ಕಿವಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ

0
29

ಕಲಬುರಗಿ: ವಿವಿಧ ಕಾರಣಗಳಿಂದಾಗಿ ಕಿವಿಗಳಿಗೆ ತೊಂದರೆಯಾಗಿ ಆಲಿಸುವಿಕೆಗೆ ತೊಂದರೆಯಾಗುತ್ತದೆ. ಅದನ್ನು ಆರಂಭಿಕ ಹಂತದಲ್ಲಿಯೇ ಗುರ್ತಿಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆ ನೀಡಿದರೆ ಕಿವಿಗಳು ಆರೋಗ್ಯವಾಗುತ್ತವೆ. ಇದರ ಬಗ್ಗೆ ಕಾಳಜಿ ವಹಿಸಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.

ನಗರದ ಶೇಖರೋಜಾದಲ್ಲಿರುವ ಶಹಾಬಜಾರ ’ನಗರ ಪ್ರಾಥಮಿಕ ಆರೋಗ್ಯ ಕೇಂದ’ದಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಏರ್ಪಡಿಸಿದ್ದ ’ವಿಶ್ವ ಶ್ರವಣ ದಿನಾಚರಣೆ’ಯ ನಿಮಿತ್ಯ ಮಕ್ಕಳ ಕಿವಿಗಳನ್ನು ಉಚಿತ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ರಂಜಣಗಿ- ಹಾಲಘತ್ತರಗಾ- ತೆರಗಬಾಳ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ರಕ್ತ ಸಂಬಂಧಿ ವಿವಾಹ ಹಾಗೂ ಅನುವಂಶಿಯತೆಯು ಪ್ರಮುಖವಾಗಿ ಕಿವುಡತನಕ್ಕೆ ಕಾರಣವಾಗಿದೆ. ಶ್ರವಣದೋಷವುಳ್ಳ ವ್ಯಕ್ತಿಗೆ ಸೂಕ್ತ ಹಾಗೂ ಸಮಯೋಚಿತ ಸೇವೆಗಳನ್ನು ನೀಡಬೇಕು. ಕಿವಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ. ಕಿವಿಯಲ್ಲಿ ನೀರು, ಕಸ ಸೇರದಂತೆ ನೋಡಿಕೊಳ್ಳಬೇಕು. ಚೂಪಾದ ವಸ್ತುಗಳು ಕಿವಿಯಲ್ಲಿ ಹಾಕಿಕೊಳ್ಳಬಾರದು. ವೈದ್ಯರು ಸೂಚಿಸಿದ ಶ್ರವಣಯಂತ್ರಗಳನ್ನು ಮಾತ್ರ ಬಳಸಬೇಕು. ಕಿವಿಗಳ ಬಗ್ಗೆ ನಿಷ್ಕಾಳಜಿ ವಹಿಸಿ ಕಿವುಡತನ ಉಂಟಾದರೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆಯೆಂದರು.

ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಶಬ್ದ ಮಾಲಿನ್ಯದಿಂದ ಕಿವಿಗಳಿಗೆ ತೊಂದರೆಯಾಗುತ್ತಿದೆ. ೬೫ ಡೆಸಿಬಲ್ ಶಬ್ದ ಆಲಿಸಲು ಸಾಧ್ಯ. ಕೈಗಾರಿಕೆ, ವಾಹನಗಳು, ಧ್ವನಿವರ್ಧಕಗಳಿಂದ ಶಬ್ದ ಹೆಚ್ಚಾಗುತ್ತಿದೆ. ೧೩೫ ಡೆಸಿಬಲ್ ಶಬ್ದದಿಂದ ಕಿವಿಯ ನೋವು ಹಾಗೂ ಶಾಶ್ವತ ಕಿವುಡತನ ಉಂಟಾಗುತ್ತದೆ. ಜೊತೆಗೆ ಮಾನಸಿಕ ಅಶಾಂತಿ, ಹೃದಯ ಬಡಿತ ಹೆಚ್ಚಳವಾಗಿ ಸಮಸ್ಯೆಗಳು ಉಂಟಾಗುತ್ತವೆ. ಶಬ್ದ ಮಾಲಿನ್ಯ ನಿಯಂತ್ರಣ ಅಗತ್ಯವಾಗಿದೆ. ಶ್ರವಣ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆಯೆಂದು ನುಡಿದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ಮಾರ್ಗದರ್ಶನ

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಎಸ್.ಪುರಾಣೆ, ಅಮರ ಬಂಗರಗಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ಜಗನಾಥ ಗುತ್ತೇದಾರ, ಗುರುರಾಜ ಖೈನೂರ್ , ಸಂಗಮ್ಮ ಅತನೂರ, ಲಕ್ಷ್ಮೀ ಮುಗಳಿವಾಡಿ, ಮಂಗಲಾ ಚಂದಾಪೂರೆ, , ಗಂಗಾಜ್ಯೋತಿ ಗಂಜಿ, ಚಂದಮ್ಮ ಮರಾಠಾ, ನಾಗಮ್ಮ, ಸುಲೋಚನಾ, ಸಂಗೀತಾ, ಗೌರಮ್ಮ, ನಾಗೇಶ್ವರಿ ಸಿಬ್ಬಂದಿ ವರ್ಗ ಹಾಗೂ ಬಡಾವಣೆಯ ಮಕ್ಕಳು, ಮಹಿಳೆಯರು, ನಾಗರಿಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here