ ಮಾತನಾಡುತ್ತ ಸರಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಮುದಾಯದ ಸಹಭಾಗಿತ್ವ ಅತ್ಯಅವಶ್ಯಕವೆಂದರು.ಅದರಲ್ಲೂ ಜಲ ಜೀವನ ಮಿಷನ್ ಹಾಗೂ ಸ್ವಚ್ಛಭಾರತ ಮಿಷನ್ ಯೋಜನೆಗಳು ಯಶಸ್ವಿಯಾಗಲು ಸಮುದಾಯ ಸಕ್ರಿಯವಾಗಿ ಭಾಗವಹಿಸಿದೆರೆ ಮಾತ್ರ ಯೋಜನೆ ಫಲಪ್ರದವಾಗುತ್ತದೆ ಎಂದರು. ಜಲ ಜೀವನ ಮಿಷನ್ ಅಡಿಯಲ್ಲಿ ಪ್ರತಿಯೊಬ್ಬರಿಗೂ ೫೫ ಎಲ್.ಪಿ.ಸಿ.ಡಿ ನಳದ ನೀರನ್ನು ಒದಗಿಸಲಾಗುತ್ತಿದೆ ಎಂದರು ಮತ್ತು ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಕುರಿತು ಎಲ್ಲ ಅಭಿವೃದ್ಧಿ ಅಧಿಕಾರಿಗಳು ತಪ್ಪದೆ ಆಂದೋಲನಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು. ಇದೆ ಸಂದರ್ಭದಲ್ಲಿ ನೈರ್ಮಲ್ಯದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಫಜಲಪೂರು ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ ರವರು ಜಲ ಜೀವನ ಮಿಷನ್ ಯೋಜನೆಗೆ ಎಲ್ಲರು ಸಹಕರಿಸುವಂತೆ ತಿಳಿಸಿದರು. ಇನ್ನೋರ್ವ ಮುಖ ಅಥಿತಿಗಳಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮೇಶ ಮಂಠಾಳೆ ವೇದಿಕೆ ಮೇಲೆ ಆಸಿನರಾಗಿದ್ದರು. ಕಾರ್ಯಾಗಾರದಲ್ಲಿ ಜಲ ಜೀವನ ಮಿಷನ್ ಗುರಿ ಉದ್ದೇಶ  ಕುರಿತು ಜಲ ಜೀವನ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕರಾಧ ಡಾ.ರಾಜು ಕಂಬಾಳಿಮಠ ರವರು ಉಪನ್ಯಾಸ ನೀಡಿದರು. ಸಮುದಾಯದ ಪಾತ್ರ ಹಾಗೂ ಸಮುದಾಯ ವಂತಿಕೆ ಹಾಗೂ ಗ್ರಾ.ಪಂ.ವಂತಿಕೆ ಅವಶ್ಯಕತೆ ಕುರಿತು ಸಹಾಯಕ ನಿರ್ಧೇಶಕರಾದ ಶರಣಬಸವ ಮುಗಳಿ ಉಪನ್ಯಾಸ ನೀಡಿದರು.

ಸಹಾಯಕ ನಿರ್ಧೇಶಕರಾದ ಶಿವಾನಂದ ಪವಾರ್ ರವರು ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ರಚನೆ ಕುರಿತು ತಿಳಿಸಿದರು, ತಾಂತ್ರಿಕ ವಿಷಯದ ಕುರಿತು ಅಫಜಲಪೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ ಉಪವಿಭಾಗದ ಸಹಾಯಕ ಅಭಿಯಂತರಾದ  ಬಸವರಾಜ ಹಿರೇಮಠ ಹಾಗೂ ಸರ್ವಜ್ಞ ರವರು ಉಪನ್ಯಾಸ ನೀಡಿದರು.

ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕರಾದ ಪಾಪರಡ್ಡಿ ರವರು, ಘನ ಮತ್ತು ದ್ರವ ತ್ಯಾಜ್ಯ ಹಾಗೂ ಶೌಚಾಲಯದ ಬಳಕೆ ಮತ್ತು ನಿರ್ಮಾಣದ ಕುರಿತು ಉಪನ್ಯಾಸ ನೀಡಿದರು. ಐ.ಎಂ.ಎಸ್ ದಾಖಲಾತಿ ಕುರಿತು ಜಲ ಜೀವನ ಮಿಷನ್ ಎಂ.ಐ.ಎಸ್ ಜಿಲ್ಲಾ ಸಮಾಲೋಚಕರಾದ ಸಿದ್ದಲಿಂಗ್ ಮುಗಳಿ ತಿಳಿಸಿಕೊಟ್ಟರು.ಸಂಸ್ಥೇಯ ಇಂಜಿನಿಯರ್ ಆದ ಸಂಗಮೇಶ ಪಾಟೀಲ್ , ರಾಜಕುಮಾರ ಮತ್ತು ಶ್ರವಣಕುಮಾರ ರವರು ಜಲ ಜೀವನ ಮಿಷನ್ ಗ್ರಾಮ ಕ್ರಿಯಾ ಯೋಜನೆ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ  ರಮೇಶ, ವಿಜಯಕುಮಾರ, ಶಿವಾನಂದ, ಸುರೇಶ ಪಟ್ನಾಯಕ, ದೇವರಾಜ ಹಾಗೂ ತಾಲೂಕಿನ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸ್ವಾಗತ & ಪ್ರಾಸ್ತವಿಕ ನುಡಿಯನ್ನು  ಡಾ.ರಾಜು ಕಂಬಾಳಿಮಠ ಮಾತನಾಡಿದರು, ರಮೇಶ ಸಾವಳಗಿ ನಿರೂಪಿಸಿದರು, ರೂಡಾ ಸಂಸ್ಥೇ ಧಾರವಾಡ ತಂಡದ ನಾಯಕರಾದ ಸಂತೋಷ ಮೂಲಗೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here