ಸುರಪುರ ತಾಲೂಕಿನಾದ್ಯಂತ ಸರಳವಾಗಿ ಡಾ: ಬಾಬು ಜಗಜೀವನರಾಮ್ ಜಯಂತಿ ಆಚರಣೆ

0
14

ಸುರಪುರ: ತಾಲೂಕಿನಾದ್ಯಂತ ಅನೇಕ ಕಡೆಗಳಲ್ಲಿ ಮಾಜಿ ಉಪ ಪ್ರಧಾನಿ ಡಾ:ಬಾಬು ಜಗಜೀವನರಾಮ್ ಅವರ ೧೧೪ನೇ ಜಯಂತಿಯನ್ನು ಆಚರಿಸಲಾಯಿತು.

ನಗರದ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಡಾ: ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿ,ದೇಶ ಕಂಡ ಮಹಾನ್ ಧೀಮಂತ ರಾಜಕಾರಣಿ ಎಂದರೆ ಡಾ:ಬಾಬು ಜಗಜೀವನರಾಮ್ ಅವರಾಗಿದ್ದಾರೆ.ದೇಶದಲ್ಲಿನ ದೀನ ದಲಿತರ ಶೋಷಿತರ ಏಳಿಗೆಗೆ ಅನೇಕ ಕೊಡುಗೆಳನ್ನು ನೀಡಿದ ಪುಣ್ಯಪುರುಷರಾಗಿದ್ದಾರೆ.ಅಲ್ಲದೆ ಅವರು ಕೃಷಿಗೆ ಹೆಚ್ಚಿನ ಒತ್ತು ನೀಡಿ ನೀರಾವರಿಯ ಕೊಡುಗೆಯನ್ನು ನೀಡಿದ್ದಾರೆ.ಇಂತಹ ಮಹಾನ್ ಪುರುಷನ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕಿತ್ತು,ಆದರೆ ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ ಕಂದಾಯ ನಿರೀಕ್ಷಕ ಗುರುಬಸಪ್ಪ ಸಿರಸ್ತೆದಾರ ಕೊಂಡಲ ನಾಯಕ ನ್ಯಾಯವಾದಿ ಯಲ್ಲಪ್ಪ ಹುಲಿಕಲ್ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಣಮಂತ ಕಟ್ಟಿಮನಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ದುರ್ಗಪ್ಪ ಬಡಿಗೇರ ಸಂಜೀವಪ್ಪ ಕಟ್ಟಿಮನಿ ಬಿಜೆಪಿ ಮುಖಂಡ ನಾಗರಾಜ ಓಕಳಿ ದಾನಪ್ಪ ಲಕ್ಷ್ಮೀಪುರ ಬಸವರಾಜ ಮುಷ್ಠಳ್ಳಿ ನಾಗರಾಜ ವಡಿಗೇರಿ ಸೇರಿದಂತೆ ಅನೇಕರಿದ್ದರು.

ನಗರದ ಪೊಲೀಸ್ ಠಾಣೆ,ನಗರಸಭೆ ಕಾರ್ಯಾಲಯ,ಸಮಾಜ ಕಲ್ಯಾಣ ಇಲಾಖೆ ಕಚೇರಿ ಹಾಗು ಕುಂಬಾರಪೇಟೆ ಪಾಳದಕೇರಿ ದೀವಳಗುಡ್ಡ ಜಾಂಬವ ನಗರ ಕವಡಿಮಟ್ಟಿ ತಿಂಥಣಿ ಮುಷ್ಠಳ್ಳಿ ಬಾಚಿಮಟ್ಟಿ ಪೇಠ ಅಮ್ಮಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಡಾ:ಬಾಬು ಜಗಜೀವನರಾಮ್ ಅವರ ೧೧೪ನೇ ಜಯಂತಿ ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here