ಕಲಬುರಗಿ : ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ತನ್ನದೆ ಆದ ಗುರುತರ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಮಕೃಷ್ಣ ರೆಡ್ಡಿ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಗೋದುತಾಯಿ ಅವ್ವ ಅವರ ೫೦ನೇ ಪುಣ್ಮಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕರೋನಾ ಸಂದರ್ಭದಲ್ಲಿ ಸೇವೆಗೈದ ಪೋಲಿಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪುರುಷರ ಸರಿಸಮಾನವಾಗಿ ಮಹಿಳೆಯರು ಬೆಳೆಯುತ್ತಿದ್ದಾರೆ. ಸಚಿವರಾಗಿ, ವಿಜ್ಞಾನಿಯಾಗಿ, ಜಿಲ್ಲಾಧಿಕಾರಿಯಾಗಿ, ಪೋಲಿಸರಾಗಿ, ವೈದ್ಯರಾಗಿ, ಇಂಜಿನಿಯರ್ ಹೀಗೆ ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ಪೋಲಿಸರು ಸ್ತ್ರೀಶಕ್ತಿ ಸ್ವರೂಪ ಹೊಂದಿದ್ದಾರೆ. ಕರೋನಾ ಸಂದರ್ಭದಲ್ಲಿ ಅವರು ನಿರ್ವಹಿಸಿದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿ ಹೊಂದಬೇಕು ಅದಕ್ಕಾಗಿ ಸತತ ಪ್ರಯತ್ನ ಮಾಡಬೇಕು, ಧೈರ್ಯ, ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಬಜೆಟ್ ರಾಜಕೀಯ ಪ್ರಹಸನ: ಎಸ್‌ಯುಸಿಐ
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಚಾರಿ ಸರ್ಕಲ್-೧ ಸಂಚಾರಿ ಮಹಿಳಾ ಪಿಎಸ್‌ಐ ಶ್ರೀಮತಿ ಭಾರತಿಬಾಯಿ ಧನ್ನಿ ಅವರು ಮಾತನಾಡಿ, ಮಹಿಳೆ ಯಾವುದರಲ್ಲಿ ಕಡಿಮೆ ಇಲ್ಲ, ಪುರುಷರಿಗಿಂತ ಹೆಚ್ಚಿನ ಕೆಲಸ ಮಾಡುತ್ತಾರೆ. ಉದ್ಯೋಗ ಮತ್ತು ಮನೆಗೆಲಸ ಎರಡನ್ನು ಸರಿಸಮಾನವಾಗಿ ತೂಗಿಸಿಕೊಂಡು ಹೋಗುತ್ತಾರೆ. ಕರೋನಾ ಸಂದರ್ಭದಲ್ಲಿ ಮಹಿಳಾ ಪೋಲಿಸರು ಬಹಳ ಕೆಲಸ ಮಾಡಿದ್ದಾರೆ. ಶರಣಬಸವೇಶ್ವರ ಸಂಸ್ಥಾನ ಮಹಿಳಾ ಪೋಲಿಸರಿಗೆ ಸನ್ಮಾನ ಮಾಡಿರುವುದು ಎಲ್ಲಾ ಮಹಿಳಾ ಪೋಲಿಸರಿಗೆ ಸನ್ಮಾನ ಮಾಡಿದಂತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಮಹಿಳಾ ಪೋಲಿಸರು ಕರೋನಾ ಸಂದರ್ಭದಲ್ಲಿ ಹಗಲು ರಾತ್ರಿ ಮಾಡಿರುವ ಕೆಲಸ ಎಲ್ಲರೂ ಮೆಚ್ಚುವಂತಹದು. ಕರೋನಾ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದವತಿಯಿಂದ ಪ್ರತಿನಿತ್ಯ ಸಾವಿರಾರು ಜನರಿಗೆ ದಾಸೋಹ ಕಾರ್ಯವಾಗಿದೆ ಎಂದರು.
ತ್ರಿವಿಧದಾಸೋಹಿ ಶ್ರೀ ಮಹಾಂತಪ್ಪಗಳವರು
ಮಹಾವಿದ್ಯಾಲಯ ನ್ಯಾಕ್ ಮತ್ತು ಐಕ್ಯೂಎಸಿ ಸಂಯೋಜಕರಾದ ಡಾ. ಇಂದಿರಾ ಶೆಟಕಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ದಾಕ್ಷಾಯಣಿ ಕಾಡಾಜಿ ನಿರೂಪಿಸಿದರು, ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ ಪ್ರಾರ್ಥಿಸಿದರೆ, ಶ್ರೀಮತಿ ಗೌರಮ್ಮ ಹಿರೇಮಠ ವಂದಿಸಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಿದ್ದಮ್ಮ ಗುಡೇದ್, ಡಾ.ಪುಟ್ಟಮಣಿ ದೇವಿದಾಸ, ಶ್ರೀಮತಿ ಜಾನಕಿ ಹೊಸುರ, ಕೃಪಾಸಾಗರ ಗೊಬ್ಬುರ, ಡಾ.ಸಂಗೀತಾ ಪಾಟೀಲ, ಶ್ರೀಮತಿ ಅನಿತಾ ಕೆ. ಗೊಬ್ಬುರ, ಶ್ರೀಮತಿ ನಿರ್ಮಲಾ ಪಾರಾ, ಶ್ರೀಮತಿ ಅನುಸೂಯಾ ಬಡಿಗೇರ, ಶ್ರೀಮತಿ ಶಶೀಕಲಾ ಪಾರಾ, ಶ್ರೀಮತಿ ಪ್ರಭಾವತಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.