ಗ್ರಂಥಾಲಯಕ್ಕೆ ಕಹಳೆ ತಂದ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ

0
521
  • ಡಾ. ರಾಜಕುಮಾರ ಎಂ. ದಣ್ಣೂರ

ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವದರಿಂದ ಸಾಮಾನ್ಯವಾಗಿ ಜನರು ಯಾವುದೇ ಮಾಹಿತಿ ನೋಡಬೇಕು ಅಂದರು ಗೂಗಲ್ ಮೊರೆ ಹೋಗುತ್ತಿದ್ದಾರೆ ಇಂತಹ ಸಂದರ್ಭದ ದಿನಗಳಲ್ಲಿ ಜನಗಳು ಪುಸ್ತಕ ಓದುವುದನ್ನು ಬಿಟ್ಟು ಬಿಟ್ಟಿದ್ದಾರೆ. ಯಾವಾಗ ಡಾ. ಸತೀಶ್ ಕುಮಾರ್ ಹೊಸಮನಿ ಎನ್ನುವ ವ್ಯಕ್ತಿ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಆದರು ಆಗ ಪ್ರತಿ ಒಂದು ಗ್ರಂಥಾಲಯಕ್ಕೆ ಒಂದು ಹೊಸ ಮೆರಗು ತಂದು ಕೊಟ್ಟರು.

ಆದರೆ ಇದಕ್ಕಿಂತ ಮೊದಲು ಗ್ರಾಮ ಪಂಚಾಯ್ತಿಂದ ಹಿಡಿದು ಜಿಲ್ಲಾ ಮಟ್ಟದ ವರೆಗೆ ಗ್ರಂಥಾಲಯಗಳು ಇದ್ದವು ಆದರೆ ಅವು ಇಷ್ಟೊಂದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರ ಅತ್ಯಂತ ಕಾಳಜಿಯಿಂದ ಇವತ್ತು ಪ್ರತಿಯೊಂದು ಗ್ರಂಥಾಲಯ ಸಾರ್ವಜನಿಕರಿಗೆ ನೆರವಾಗಿ ಪುಸ್ತಕ ಓದುವ ಗೀಳು ಹೆಚ್ಚಾಗಿದೆ.

Contact Your\'s Advertisement; 9902492681

ರಾಜ್ಯ ಮಟ್ಟದ ಸುವರ್ಣಶ್ರೀ ಪ್ರಶಸ್ತಿಗೆ ವೆಂಕಟೇಶ ಜನಾದ್ರಿ ಆಯ್ಕೆ

ಇದು ಅಷ್ಟೇ ಅಲ್ಲದೆ ಇಂದು ಡಿಜಿಟಲ್ ಗ್ರಂಥಾಲಯ ಆಗಿ ಮಾರ್ಪಟ್ಟಿದೆ ಆನ್‌ಲೈನ್ ಮೂಲಕವೇ ನಾವು ಯಾವ ಪುಸ್ತಕ ಬೇಕು ಆ ಪುಸ್ತಕ ಓದುವಂತೆ ಲಭ್ಯ ಆಗಿದೆ. ಇಂದು ಆನ್ಲೈನ್ನಲ್ಲಿ ಓದುಗರ ಸಂಖ್ಯೆ ನೋಡಿದರೆ 23 ಲಕ್ಷ ಗಡಿ ದಾಟಿದೆ ಬಹಳಷ್ಟು ಜನ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕರಾಗಿ ಹೋಗಿದ್ದಾರೆ ಇಂತಹ ವ್ಯವಸ್ಥೆ ಇಲ್ಲಿಯವರೆಗೆ ಯಾರೋಬ್ಬರು ಮಾಡಲಿಲ್ಲ ಆದರೆ ಡಾ. ಸತೀಶ್ ಕುಮಾರ್ ಹೊಸಮನಿ ಅವರು ವಿನೂತನ ಕೆಲಸ ಮಾಡಿ ಸಾರ್ವಜನಿಕರಿಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರು ಸಾರ್ವಜನಿಕ ಗ್ರಂಥಾಲಯ ಎಲ್ಲಿಯವರೆಗೆ ತೆಗೆದುಕೊಂಡು ಹೋಗಿ ಮುಟ್ಟಿಸಿದ್ದಾರೆ ಎಂದರೆ ಸಂಚಾರಿ ಗ್ರಂಥಾಲಯ ಆರಂಭಿಸಿದಾರೆ. ಸಂಚಾರಿ ಗ್ರಂಥಾಲಯ ಎಂದರೆ ಬಸ್ ಒಳಗಡೆಯೇ ಒಂದು ಪುಟ್ಟ ಗ್ರಂಥಾಲಯ ಅದರಲ್ಲಿಯೇ ಓದುವುದಕ್ಕೆ ಎಲ್ಲ ರೀತಿಯಿಂದಲೂ ಆಸನದ ವ್ಯವಸ್ಥೆ ಮಾಡಲಾಗಿದೆ.

ದೇಶದಲ್ಲಿನ ದಲಿತರ ಸ್ಥಿತಿ ಚಿಂತಾಜನಕವಾಗಿದೆ ಹೋರಾಟಕ್ಕೆ ಮುಂದಾಗೋಣ: ಕಟ್ಟಿಮನಿ

ಈ ಸಂಚಾರಿ ಗ್ರಂಥಾಲಯ ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಆಗಿರುವುದಕ್ಕೆ ಓದುಗರು ಹೆಮ್ಮೆ ಪಡುವ ಸಂಗತಿ. ಹಿರಿಯ ಸಾಹಿತಿಗಳ ಪುಸ್ತಕ ಮತ್ತು ಇತ್ತೀಚಿಗೆ ಬಿಡುಗಡೆ ಆಗಿರುವ ಹೊಸ ಹೊಸ ಪುಸ್ತಕಗಳು ಓದುಗರಿಗೆ ಸಿಗುತ್ತಲಿವೆ. ಗ್ರಂಥಾಲಯ ಅಂದರೆ ಏನು ಅಂತ ಅದಕ್ಕೊಂದು ಬಹು ದೊಡ್ಡ ಅರ್ಥ ನೀಡಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ ಈ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕರಿಗೆ ಅಭಿನಂದನೆಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here