ಕಲಬುರಗಿ: ತಾವು ಆರಂಭಿಸಿರುವ ಗ್ರಾಮ ವಾಸ್ತವ್ಯ ಜನರ ಗಮನ ಸೆಳೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿರುವ ಜೇವರ್ಗಿ ಶಾಸಕರು, ವಿದಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ಹಳ್ಳಿ ಜನರೊಂದಿಗೆ ಇದ್ದು ಹೊಸ ಅನುಭವ ಪಡೆಯುತ್ತಿರುವೆ ಎಂದು ಹೇಳಿದ್ದಾರೆ.
ವಡಗೇರಾ ಗ್ರಾಮ ವಾಸ್ತವ್ಯದ ನಂತರ ಹಂಗರಗಾ ಊರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಳ್ಳಿ ಜನರನ್ನು ಕಾಡುತ್ತಿರುವ ಸಮಸ್ಯೆಗಳ ವಿಸ್ತಾರ ಗೊತ್ತಾಗುತ್ತಿದೆ. ಅವುಗಳ ಆಳ- ಅಗಲವೂ ಅರ್ಥವಾಗುತ್ತಿದೆ. ಕೆಲವು ಸಮಸ್ಯೆಗಳಿಗೆ ಅಲ್ಲೇ ಸ್ಪಂದನೆ ಮಾಡುತ್ತೇವೆ. ಇನ್ನು ಕೆಲವು ಸಮಸ್ಯೆಗಳಿಗೆ ರಾಜ್ಯ ಮಟ್ಟದಲ್ಲಿ ನೀತಿ ನಿರೂಪಣೆ ಮಾಡಿ ಪರಿಹಾರ ಹುಡುಕುವ ಯತ್ನ ಮಾಡಲಾಗುತ್ತದೆ ಎಂದರು.
ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ವಿರೋಧಿಸಿ ಮಾರ್ಚ್ 16 ರಂದು ಒಗ್ಗಟ್ಟಿನ ಬೃಹತ್ ಪ್ರತಿಭಟನೆ
ವಸತಿ ಯೋಜನೆಗಳ ಬಗ್ಗೆ ರಾಜ್ಯ ಮಟ್ಟದಲ್ಲೇ ಸಮಸ್ಯೆ ಇದೆ. ಇಂದಿರಾ ಆವಾಸ್, ಅಂಬೇಡ್ಕರ್, ವಾಲ್ಮೀಕಿ ವಸತಿ ಯೋಜನೆಗಳಲ್ಲಿ ರಾಜ್ಯದ ಎಲ್ಲಾ ಪಂಚಾಯ್ತಿ ಹಂತದಲ್ಲಿ ಕೆಲವು ಸಮಸ್ಯೆಗಳು ಕಾಡುತ್ತಿವೆ. ಮಾ. 4 ರಿಂದ ಶುರುವಾಗಲಿರುವ ಅಧಿವೇಶನದಲ್ಲಿ ಇವೆಲ್ಲ ಸಮಸ್ಯೆಗಳನ್ನು ಪ್ರಸ್ತಾಪಿಸಲಾಗುತ್ತದೆ ಎಂದರು.
ಪ್ರಗತಿ ಒಂದೇ ದಿನ ಆಗೋವಂತಹದ್ದಲ್ಲ, ನಿರಂತರ ಪ್ರಕ್ರಿಯೆ, ಹೀಗಾಗಿ ಜೇವರ್ಗಿ ಹಾಗೂ ಯಡ್ರಾಮಿ ಹಳ್ಳಿಗಾಡಿನ ಪ್ರಗತಿಗೆ ತಾವು ಪ್ರಾಮಾಣಿಕ ಯತ್ನ ಮಾಡುವುದಾಗಿ ಹೇಳಿದ ಡಾ. ಅಜಯ್ ಸಿಂಗ್ ತಮ್ಮ ವಿವೇಚನಾ ನಿಧಿ ಬಳಸಿ ಹಾಗೂ ಕೆಕೆಆರ್‍ಡಿಬಿ ಅನುದಾನ ಬಳಸಿ ತಾವು ತಮ್ಮ ಮತಕ್ಷೇತ್ರದ ಹಳ್ಳಿಗಳ ಜನರಿಗೆ ಮೂಲ ಸವಲತ್ತು ಒದಗಿಸುವ ಯತ್ನ ಮಾಡುವುದಾಗಿ ಹೇಳಿದರು.
