ಕೆಕೆಆರ್‍ಡಿಬಿ ಅನುದಾನಕ್ಕೆ ಕತ್ತರಿ: ಶಾಸಕ ಅಜಯ್ ಸಿಂಗ್ ಆಕ್ರೋಶ

0
50

ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘಕ್ಕೆ ಕೆಕೆಆರ್‍ಡಿಬಿಯಿಂದಲೇ 100 ಕೋಟಿ ರು. ಅನುದಾನ ನೀಡಿರುವ ಸರ್ಕಾರದ ಕ್ರಮದಿಂದ ಕಲ್ಯಾಣ ಕರ್ನಾಟಕ ಹಕ್ಕಿನ ಅನುದಾನಕ್ಕೆ ಕತ್ತರಿ ಪ್ರಯೋಗವಾದಂತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಖಜಾನೆಗೇ ಕೈ ಹಾಕಿರುವ ಸರ್ಕಾgದ ಕ್ರಮ ಹಿಂದುಳಿದ ನೆಲದವರಿಗೆ ಮಾಡಿರುವ ಬಹುದೊಡ್ಡ ಮೋಸ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.

ಕೆಕೆಆರ್‍ಡಿಬಿಗೆ 1,500 ಕೋಟಿ ರು. ಬದಲು 2,000 ಕೋಟಿ ರು. ಅನುದಾನ ಬೇಕೆಂಬ ಬೇಡಿಕೆ ಇರುವಾಗಲೇ ಕೊಟ್ಟ ಅನುದಾನಕ್ಕೇ ಕತ್ತರಿ ಹಾಕಿರುವುದು ಸರಿಯಲ್ಲ. ಇದರಿಂದ ಕಲ್ಯಾಣದ ಜನರಿಗೇ ಅಪಮಾನ ಮಾಡಿದಂತಾಗಿದೆ.

Contact Your\'s Advertisement; 9902492681

ಬಿಜೆಪಿಯಲ್ಲಿ ಹೆಚ್ಚಿದ ಬಣಗಳ ಕಾದಾಟ: ಡಾ. ಅಜಯ್ ಸಿಂಗ್

ಯೋಜನಾ ಇಲಾಖೆ ಪತ್ರದ ಪ್ರಕಾರ ಕೆಕೆಆರ್‍ಡಿಬಿಗೆ ನೀಡಲಾಗಿರುವ 3ನೇ ಕಂತಿನ 249 ಕೋಟಿ ರು. ಅನುದಾನದಲ್ಲಿ 100 ಕೋಟಿ ರು. ಸಂಘಕ್ಕೆ ನೀಡಲಾಗಿದೆ ಎಂದು ನಮೂದಿಸಲಾಗಿದೆ. 1,131 ಕೋಟಿ ರು.ನಲ್ಲಿಯೇ ಈ ರೀತಿಯ ಖೋತಾ ಆದಲ್ಲಿ ಸರ್ಕಾರವೇ ಹಿಂದುಳಿದ ನೆಲದ ಪ್ರಗತಿಗೆ ಪೆಟ್ಟು ನೀಡಿದಂತಾಗಿದೆ ಎಂದು ಡಾ. ಅಜಯ್ ಸಿಂಗ್ ಕಳವಳ ಹೊರಹಾಕಿದ್ದಾರೆ.

ಸಂಘಕ್ಕೆ ಅನುದಾನ ನೀಡಲಿ, ಆದರೆ ಪ್ರತ್ಯೇಕವಾದಂತಹ ಮೊತ್ತ ಆದಾಗಿರಬೇಕಿತ್ತು. ಬಜೆಟ್ಟಿನಲ್ಲಿ ಂಸಘಕ್ಕೆ 500 ಕೋರು ಪ್ರತ್ಯೇಕ ಅನುಜಾನ ಘೋಷಿಸಲಾಗಿತ್ತು. ಆದರೆ ಈಗ ಕೆಕೆಆರ್‍ಡಿಬಿಯಿಂದಲೇ 100 ಕೋರು ಕಿತ್ತುಕೊಂಡು ಸಂಘಕ್ಕೆ ಕೊಡಲಾಗಿದೆ. ಇಂತಹ ಮರು ಹಂಚಿಕೆಯಿಂದ ಕಲ್ಯಾಣದ ನೆಲದವರಿಗೆ ರೆಗ್ಯುಲರ್ ಬಜೆಟ್ ಬಾರದಂತಾಗಿದೆ. ನಾವು ಮಂಡಳಿಯ ಅನುದಾನದಿಂದಲೂ ವಂಚಿತರಾಗಿz್ದÉೀವೆ. ಇಂತಹ ಹಂಚಿಕೆಯಿಂದ ರೆಗ್ಯುಲರ್ ಬಜೆಟ್ ಹಣದಿಂದಲೂ ವಂಚಿತರಾಗುವಂತಾಗಿದೆ ಎಂದು ಡಾ. ಅಜಯ್ ಸಿಂಗ್ ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿದ್ದಾರೆ.

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಾಟಕಗಳ ಪಾತ್ರ ಬಹಳ ಮುಖ್ಯ

ಮಾನವಾಭಿವೃದ್ಧಿ, ಕೃಷಿ ಕಲ್ಯಾಣದ ಸಂಘ ರಚನೆ ಮಾಡಿ ಹಿರಿಯರಾದಂತಹ ಬಸವರಾಜ ಪಾಟೀಲ್ ಸೇಡಂ ಅವರಿಗೆ ಆ ಜವಾಬ್ದಾರಿ ಸರಕಾರ ವಹಿಸಿಕೊಟ್ಟಿದೆ. ಆದರೆ ಬಜೆಟ್ಟಿನವಲ್ಲಿ ಹೇಳಿದಂತೆ ಸಂಘಕ್ಕೇ ಪ್ರತ್ಯೇಕ ಅನುದಾನ ನೀಡದೆ ಕೆಕೆಆರ್‍ಡಿಬಿಗೇ ಅನುದಾನವನ್ನೇ ಮರು ಹಂಚಿಕೆ ಮಾಡುವ ಮೂಲಕ ಈ ಭಾಗದ ಹಿರಿಯರಿಗೂ ಅಗೌರವ ತೋರಲಾಗಿದೆ. ಕಲ್ಯಾಣದ ಜನತೆಗೂ ಇದರಿಂದ ಅಪಮಾನ ಮಾಡಲಾಗಿದೆ. ಇದನ್ನು ನಾವು ಸಹಿಸೋದಿಲ್ಲವೆಂದು ಡಾ. ಅಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here