ಕೈಗಾರಿಕೋದ್ಯಮಕ್ಕೆ ಒತ್ತು ನೀಡಿ ಉದ್ಯೋಗ ಸೃಷ್ಟಿಸಿ: ಪಾಟೀಲ್

1
51

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮಕ್ಕೆ ಒತ್ತು ನೀಡಿ ಹೂಡಿಕೆ, ಬಂಡವಾಳದ ಪ್ರಮಾಣ ಹೆಚ್ಚಿಸಿ ನಿರುದ್ಯೋಗ ನಿವಾರಿಸಲು ಶ್ರಮಿಸುವ ಜವಾಬ್ದಾರಿ ಎಚ್ಕೆಸಿಸಿಐ ಮೇಲಿದೆ ಎಂದು ಎಚ್ಕೆಸಿಸಿಐ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಅಭಿಪ್ರಾಯ ಪಟ್ಟರು.

ನಗರದ ಕಲಾ ಮಂಡಳದಲ್ಲಿ ಹೆಚ್. ಶಿವರಾಮೇಗೌಡರ ಕರವೇ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆ, ವಾಣಿಜ್ಯೋದ್ಯಮ ಮತ್ತು ಅಭಿವೃದ್ಧಿಯ ಕುರಿತು ಚಿಂತನ ಮಂಥನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಜಿಲ್ಲೆಯಲ್ಲಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು, ಅಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಇನ್ನೂ ಆರಂಭವಾಗಿಲ್ಲ. ಈ ಭಾಗದಲ್ಲಿ ಕೈಗಾರಿಕೋದ್ಯಮಿಗಳನ್ನು ಸೆಳೆದು ಕೈಗಾರಿಕೆಗೆ ಉತ್ತೇಜನ ನೀಡುವ ಕೆಲಸ ಹೈದ್ರಾಬಾದ್ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಈಶ್ವರ ಹಿಪ್ಪರಗಿ ಶ್ರೀರಾಮ ಸೇನೆಯ ನೂತನ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕ

ಈ ಭಾಗದ ಜನರು ಸಾಮಾಜಿಕವಾಗಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅತೀ ಹಿಂದುಳಿದಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಎಲ್ಲರೂ ಒಗ್ಗಟ್ಟಾದಾಗ ಮಾತ್ರ ಸಾಧ್ಯ. ಅದಕ್ಕೆ ಪೂರಕವಾಗಿ ನಾನಂತೂ ಸಿದ್ದ. ರೇಲ್ವೆ ವಿಭಾಗೀಯ ಕಚೇರಿ ಕೈ ತಪ್ಪಿರುವುದು ನಮ್ಮೆಲ್ಕರ ದುರಾದೃಷ್ಟ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮರಳಿ ಅದನ್ನು ತರಲು ಪಕ್ಷಾತೀತವಾಗಿ ಮುಂದಾಗಬೇಕು ಎಂದರು.

ಎಚ್ಕೆಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿರುವ ಅಮರನಾಥ ಸಿ.ಪಾಟೀಲ್ ಅವರು ಮಾತನಾಡಿ, ಈ ಬಾರಿಯೂ ಅಧ್ಯಕ್ಷನಾಗಿ ಚುನಾಯಿಸಿದರೆ ರೇಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಈ ಭಾಗದಿಂದ ಕೈ ತಪ್ಪಿರುವ ಜವಳಿ ಪಾರ್ಕ್, ನೀಮ್ಜ್ ಮತ್ತು ಕೇಂದ್ರ, ರಾಜ್ಯ ಸರಕಾರದ ಯೋಜನೆಗಳನ್ನು ತರುವ ಮತ್ತು ಕೈಗಾರಿಕೋದ್ಯಮಕ್ಜೆ ಒತ್ತು ನೀಡುವುದಾಗಿ ಹೇಳಿದರು.

ತಿಂಥಣಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಕಾರ್ಯಾನುಭವ ಕಾರ್ಯಕ್ರಮ

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಇನ್ನೋರ್ವ ಅಭ್ಯರ್ಥಿ ಅರುಣಕುಮಾರ ಲೋಯಾ ಮಾತನಾಡಿ, ಕಳೆದ ಮೂರು ದಶಕಗಳಿಂದ ಸಮಾಜ ಸೇವೆ ಮತ್ತು ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು. ಮತದಾರರು ತಮಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದಲ್ಲಿ ಕೈ ತಪ್ಪಿರುವ ಯೋಜನೆಗಳನ್ನು ವಾಪಸ್ ತರಲು ಅವಿರತವಾಗಿ ಶ್ರಮಿಸಲಾಗುವುದು. ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಾಗಿ ಮರು ನಾಮಕರಣ ಮಾಡುವುದಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿದರು. ವೇದಿಕೆಯ ಮೇಲೆ ಮಾಜಿ ಮಹಾಪೌರ ಶರಣಕುಮಾರ ಮೋದಿ ಇದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ ಅವಿರೋಧವಾಗಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಶರಣು ಪಪ್ಪಾ ಅವರನ್ನು ಅಭಿನಂದಿಸಲಾಯಿತು.

ಕಡ್ಡಾಯವಾಗಿ ಮಾಸ್ಕ್ ಧರಿಸಿ: ಇಲ್ಲದಿದ್ದರೇ 200 ರೂ. ದಂಡ

ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಸಚಿನ್ ಫರತಾಬಾದ್, ಮಲ್ಲಿಕಾರ್ಜುನ ನಿಲೂರ್, ನಾಗಲಿಂಗಯ್ಯ ಮಠಪತಿ, ಬಸವರಾಜ ಬಿರಬಿಟ್ಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here