ಶಾದಿಮಹಲ್ ಯೋಜನೆಯಡಿ ಭ್ರಷ್ಟಾಚಾರ: ಉನ್ನತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

1
64

ಕಲಬುರಗಿ: ಶಾದಿಮಹಲ್ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ಆಗಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕರುನಾಡು ಹೋರಾಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಸಂಘಟನೆಯ ಉತ್ತರ ಕರ್ನಾಟಕದ ಅಧ್ಯಕ್ಷ ಪಾಶಾ ಮಿಯಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹುಸೇನ್ ಪಟೇಲ್, ಬಾಷಾ ಇಮಾಮಸಾಬ್, ಎಂ.ಡಿ. ಹುಸೇನ್ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ರಾಜ್ಯಾದ್ಯಂತ ಜಿಲ್ಲಾವಾರು ಶಾದಿಮಹಲ್ ಯೋಜನೆಯಡಿ ಆಗಿರುವ ಭ್ರಷ್ಟಾಚಾರದ ಕುರಿತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಉನ್ನತ ಸಮಿತಿಯನ್ನು ರಚಿಸಿ ಶೀಘ್ರ ತನಿಖೆಯ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.

ಆರೋಗ್ಯ ಇದ್ದರೇ ಮಾತ್ರ ನೆಮ್ಮದಿ ಬದುಕು ನಡೆಸಬಹುದು: ಸುರೇಶ ವರ್ಮಾ

ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ನರ್ಸಿಂಗ್ ಪ್ಯಾರಾ ಮೆಡಿಕಲ್ ಯೋಜನೆಯಡಿ ಆಗಿರುವ ಭ್ರಷ್ಟಾಚಾರದ ಕುರಿತು ತನಿಖೆ ಕೈಗೊಳ್ಳುವಂತೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ದುಬಾರಿ ಬೆಲೆಯಲ್ಲಿ ಖರೀದಿ ಮಾಡಲಾಗಿದ್ದ ಹಲವಾರು ವಸ್ತುಗಳನ್ನು ಆಡಿಟ್ ವರದಿ ಮಾಡುವಂತೆ, ಅಲ್ಪಸಂಖ್ಯಾತರ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ನವೋದಯ ಶಾಲೆಗಳಿಗೆ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಜಿಲ್ಲಾವಾರು ಆಹಾರ ಸರಬರಾಜು ಮಾಡುವಂತೆ ಅವರು ಆಗ್ರಹಿಸಿದರು.

ಐಎಎಸ್, ಕೆಎಎಸ್ ಇಲ್ಲದೇ ನಿರ್ದೇಶಕರ ಸ್ಥಾನಕ್ಕೆ ಮೆಹಬೂಬ್ ಸಾಬ್ ಅವರನ್ನು ಅಕ್ರಮವಾಗಿ ನೇಮಿಸಲಾಗಿದೆ. ನಿಯಮಾನುಸಾರ ಪರಿಶೀಲಿಸಿ ಅವರನ್ನು ನಿರ್ದೇಶಕರ ಸ್ಥಾನದಿಂದ ವಜಾಗೊಳಿಸುವಂತೆ, ಪ್ರತಿ ಬಾರಿ ಟೆಂಡರುಗಳನ್ನು ಬೇರೆ, ಬೇರೆ ಗುತ್ತಿಗೆದಾರರಿಗೆ ನೀಡುವಂತೆ, ಇಲಾಖೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸುವಂತೆ, ಕೆಲವು ಜಿಲ್ಲೆಗಳಲ್ಲಿ ಪ್ರಿನ್ಸಿಪಾಲ್ ಮತ್ತು ಜಿಲ್ಲಾಧಿಕಾರಿಗಳಿಂದ ಶಿಕ್ಷಕರ ಮೇಲೆ ದೌರ್ಜನ್ಯಗಳು ಆಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ, ಹಲವಾರು ಶಾಲೆಗಳಲ್ಲಿ ಮತ್ತು ವಸತಿ ನಿಲಯಗಳಲ್ಲಿ ಮೇಲ್ವಿಚಾರಕರು ಮತ್ತು ಪ್ರಿನ್ಸಿಪಾಲರು ನಮಾಜ್‌ಗೆ ಅವಕಾಶ ಕೊಡುತ್ತಿಲ್ಲ. ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಉತ್ಸಾಹ ಉತ್ತಮ ಬದುಕಿನ ಮೂಲ

ಇಲಾಖೆಯಲ್ಲಿ ೮ ವರ್ಷಗಳಿಂದ ದುಡಿಯುತ್ತಿರುವವರಿಗೆ ಖಾಯಂಗೊಳಿಸುವಂತೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ, ಇಲಾಖೆಗೆ ಮುಂಬರುವ ಬಜೆಟ್‌ನಲ್ಲಿ ೨೦,೦೦೦ ಕೋಟಿ ರೂ.ಗಳನ್ನು ಮೀಸಲಿಡುವಂತೆ, ನೌಕರರ ಬಡ್ತಿ ಮಂಜೂರು ಮಾಡುವಂತೆ, ಭ್ರಷ್ಟಾಚಾರ ತಡೆಯುವಂತೆ ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here