ಸುರಪುರ: ಬೆಂಕಿ ತಗುಲಿ ಗುಡಿಸಲು ಭಸ್ಮ
ವಡಗೇರಾ, ಹಂಗರಗಾ ಗ್ರಾಪಂ ವ್ಯಾಪ್ತಿಯಲ್ಲಿ ರುದ್ರಭೂಮಿ, ನೀರಿನ ಸಮಸ್ಯೆಗಳಿವೆ, ಸಿಸಿ ರಸ್ತೆ, ಚರಂಡಿ ಬೇಡಿಕೆ ಬಂದಿವೆ. ಹೀಗಾಗಿ ಇವನ್ನೆಲ್ಲ ತಾವು ನಿರಂತರವಾಗಿ ಪರಿಶೀಲನೆ ನಡೆಸಿ ಪ್ರಗತಿಗೆ ಹೆಚ್ಚಿನ ಲಕ್ಷ ನೀಡುವುದಾಗಿ ಹೇಳಿದರು.
ಕೊರೋನಾದಿಂದಾಗಿ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟು ಉಟಾಗಿದೆ. ಹೀಗಾಗಿ ಅನೇಕ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಈ ವಿಚಾರವಾಗಿ ತಾವೂ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾಗಿ ಹೇಳಿದರು. ಭೂಮಿ ಲಭ್ಯವಿದ್ದಲ್ಲಿ, ಯಾರಾದರೂ ದಾನಿಗಳು ಭೂಮಿ ದಾನ ಮಾಡಿದಲ್ಲಿ ಶೌಚಾಲಯ ಹಾಗೂ ರುದ್ರಭೂಮಿ ಸವಲತ್ತು ಒದಗಿಸಲು ತಾವುಸಿದ್ಧರೆಂದು ಡಾ. ಅಜಯ್ ಸಿಂಗ್ ಹೇಳಿದರು.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣ ಸ್ಲಾಸ್ಟಿಕ್ ವಸ್ತುಗಳು ನಾಶ
ಪ್ರತಿ ತಿಂಗಳು ಗ್ರಾಮ ವಾಸ್ತವ್ಯ ಮುಂದುವರಿಯಲಿದೆ. ಗ್ರಾಪಂ ವ್ಯಾಪ್ತಿಯ ಮುಕ್ಯಕೇಂದ್ರದ ಊರನ್ನೇ ವಾಸ್ತವ್ಯಕ್ಕೆ ಆಯ್ಕೆ ಮಾಡಲಾಗುತ್ತದೆ. ವಾಸ್ತವ್ಯದ ನಂತರ ಮಾರನೆ ದಿನ ಆಯಾ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಸುತ್ತಾಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವೆ ಎಂದು ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದರು.
ಜನ ನಾಯಕರಿಗೆ ಹಳ್ಳಿಗಾಡಿನಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಬರೇಬಕಾದಲ್ಲಿ ಇಂತಹ ವಾಸ್ತವ್ಯಗಳನ್ನು ಮಾಡಲೇಬೇಕು. ಈ ವಿಚಾರದಲ್ಲಿ ತಾವು ಜನರ ಮಿಡಿತ ಅರಿಯುವ ದಿಶೆಯಲ್ಲಿ ಹೊಸಹೆಜ್ಜೆ ಇಡುತ್ತಿರುವೆ. ಜನರ ಸಹಕಾರ ಬೇಕು. ನಾನು ಈ ವಾಸ್ತವ್ಯ ಮಾಡೋದು ಚುನಾವಣೆ ಗಮನದಲ್ಲಿಟ್ಟುಕೊಂಡು ಅಲ್ಲ, ಚುನಾವಣೆ ಇನ್ನೂ ದೂರವಿದೆ. ಜನರೊಂದಿಗೆ ಬೆರೆಯುವ, ಅವರಿಗಾಗಿ ನಮ್ಮ ಒಲವು ತೋರುವುದೇ ನಮ್ಮ ಪ್ರಾಮಾಣಿಕ ಗುರಿ, ಉz್ದÉೀಶ ಎಂದು ಡಾ. ಅಜಯ್ ಸಿಂಗ್ ಹೇಳಿದರು. ವಡಗೇರಾ ಊರಿನ ತಿರುಪತಿ ದೇಸಾಯಿ, ಬಾಪುಗೌಡ ಪಾಟೀಲ್, ಶರಣಗೌಡ ಪಾಟೀಲ್, ಪಂಚಾಯ್ತಿ ಪ್ರತಿನಿಧಿಗಳು ಸುದ್ದಿಗೋಷ್ಟಿಯಲ್ಲಿದ್ದರು.