ಜಿಪಂ, ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ

0
136

ಶಹಾಬಾದ: ರಾಜ್ಯದಲ್ಲಿಯೇ ಅತ್ಯಂತ ಚಿಕ್ಕ ತಾಲೂಕಾ ಎಂದು ಹೆಗ್ಗಳಿಕೆ ಪಡೆದ ಮತ್ತು ಫರ್ಸಿಯ ನಾಡಿಗೆ ಹೆಸರುವಾಸಿಯಾದ ಶಹಾಬಾದ ತಾಲೂಕಿನಲ್ಲಿ ಜಿಪಂ ಕ್ಷೇತ್ರ ೧ರಿಂದ ೨ಕ್ಕೆ ಏರಿದ್ದು, ತಾಪಂ ಕ್ಷೇತ್ರ ೩ ರಿಂದ ೧೧ಕ್ಕೆ ಏರಿಸಿ ರಾಜ್ಯ ಚುನಾವಣಾ ಆಯೋಗ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿದೆ.

ಶಹಾಬಾದ ತಾಲೂಕಿನಲ್ಲಿ ಈ ಮೊದಲು ಕೇವಲ ಒಂದು ಜಿಪಂ ಕ್ಷೇತ್ರವನ್ನು ಹೊಂದಿತ್ತು.ಭಂಕೂರ ಜಿಪಂ ಕ್ಷೇತ್ರವಾಗಿದ್ದರೂ ಶಹಾಬಾದ ಹಾಗೂ ಚಿತ್ತಾಪೂರ ತಾಲೂಕಿನ ಗ್ರಾಮಗಳನ್ನೊಳಗೊಂಡಿತ್ತು.ಪೂರ್ಣ ಪ್ರಮಾಣದ ಗ್ರಾಮಗಳು ಶಹಾಬಾದ ತಾಲೂಕಿನಲ್ಲಿರಲಿಲ್ಲ.ಈಗ ಮರುವಿಂಗಡಣೆ ಮಾಡಿ ಎರಡಕ್ಕೆ ಏರಿಸಿ ಚುನಾವಣಾ ಆಯೋಗ ಅಂತಿಮಗೊಳಿಸಿದೆ.ಅಲ್ಲದೇ ತಾಪಂ ಕ್ಷೇತ್ರ ಕೇವಲ ಮೂರನ್ನು ಹೊಂದಿತ್ತು.ಅದನ್ನು ೧೧ಕ್ಕೆ ಏರಿಸಿ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದ್ದೇ ತಡ ತಾಪಂ ಚುನಾವಣೆಯ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ.ಅಲ್ಲದೇ ಜಿಪಂ ಮತ್ತು ತಾಪಂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತ ಹೋಗುತ್ತಿದೆ.ತಾಪಂ ಸ್ಥಾನಕ್ಕೆ ಹೊಸ ಮುಖಗಳು ಸ್ಪರ್ಧೆಗೆ ಒಡ್ಡಲು ಮುಂದಾಗುತ್ತಿದ್ದಾರೆ.

Contact Your\'s Advertisement; 9902492681

ನಗರಸಭೆಯ ಉಪಚುನಾವಣೆಯಲ್ಲಿ ಗೆಲುವು: ಶಾಸಕ ಮತ್ತಿಮಡುಗೆ ಸನ್ಮಾನ

ಈ ಹೊಸ ತಾಲೂಕು ವ್ಯಾಪ್ತಿಯಲ್ಲಿ ರಾವೂರ ಜಿಪಂ ಕ್ಷೇತ್ರವನ್ನು ಒಂದನ್ನು ಹೆಚ್ಚಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದಾರೆ. ಈ ಮೊದಲು ಭಂಕೂರ ಜಿಪಂ ಕ್ಷೇತ್ರ, ಹೊಸದಾಗಿ ರಚನೆಯಾದ ರಾವೂರ ಜಿಪಂ ಕ್ಷೇತ್ರ ಕೂಡಿ ಎರಡು ಜಿಪಂ ಕ್ಷೇತ್ರ ಶಹಾಬಾದ ತಾಲೂಕಿಗೆ ಒಳಪಟ್ಟಿವೆ. ಆದರೆ ಮೊದಲಿದ್ದ ಭಂಕೂರ ಜಿಪಂ ಕ್ಷೇತ್ರದ ಗ್ರಾಮಗಳು ಅದಲಿ ಬದಲಿಯಾಗಿವೆ.ಇದರಿಂದ ಸ್ಪರ್ಧಾಳುಗಳಿಗೆ ಅಸಮಾಧಾನ ವ್ಯಕ್ತವಾಗಿದೆ. ಈ ಮೊದಲು ಚಿತ್ತಾಪೂರ ತಾಲೂಕಿಗೆ ಒಳಪಟ್ಟ ರಾವೂರ ಕೂಡ ಜಿಪಂ ಮತ್ತು ತಾಪಂ ಕ್ಷೇತ್ರವನ್ನು ಹೊಂದಿತ್ತು.ಇತ್ತಿಚ್ಚಿಗಷ್ಟೇ ಶಹಾಬಾದ ತಾಲೂಕಿಗೆ ಸೇರ್ಪಡೆಯಾಗಿದೆ.

