ರೈತರ ಬೆಳೆಗಳಿಗೆ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಜಾಲಿಬೆಂಚಿ ರೈತರ ಮನವಿ

0
34

ಸುರಪುರ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಸರಿಯಾದ ವಿದ್ಯುತ್ ಸರಬರಾಜು ಇಲ್ಲದ ಕಾರಣ ರೈತರ ಬೆಳೆಗಳಿಗೆ ನೀರಿನ ತೊಂದರೆಯುಂಟಾಗಿ ಬೆಳೆಗಳು ಒಳಗಲಾರಂಭಿಸಿವೆ ಎಂದು ಆರೋಪಿಸಿ ನಗರದ ರಂಗಂಪೇಟೆಯ ಜೆಸ್ಕಾಂ ಕಚೇರಿ ಮುಂದೆ ಜಾಲಿಬೆಂಚಿ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ರೈತರು,ಪೇಠ ಅಮ್ಮಾಪುರ ವಿದ್ಯುತ್ ಸರಬರಾಜು ಶಾಖಾ ಕಚೇರಿ ವ್ಯಾಪ್ತಿಯ ಜಾಲಿಬೆಂಚಿ ಗ್ರಾಮಕ್ಕೆ ಸರಿಯಾದ ವಿದ್ಯುತ್ ಸರಬರಾಜು ಇಲ್ಲದ ಕಾರಣ ರೈತರ ಬೆಳೆಗಳು ಒಣಗುತ್ತಿವೆ.ಅಲ್ಲದೆ ಇನ್ನು ಕೆಲ ದಿನಗಳು ವಿದ್ಯುತ್ ಹೀಗೆ ಮುಂದುವರೆದರೆ ರೈತರು ಎಲ್ಲಾ ಬೆಳೆಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಗಬೇಕಾಗುತ್ತದೆ.

Contact Your\'s Advertisement; 9902492681

ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ

ಇದಕ್ಕೆ ಕಾರಣ ಲೈನಮ್ಯಾನ್‌ಗಳ ನಿರ್ಲಕ್ಷ್ಯ ಕಾರಣವಾಗಿದೆ.ಆದ್ದರಿಂದ ನಮಗೆ ಸರಿಯಾಗಿ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ತಮ್ಮ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಸ್ತೆ ಅಗಲಿಕರಣದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ: ರಾಜಾ ಪಿಡ್ಡನಾಯಕ ಆರೋಪ

ನಂತರ ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ ಸಾಹು ಅಂಬ್ರೇಶ ಮರಾಠ ಸುಭಾಸ್ ಸಾಹುಕಾರ ಅಂಬ್ರೇಶ ಹಚ್ಚರಡ್ಡಿ ಚಂದ್ರಶೇಖರ ಕುಂಬಾರ ಜಾವೀದ್ ಹುಸೇನ್ ವಿರೇಶ ಕುಂಬಾರ ಮೌನೇಶ ಪಡದಳ್ಳಿ ರವಿ ಕಾಮತ್ ರಾಮು ಬೂದನೂರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here