ಸುರಪುರ: ತಾಲೂಕಿನ ಆಲ್ಹಾಳ ಗ್ರಾಮದ ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದರೆನ್ನಲಾದ ಸ್ಫೋಟಕ ವಸ್ತುಗಳನ್ನು ಕಳೆದ ಎರಡು ದಿನಗಳ ಹಿಂದೆ ಕಲಬುರಗಿ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರ ನೇತೃತ್ವದ ಜಿಲ್ಲಾ ಕಲ್ಲು ಗಣಿಗಾರಿಕೆ ನಿಯಂತ್ರಣ ಸಮಿತಿ ಅಧಿಕಾರಿಗಳು ವಲಯದ ನಾಲ್ಕು ಕಲ್ಲು ಗಣಿಗಾರಿಕೆಯ ಕ್ರಶರ್ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀನೆ ನಂತರ ಮಾತನಾಡಿದ ಸಹಾಯಕ ಆಯುಕ್ತರು, ಜಿಲ್ಲೆಯಲ್ಲಿ ಒಟ್ಟು ೧೮ ಕಲ್ಲು ಕ್ರಶರ್ ಘಟಕಗಳಿದ್ದು ಅವುಗಳ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ. ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪರಿಸರ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ಪರಿಶೀಲನೆ ಕಾರ್ಯದಲ್ಲಿ ಭಾಗಿಯಾಗಿದ್ದು ಪ್ರಸ್ತುತ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು.
ಜ್ಲಾನದ ಉತ್ಪಾದನೆ ಮುಹಿಳೆ ಮತ್ತು ಅಸ್ಪೃಶ್ಯರಲ್ಲಿ ಹುಟ್ಟುತ್ತದೆ- ಡಾ. ಶಿವಗಂಗಾ ರುಮ್ಮಾ
ಕಂದಾಯ ಇಲಾಖೆಗೆ ಒಳಪಡುವ ಭೂಮಿಯಲ್ಲಿ ಎಷ್ಟು ಎಕರೆ ಭೂಪ್ರದೇಶದಲ್ಲಿ ಕಾನೂನಿನ ಪ್ರಕಾರ ಕಲ್ಲು ಗಣಿ ಉದ್ಯಮ ನಡೆಯುತ್ತಿದೆ, ಪರಿಸರ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆಯಲಾಗಿದೆಯೆ, ಸ್ಫೋಟಕ ಸಾಮಗ್ರಿಗಳ ವಿಲೆವಾರಿ ಬಗ್ಗೆ, ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಅಂತರ ಎಷ್ಟಿದೆ ಎಂಬಿತ್ಯಾದಿ ಮಾನದಂಡಗಳ ಕುರಿತು ಸಮಗ್ರ ವರದಿ ತಯಾರಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವೆಂಕಟೇಶ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಿರಣ ಹಾಗೂ ವಿಶ್ವನಾಥ, ಸುರಪುರ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಅಪರಾಧ ವಿಭಾಗದ ಪಿಎಸ್‌ಐ ಹಣಮಂತಪ್ಪ, ಎಚ್‌ಸಿ ಶಿವಲಿಂಗ, ಪಿಸಿ ಬೀರಪ್ಪ ಜೊತೆಗಿದ್ದರು.