ಉಪಚುನಾವಣೆ: ರವಿ ಗಾಯಕ್ವಾಡ ಹೇಳಿಕೆಗೆ ಕಿಶೋರ್ ಗಾಯಕವಾಡ್ ಆಕ್ರೋಶ

0
563

ಬಸವಕಲ್ಯಾಣ: ಹೋರಾಟ ಮಾಡದಿದ್ದರೂ ಪರವಾಗಿಲ್ಲ ಆದರೆ ನೀ ಮಾರಾಟವಾಗಬೇಡ ಎಂಬ ಬಾಬಾಸಾಹೇಬರ ನುಡಿ ಮನದಲ್ಲಿರಿಸಿಕೊಂಡು ನಡೆಯುತ್ತಿದ್ದೇವೆ. ಇಡೀ ದಲಿತ ಜನಾಂಗ ನನ್ನೊಂದಿಗೆ ಇದೆ ಎಂದು ಬಿಜೆಪಿ ಪಕ್ಷ ಸೇರ್ಪಡೆಯಾದ ರವಿ ಗಾಯಕ್ವಾಡ ಅವರ ಹೇಳಿಕೆಯನ್ನು Kpcc ರಾಜ್ಯ ಪ್ರಧಾನ ಕಾರ್ಯದರ್ಶಿ ಅಸಂಘಟಿತ ಕಾರ್ಮಿಕ ವಿಭಾಗದ ಕಿಶೋರ್ ಗಾಯಕವಾಡ್ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ನನ್ನ ಹೋರಾಟದ ರಥ ದೀನದಲಿತರ ಅಭಿವೃದ್ಧಿಯ ರಥ, ಸರ್ವ ಜನಾಂಗದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಾಗೂ ಧಾರ್ಮಿಕ ರಾಜಕೀಯ ಸಮಾನತೆಯ ರಥ, ಮಹಿಳಾ ಹಕ್ಕಿನ ರಥ, ಸ್ವಾಭಿಮಾನ ಚಳುವಳಿಯ ರಥ ಎಳೆಯುವುದಾದರೆ ಕಾಯಾ-ವಾಚಾ-ಮನಸಾ ಪರಿಶುದ್ಧವಾಗಿ ಮುನ್ನಡೆಸಿ. ಆಗದಿದ್ದರೆ ನಿಮ್ಮ ಪಾಡಿಗೆ ನೀವು ಸುಮ್ಮನಿರಿ, ಹೋರಾಟ ಮಾಡದಿದ್ದರೂ ಪರವಾಗಿಲ್ಲ ಆದರೆ ನೀ ಮಾರಾಟವಾಗಬೇಡ ಎಂಬ ಡಾ. ಬಾಬಾಸಾಹೇಬರ ಹೇಳಿಯನ್ನು ಇಲ್ಲಿ ಸ್ಮರಿಸಿದ್ದಾರೆ.

Contact Your\'s Advertisement; 9902492681

ನಳಿನಕುಮಾರ್ ಕಟೀಲ್ ಹೇಳಿಕೆಗೆ ಶಾಸಕ ಖರ್ಗೆ ತಿರುಗೇಟು

ಆರೆಸ್ಸೆಸ್ಸಿನ ಒಂದು ಪೊಲಿಟಿಕಲ್ ವಿಂಗಾದ ಬಿಜೆಪಿಗೆ ನಾವು ಬೆಂಬಲ ನೀಡಲ್ಲ ಮತ್ತು ವೋಟ್ ಹಾಕಲ್ಲ. ಸಂವಿಧಾನವನ್ನು ಸರ್ವನಾಶ ಮಾಡಲು ಹೊರಟಿರುವ ದೇಶದ ಸರಕಾರಿ ಆಸ್ತಿ ಖಾಸಗೀಕರಣ ಮಾಡಿ ರಿಸರ್ವೇಶನ್ ಅನ್ನೋ ಅಸ್ತ್ರ ನೇರವಾಗಿ ಕಡೆದು ಹಾಕಿ sc, st ಹಾಗೂ obc ಜನಾಂಗವನ್ನು ಗುಲಾಮಗಿರಿಗೆ, ಜೀತಕ್ಕೆ ತಳ್ಳುತ್ತಿರುವ ದೀನದಲಿತರಿಗೆ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಲಿಂಗಾಯತ ವಿರೋಧಿ ಬೌದ್ಧ ವಿರೋಧಿ ಪಕ್ಷಕ್ಕೆ ನಾವು ಬೆಂಬಲಿಸಲ್ಲ ಎಂದು ದಲಿತ ಪರವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕೆಲವರು ತಮ್ಮ ಸ್ವಾರ್ಥಕ್ಕೆ ಕೆಲಸ ಆಮಿಷಗಳಿಗೆ ಬಲಿಯಾಗಿ ಬಿಜೆಪಿಗೆ ಹೋಗಿರಬಹುದು. ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬಿದ್ದಿದ್ದಾರೆ. ಆಸೆ-ಆಮಿಷಗಳಿಗೆ ಪಾರ್ಟಿ ಬದಲಿಸುವವರು ಹೆಣದ ಮೇಲಿನ ನೊಣ. ನಾವು ಇಂದಿನ ಪ್ರಸ್ತುತ ಸ್ಥಿತಿ ಶರಣರ ಚಿಂತನೆ ಮತ್ತು ಡಾ. ಬಾಬಾಸಾಹೇಬರ ಹೇಳಿಕೊಟ್ಟ ದಾರಿಯಲ್ಲಿ ನಡೆದು ಸಂವಿಧಾನ ವಿರೋಧಿ ದೇಶದ್ರೋಹಿಗಳನ್ನು ಸೋಲಿಸಿ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುತ್ತೇವೆ ಎಂದು ಸ್ಪಷ್ಟಪಡಿಸಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

‘ಕವಿತೆ ಹಿಂದಿನ ಕಥನ’ ವಿಭಿನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಮಹಿಳಾ ಪ್ರತಿನಿಧಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಲ್ಲಮ್ಮ ಬಿ ನಾರಾಯಣರಾವ್ ಅವರ ಜೊತೆ ಬಸವಕಲ್ಯಾಣ ತಾಲೂಕಿನ ದಲಿತ ಸಮುದಾಯ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಬಿಜೆಪಿ ಹೋಗಿರೋದು ಒಬ್ಬ ವ್ಯಕ್ತಿ ಮಾತ್ರ. ಬಸವಕಲ್ಯಾಣ ದಲಿತ ಸಮಾಜ ಸಮುದಾಯ ಮುಖಂಡರು ಎಲ್ಲರೂ ಕೂಡ ಕಾಂಗ್ರೆಸ್ ಪಕ್ಷದ ಜೊತೆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here