ಒಳಚರಂಡಿ, ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಿಎಂ ಅಸ್ತು: ದರ್ಶನಾಪುರ 

0
62

ಶಹಾಪುರ: ನಗರದಲ್ಲಿ ಒಳಚರಂಡಿ ಮತ್ತು ಭೀಮಾ ನದಿಯಿಂದ ಸನ್ನಿತಿ ಬ್ಯಾರೇಜ್ ಮೂಲಕ ಪೈಪ್‌ಲೈನ್ ಮೂಲಕ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಸುಮಾರು 184.55 ಲಕ್ಷ ಯೋಜನೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಯವರು ಯಾದಗಿರಿ ಜಿಲ್ಲೆ ಚಂಡರಕಿ ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ನಗರದಜನತೆಯ ಬಹುದಿನದ ಬೇಡಿಕೆಯಾದ ಒಳಚರಂಡಿ ಮತ್ತು ಶಾಶ್ವತ ಕುಡಿಯುವ ನೀರಿನ ಬಹು ಕೋಟಿ ಯೋಜನೆಗೆ ಸಿಎಂ ಕುಮಾರಸ್ವಾಮಿಯವರು ಒಪ್ಪಿಗೆ ಸೂಚಿಸಿ ಮುಂದಿನ ಕಾರ್ಯಾಚರಣೆ ನಡೆಸುವಂತೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ನಗರದಲ್ಲಿ ಬಹುದಿನಗಳಿಂದ ಒಳಚರಂಡಿ ಯೋಜನೆ ಜಾರಿಗೆ ತರಬೇಕೆನ್ನುವುದು ಕನಸಿನ ಮಾತಾಗಾತ್ತು. ಆದರೆ ಹಲವಾರು ಅಡಚಣೆಗಳಿಂದ ಈ ಯೋಜನೆಯನ್ನು ಕೈ ಬಿಡಲಾಗಿತ್ತು. ಸಧ್ಯ ನಾಡಿನ ದೊರೆ ಈ ಯೋಜನೆಗೆ ಅಸ್ತು ಎಂದು ಹೇಳಿರುವುದರಿಂದ ಮುಂದಿನ ದಿನಗಳಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿ ಮಾಡುವ ಮೂಲಕ ನಗರದ ಸ್ವಚ್ಛತೆಗೆ ಆಧ್ಯತೆ ನೀಡಬಹುದಾಗಿದೆ.

ಅಲ್ಲದೆ ನಗರಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಹತ್ತಿರದ ಭೀಮಾ ನದಿ ಸನ್ನತಿ ಬ್ಯಾರೇಜ್‌ನಿಂದ ನಗರದ ಫಿಲ್ಟರ್ ಬೆಡ್ ಕೆರೆಗೆ ನೀರು ತುಂಬಿಸುವ ಮೂಲಕ ದಿನಂಪ್ರತಿ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ. ಇದು ಸುಮಾರು 184.55 ಲಕ್ಷ ರೂ. ಯೋಜನೆಯಾಗಿದ್ದು ಈ ಯೋಜನೆಗೆ ಸಿಎಂ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ದಿನದಂದು ನಗರಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here