೩ರಿಂದ ೧೧ಕ್ಕೆ ಏರಿದ ತಾಪಂ ಕ್ಷೇತ್ರ : ರಾಜ್ಯ ಚುನಾವಣಾ ಆಯೋಗ ತಾಪಂ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಶಹಾಬಾದ ತಾಲೂಕಿನಲ್ಲಿ ಕೇವಲ ಮೂರು ತಾಪಂ ಕ್ಷೇತ್ರಗಳಿದ್ದವು.ಈಗ ಅದು ೧೧ಕ್ಕೆ ಏರಿದೆ.ಇದರಿಂದ ತಾಲೂಕಿನಲ್ಲಿ ಸ್ಪರ್ಧೆಗೆ ಇಳಿಯುವ ಆಕಾಂಕ್ಷಿಗಳಿಗೆ ಎಲ್ಲಿಲ್ಲದ ಸಂತೋಷ ಉಂಟು ಮಾಡಿದೆ.ಈಗಾಗಲೇ ವಿವಿಧ ರಾಜಕೀಯ ಪಕ್ಷದ ಮುಖಂಡರು ಎಲ್ಲಿ , ಎಷ್ಟು ಕ್ಷೇತ್ರಗಳನ್ನು ಗೆಲ್ಲಬಹುದೆಂಬ ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.

ಬಿಜೆಪಿ ಪ್ರಥಮ ಕಾರ್ಯಕಾರಿಣಿ ಸಭೆ

ತಾಪಂ ಕ್ಷೇತ್ರಗಳು ಹಾಗೂ ಸೇರ್ಪಡೆಯಾದ ಗ್ರಾಮಗಳು :ಭಂಕೂರ(೧) ಕ್ಷೇತ್ರ -ಭಂಕೂರ ಗ್ರಾಮ, ಭಂಕೂರ(೨) ಕ್ಷೇತ್ರ -ಭಂಕೂರ ಗ್ರಾಮ , ಭಂಕೂರ ವಾಡಾ, ಸೇವಾನಗರ (ಮುತ್ತಗಾ) ಕ್ಷೇತ್ರ – ಭಂಕೂರ ವಾಡಾ, ಸೇವಾನಗರ, ಶಂಕರವಾಡಿ ಮತ್ತು ಮುತ್ತಗಾ ಗ್ರಾಮಗಳು, ಮರತೂರ ಕ್ಷೇತ್ರ – ಮರತೂರ ಗ್ರಾಮ ಮಾತ್ರ, ಮುಗುಳನಾಗಾಂವ (ದೇವನತೆಗನೂರ) ಕ್ಷೇತ್ರ- ದೇವನತೆಗನೂರ,ಅಲ್ದಿಹಾಳ, ಮುಗುಳನಾಗಾಂವ,ಮಹಾನಗರ ಗ್ರಾಮಗಳು, ಮಾಲಗತ್ತಿ ಕ್ಷೇತ್ರ- ಮಾಲಗತ್ತಿ ಹಾಗೂ ಜೀವಣಗಿ ಗ್ರಾಮ, ರಾವೂರ ಕ್ಷೇತ್ರ- ರಾವೂರ ಗ್ರಾಮ ಮಾತ್ರ,  ರಾವೂರ(೨) ರಾವೂರ ಗಾಂಧಿ ನಗರ ಕ್ಷೇತ್ರ – ರಾವೂರ ಗಾಂಧಿ ನಗರ ಗ್ರಾಮ, ತೊನಸನಹಳ್ಳಿ(ಎಸ್) ಕ್ಷೇತ್ರ – ತೊನಸನಹಳ್ಳಿ(ಎಸ್) ಮತ್ತು ತರನಳ್ಳಿ ಗ್ರಾಮಗಳು, ಗೋಳಾ(ಕೆ) ಕ್ಷೇತ್ರ- ಗೋಳಾ(ಕೆ) ಮತ್ತು ಹೊನಗುಂಟಾ ಗ್ರಾಮಗಳು, ಹೊನಗುಂಟಾ ಕ್ಷೇತ್ರ- ಹೊನಗುಂಟಾ ಹಾಗೂ ಕಡಿಹಳ್ಳಿ ಗ್ರಾಮಗಳು ಒಳಗೊಂಡಿವೆ.

ಸಚಿವ ಪ್ರಭು ಚವ್ಹಾಣ್ ವಿರುದ್ಧ ಕ್ರಮಕೈ ಆಗ್ರಹ

ಜಿಪಂ ಕ್ಷೇತ್ರ ಹಾಗೂ ಸೇರ್ಪಡೆಯಾದ ಗ್ರಾಮಗಳು: ಭಂಕೂರ ಕ್ಷೇತ್ರ -ಭಂಕೂರ,ಮರತೂರ,ಮುಗುಳನಾಗಾಂವ, ಮಾಲಗತ್ತಿ ಪಂಚಾಯತಿಗಳು, ರಾವೂರ ಕ್ಷೇತ್ರ : ರಾವೂರ, ತೊನಸನಹಳ್ಳಿ(ಎಸ್), ಹೊನಗುಂಟಾ ಪಂಚಾಯತಿಗಳು ಸೇರ್ಪಡೆಗೊಂಡಿವೆ.

ಭಂಕೂರ ಜಿಪಂ ಕ್ಷೇತ್ರಕ್ಕೆ ಆರು ತಾಪಂ ಕ್ಷೇತ್ರಗಳು ಹಾಗೂ ರಾವೂರ ಜಿಪಂ ಕ್ಷೇತ್ರಕ್ಕೆ ಐದು ತಾಪಂ ಕ್ಷೇತ್ರಗಳು ಒಳಗೊಂಡಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here